ಕಾಪು : ಅಧ್ಯಕ್ಷೆರ್ ತುಳು ನಾಟಕಕ್ಕೆ ಮುಹೂರ್ತ, ಕಲಾವಿದರಿಗೆ ಸಮ್ಮಾನ

Team Udayavani, Jul 11, 2021, 2:15 PM IST

ಕಾಪು : ಅಧ್ಯಕ್ಷೆರ್ ತುಳು ನಾಟಕಕ್ಕೆ ಮುಹೂರ್ತ, ಕಲಾವಿದರಿಗೆ ಸಮ್ಮಾನ

ಕಾಪು: ರಂಗತರಂಗ ಕಲಾವಿದರು ಕಾಪು ಇದರ ನೂತನ ನಾಟಕ ಅಧ್ಯಕ್ಷೆರ್ ಇದರ ಶುಭಮುಹೂರ್ತ ಕಾರ್ಯಕ್ರಮವು ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ರವಿವಾರ ನಡೆಯಿತು.‌

ಅಧ್ಯಕ್ಷೆರ್ ನಾಟಕದ ಶುಭ ಮುಹೂರ್ತ ಕಾರ್ಯಕ್ರಮವನ್ನು ಶಾಸಕ ಲಾಲಾಜಿ ಆರ್. ಮೆಂಡನ್ ಉದ್ಘಾಟಿಸಿ, ಶುಭ ಹಾರೈಸಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ಹೊಸಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.‌ ವಾಸುದೇವ ಶೆಟ್ಟಿ ಮಾತನಾಡಿ, ರಂಗತರಂಗ ನಾಟಕ ತಂಡದ ಮೂಲಕವಾಗಿ ಕಾಪುವಿನ ಹೆಸರು ಮತ್ತಷ್ಟು ಪ್ರಚಲಿತಕ್ಕೆ ಬರುವಂತಾಗಿದೆ. ಅಧ್ಯಕ್ಷೆರ್ ನಾಟಕ ಉತ್ತಮವಾಗಿ ಮೂಡಿ ಬರಲಿ, ನಾಟಕದ ಪ್ರಥಮ ಪ್ರದರ್ಶನವನ್ನು ಹೊಸ ಮಾರಿಗುಡಿ ಆವರಣದಲ್ಲಿ ನಡೆಸುವ ಮೂಲಕ ನಾಟಕಕ್ಕೆ ಮತ್ತಷ್ಟು ಪ್ರಚಾರ ದೊರಕಿಸುವ ಪ್ರಯತ್ನ ಮಾಡೋಣ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮಾತನಾಡಿ, ನಾಟಕ ಕಲಾವಿದರ ಜೀವನ‌ ಸಂಕಷ್ಟಕ್ಕೆ ಸಿಲುಕಿದ್ದು, ಪ್ರತೀ ಕಲಾವಿದರಿಗೂ ಸರಕಾರ ವಿಶೇಷ ಪ್ರೋತ್ಸಾಹ ನೀಡುವ ಅಗತ್ಯತವಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸೋಣ ಎಂದರು.

ಕಾಪು ಅಭಿವೃದ್ಧಿ ಸಮಿತಿಯ ಅಧ್ಯಕ್ಷ / ಉದ್ಯಮಿ ಮನೋಹರ್ ಎಸ್. ಶೆಟ್ಟಿ ಮಾತನಾಡಿ, ರಂಗತರಂಗ ತಂಡವು ಕೇವಲ ನಾಟಕ ಪ್ರದರ್ಶನಕ್ಕೆ ಮಾತ್ರಾ ಸೀಮಿತವಾಗಿರದೇ, ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಸಾರುವ ಪ್ರಯತ್ನ ನಡೆಸುತ್ತಿದೆ. ನಾಟಕ ಕಲಾವಿದರು‌ ಮಾತ್ರವಲ್ಲದೇ ರೇಖಾ ಚಿತ್ರಕಲಾವಿದರಿಗೂ ಗೌರವಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಇದನ್ನೂ ಓದಿ: ಇಂಧನ ಬೇಡಿಕೆ ಸುಧಾರಣೆ : ಜೂನ್‌ ನಲ್ಲಿ ಶೇಕಡಾ. 1.5 ರಷ್ಟು ಹೆಚ್ಚಳ..!

ಉದ್ಯಮಿಗಳಾದ ಶ್ರೀಕರ ಶೆಟ್ಟಿ ಕಲ್ಯಾ, ನಯೇಶ್ ಪಿ. ಶೆಟ್ಟಿ, ದಿನೇಶ್ ಶೆಟ್ಟಿ ಕಲ್ಯ ಮುಂಬೈ, ಕಾಪು ಬಂಟರ ಮಹಿಳಾ ಸಂಘದ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ಕಾಪು ತಾಲೂಕು ಪಂಚಾಯತ್ ಮಾಜಿ‌ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಹಾಸ್ಯ ಕಲಾವಿದ ರಾಜೇಶ್ ಅಳಪೆ, ಗ್ರಾಮೀಣ ಪ್ರದೇಶದ ಉದಯೋನ್ಮುಖ ರೇಖಾ ಚಿತ್ರ ಕಲಾವಿದರಾದ ದೀಕ್ಷಿತ್, ಅಲಿ ಮೊಹಮ್ಮದ್ ಅವರನ್ನು ಸಮ್ಮಾನಿಸಲಾಯಿತು.

ರೇಣುಕಾ ಎಸ್. ಜೋಗಿ ಅವರು, ಶರತ್ ಉಚ್ಚಿಲ (ಸಂಗೀತ) ಮತ್ತು ಸಂತು ಸೋನ್ (ಸಾಹಿತ್ಯ) ಅವರ ಸಹಕಾರದೊಂದಿಗೆ ಕೊರಗಜ್ಜ ದೈವದ ಕುರಿತಾಗಿ ಹಾಡಿರುವ ಅಜ್ಜಾ ಈರೇ ನಿಜ ತುಳು ಭಕ್ತಿಗೀತೆಯನ್ನು ಬಿಡುಗಡೆಗೊಳಿಸಲಾಯಿತು.

ರಂಗತರಂಗ ತಂಡದ ಪ್ರಮಖರಾದ ಪ್ರಸನ್ನ ಶೆಟ್ಟಿ ಬೈಲೂರು, ಶರತ್ ಉಚ್ಚಿಲ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಮರ್ವಿನ್ ಶಿರ್ವ, ಸುಜಿತ್ ಶೆಟ್ಟಿ ಕಾಪು ಮತ್ತು ರಂಗತರಂಗ ತಂಡದ ಕಲಾವಿದರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಕಾಪು ರಂಗತರಂಗ ತಂಡದ ಸಂಚಾಲಕ ಕೆ. ಲೀಲಾಧರ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ನವೀನ್ ಚಂದ್ರ ಕೊಪ್ಪ ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

Rajya Sabha: ಕಾಂಗ್ರೆಸ್‌ನ 1 ದೇಶ-2 ಸಂವಿಧಾನ ನೀತಿಗೆ ಅಂತ್ಯ ಹಾಡಿದ್ದೇ ಬಿಜೆಪಿ: ನಡ್ಡಾ

Rajya Sabha: ಕಾಂಗ್ರೆಸ್‌ನ 1 ದೇಶ-2 ಸಂವಿಧಾನ ನೀತಿಗೆ ಅಂತ್ಯ ಹಾಡಿದ್ದೇ ಬಿಜೆಪಿ: ನಡ್ಡಾ

1971 ಯುದ್ಧದ ಚಿತ್ರ ಮಾಣಿಕ್‌ ಷಾ ಕೇಂದ್ರದಲ್ಲಿ ಅಳವಡಿಕೆ: ಸೇನೆ ಹೇಳಿಕೆ

1971 ಯುದ್ಧದ ಚಿತ್ರ ಮಾಣಿಕ್‌ ಷಾ ಕೇಂದ್ರದಲ್ಲಿ ಅಳವಡಿಕೆ: ಸೇನೆ ಹೇಳಿಕೆ

Supreme Court: ಆಡಳಿತ ವಿಳಂಬದಿಂದ ಅಕ್ರಮ ನಿರ್ಮಾಣ ಸಕ್ರಮ ಆಗುವುದಿಲ್ಲ

Supreme Court: ಆಡಳಿತ ವಿಳಂಬದಿಂದ ಅಕ್ರಮ ನಿರ್ಮಾಣ ಸಕ್ರಮ ಆಗುವುದಿಲ್ಲ

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

Election Commission: ಮುಂದಿನ ವಾರವೇ ದಿಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ?

Election Commission: ಮುಂದಿನ ವಾರವೇ ದಿಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ?

ಅಮೆರಿಕದಲ್ಲಿ ಶೂಟೌಟ್‌: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ

New York: ಅಮೆರಿಕದಲ್ಲಿ ಶೂಟೌಟ್‌: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ

ಪ್ರಿಯಾಂಕಾ ವಾದ್ರಾಗೆ ಪ್ರೀತಿ ಜಿಂಟಾ ಟಾಂಗ್‌?: ನೆಟ್ಟಿಗರ ಚರ್ಚೆ

Congress ಪ್ರಿಯಾಂಕಾ ವಾದ್ರಾಗೆ ಪ್ರೀತಿ ಜಿಂಟಾ ಟಾಂಗ್‌?: ನೆಟ್ಟಿಗರ ಚರ್ಚೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Udupi: ಹಾವು ಕಡಿದು ಕೃಷಿಕ ಸಾವು

7-udupi

Request: ಕರಕುಶಲ ಕರ್ಮಿಗಳಿಗೆ ಸಕಾಲದಲ್ಲಿ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸೂಚಿಸಿ

1

Malpe: ತಂತಿಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌; ಹೊತ್ತಿ ಉರಿದ ಗೂಡ್ಸ್‌ ವಾಹನ

missing

Udupi: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

8

Udupi: ಅಂಬಲಪಾಡಿ ಓವರ್‌ಪಾಸ್‌ ಕಾಮಗಾರಿ ಆರಂಭ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

KABADDI-17

Pro Kabaddi: ಮೂರಕ್ಕೇರಿದ ಯುಪಿ ಯೋಧಾಸ್‌

Darren-Sammy

Head Coach: ವೆಸ್ಟ್‌ ಇಂಡೀಸ್‌ ಎಲ್ಲ ಮಾದರಿಗೂ ಡ್ಯಾರನ್‌ ಸಮ್ಮಿ ಕೋಚ್‌

Rajya Sabha: ಕಾಂಗ್ರೆಸ್‌ನ 1 ದೇಶ-2 ಸಂವಿಧಾನ ನೀತಿಗೆ ಅಂತ್ಯ ಹಾಡಿದ್ದೇ ಬಿಜೆಪಿ: ನಡ್ಡಾ

Rajya Sabha: ಕಾಂಗ್ರೆಸ್‌ನ 1 ದೇಶ-2 ಸಂವಿಧಾನ ನೀತಿಗೆ ಅಂತ್ಯ ಹಾಡಿದ್ದೇ ಬಿಜೆಪಿ: ನಡ್ಡಾ

1971 ಯುದ್ಧದ ಚಿತ್ರ ಮಾಣಿಕ್‌ ಷಾ ಕೇಂದ್ರದಲ್ಲಿ ಅಳವಡಿಕೆ: ಸೇನೆ ಹೇಳಿಕೆ

1971 ಯುದ್ಧದ ಚಿತ್ರ ಮಾಣಿಕ್‌ ಷಾ ಕೇಂದ್ರದಲ್ಲಿ ಅಳವಡಿಕೆ: ಸೇನೆ ಹೇಳಿಕೆ

Supreme Court: ಆಡಳಿತ ವಿಳಂಬದಿಂದ ಅಕ್ರಮ ನಿರ್ಮಾಣ ಸಕ್ರಮ ಆಗುವುದಿಲ್ಲ

Supreme Court: ಆಡಳಿತ ವಿಳಂಬದಿಂದ ಅಕ್ರಮ ನಿರ್ಮಾಣ ಸಕ್ರಮ ಆಗುವುದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.