ಕಾಪುವಿಗೆ ತುರ್ತಾಗಿ ಬೇಕು ಅಗ್ನಿಶಾಮಕ ಠಾಣೆ
Team Udayavani, Apr 28, 2018, 7:10 AM IST
ಕಾಪು: ತಾಲೂಕಾಗಿರುವ ಕಾಪುವಿನಲ್ಲಿ ಅಗ್ನಿ ಆಕಸ್ಮಿಕ ಸಹಿತ ಯಾವುದೇ ಅವಘಡಗಳು ಸಂಭವಿಸಿದರೆ ಅದನ್ನು ನಿಯಂತ್ರಿಸಲು ಬೇಕಾಗುವ ಅಗ್ನಿಶಾಮಕ ದಳ ಇಲ್ಲ. ತುರ್ತು ಸೇವೆಗಳಿಗೆ ಉಡುಪಿಯನ್ನೇ ಅವಲಂಬಿಸಬೇಕಾಗುತ್ತಿದ್ದು, ಇದರಿಂದ ಸಾಕಷ್ಟು ಸಮಸ್ಯೆಗಳಾಗುತ್ತಿವೆ.
ಉಡುಪಿ, ಯುಪಿಸಿಎಲ್‌ನಿಂದ ಬರಬೇಕು!
ಕಾಪು ಸುತ್ತಮುತ್ತ ಎಲ್ಲೇ ಆದರೂ ಅವಘಡಗಳು ಸಂಭವಿಸಿದರೆ ರಕ್ಷಣೆಗೆ ಉಡುಪಿ ಅಥವಾ ಯುಪಿಸಿಎಲ್‌ನ ಅಗ್ನಿ ಶಾಮಕ ದಳಗಳೇ ಬರಬೇಕಾಗುತ್ತದೆ. ಆದರೆ ಉಡುಪಿಯಿಂದ ವಾಹನ ಗಳು ಬರುವಷ್ಟರಲ್ಲಿ ಸಾಕಷ್ಟು ಹಾನಿ ಸಂಭವಿಸಿಯಾಗಿರುತ್ತದೆ. ಇತ್ತೀಚಿನ ಹಲವು ಪ್ರಕರಣಗಳಲ್ಲಿ ಈ ಸಮಸ್ಯೆ ಗೋಚರವಾಗಿದೆ.
ಹೊಸ ತಾಲೂಕಿಗೆ ಬೇಕು
ಹೊಸ ತಾಲೂಕು ರಚನೆಯಾಗುತ್ತಿ ದ್ದಂತೆಯೇ ತಾಲೂಕು ಕೇಂದ್ರಕ್ಕೆ ಅಗ್ನಿಶಾಮಕ ಠಾಣೆ ಮಂಜೂರಾಗುತ್ತದೆ. ಕಾಪು ವಿಚಾರದಲ್ಲೂ ಅಗ್ನಿಶಾಮಕ ಠಾಣೆಗೆ ಜಾಗ ಗುರುತಿಸುವಂತೆ ಸುತ್ತೋಲೆ ಬಂದಿದೆ. ಅದರಂತೆ ಜಾಗ ಹುಡುಕುವ ಕಾರ್ಯವೂ ನಡೆಯುತ್ತಿದೆ. ಈಗ ಚುನಾವಣಾ ಸಮಯವಾಗಿರುವುದರಿಂದ ಕೆಲಸದ ಒತ್ತಡ ಮತ್ತು ಚುನಾವಣಾ ನೀತಿ ಸಂಹಿತೆಯೂ ಅದಕ್ಕೆ ಅಡ್ಡಿಯಾಗುತ್ತಿದೆ. ಅತೀ ಶೀಘ್ರದಲ್ಲಿ ಅಗ್ನಿಶಾಮಕ ಠಾಣೆಗೆ ಜಾಗ ಮಂಜೂರು ಮಾಡಿಸಿಕೊಂಡು ಕೆಲಸ ಪ್ರಾರಂಭಿಸಲಾಗುವುದು ಎಂದು ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.
50ಕ್ಕೂ ಹೆಚ್ಚು ಪ್ರಕರಣಗಳು
ಕಾಪು ಮತ್ತು ಪಡುಬಿದ್ರಿ ಸುತ್ತಲಿನ ಪ್ರದೇಶಗಳಲ್ಲಿ ಪದೇ ಪದೇ ಗದ್ದೆ ಮತ್ತು ಕಾಡಿಗೆ ಬೆಂಕಿ, ಇತರ ಅವಘಡಗಳು ಸೇರಿ ಕಳೆದ ಮೂರು ತಿಂಗಳಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ನಡೆದಿವೆ. ಈ ಸಂದರ್ಭ ಕಾಪುವಿನಲ್ಲೇ ಅಗ್ನಿ ಶಾಮಕ ಠಾಣೆಯಿದ್ದಲ್ಲಿ ಹೆಚ್ಚಿನ ನಷ್ಟವನ್ನು ತಪ್ಪಿಸಲು ಸಾಧ್ಯವಿತ್ತು.
ಕಾರಣಾಂತರ ಗಳಿಂದ ಬಾಕಿ
ಅಗ್ನಿಶಾಮಕ ಠಾಣೆಗೆ ಪಡುಬಿದ್ರಿಯಲ್ಲಿ ಈ ಹಿಂದೆಯೇ ಜಿಲ್ಲಾಧಿಕಾರಿಗಳು ಜಾಗ ಮಂಜೂರು ಮಾಡಿದ್ದರು. ಆದರೆ ವಿವಿಧ ಕಾರಣಗಳಿಂದ ಅದು ಬಾಕಿಯಾಗಿದೆ. ಈಗ ಆ ಜಮೀನನ್ನು ಸರಕಾರ ವಾಪಾಸು ಪಡೆದುಕೊಂಡು, ಎಸ್‌ಇಝಡ್‌ಗೆ ನೀಡಿರುವ ಬಗ್ಗೆ ಮಾಹಿತಿ ಲಭ್ಯವಿದೆ. ಕಾಪುವಿನಲ್ಲಿ ಮುಂದೆ ಅಗ್ನಿಶಾಮಕ ಠಾಣೆ ಪ್ರಾರಂಭವಾಗಲಿರುವುದರಿಂದ ಪಡುಬಿದ್ರಿಗೆ ಅದರ ಅಗತ್ಯ ಇರುವುದಿಲ್ಲ.
– ವಸಂತ್ ಕುಮಾರ್,
ಜಿಲ್ಲಾ ಅಗ್ನಿಶಾಮಕ ಅಧಿಕಾರಿ
ಠಾಣೆ ಅತ್ಯಗತ್ಯ ಅವಘಡಗಳ ಸಂಖ್ಯೆ ನೋಡಿದರೆ ಕಾಪುವಿನಲ್ಲಿ ಅಗ್ನಿಶಾಮಕ ಠಾಣೆ ಅತ್ಯಗತ್ಯ. ಸಾರ್ವಜನಿಕರ ಹಿತದೃಷ್ಟಿಯಿಂದ ಅತೀ ಶೀಘ್ರದಲ್ಲಿ ಕಾಪುವಿನಲ್ಲಿ ಅಗ್ನಿಶಾಮಕ ದಳ ಕಾರ್ಯಾಚರಿಸುವಂತಾಗಬೇಕು.
– ಸೂರಿ ಶೆಟ್ಟಿ ಕಾಪು, ನಾಗರಿಕ
– ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.