ಧಿಕ್ಕಾರ, ಜೈಕಾರದ ನಡುವೆ ಕಾರಂತ ಹುಟ್ಟೂರ ಪುರಸ್ಕಾರ ಪ್ರದಾನ
Team Udayavani, Oct 11, 2017, 7:39 AM IST
ಕೋಟ: ಚಿತ್ರ ನಟ ಪ್ರಕಾಶ ರೈ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ಭಾರೀ ವಿವಾದಕ್ಕೆ ಎಡೆ ಮಾಡಿದ್ದ “ಕಾರಂತ ಹುಟ್ಟೂರ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ಧಿಕ್ಕಾರ, ಜೈಕಾರಗಳ ನಡುವೆ ಮಂಗಳವಾರ ಕೋಟ ಕಾರಂತ ಭವನದಲ್ಲಿ ನೆರವೇರಿತು.
ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದ ಸಾಮರಸ್ಯ ಕದಡುವ ಯತ್ನ ಮಾಡಿರುವ ಪ್ರಕಾಶ್ ರೈ ಅವರು ಶಿವರಾಮ ಕಾರಂತ ಹೆಸರಿನ ಪ್ರಶಸ್ತಿಗೆ ಅರ್ಹರಲ್ಲ ಎಂದು ಹೇಳಿ ಬಿಜೆಪಿ, ಹಿಂದೂ ಜಾಗರಣ ವೇದಿಕೆ ಸಹಿತ ಹಿಂದೂಪರ ಸಂಘಟನೆಗಳು ಹಾಗೂ ಹಲವು ಸಂಘ- ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಪ್ರತಿಭಟನೆ, ಮೆರವಣಿಗೆ
ಪ್ರಶಸ್ತಿ ಸ್ವೀಕರಿಸಲು ಆಗಮಿಸುವುದಕ್ಕಿಂತ ಮುಂಚಿತ ವಾಗಿ ಪ್ರತಿಭಟನಕಾರರು ಕೋಟದ ಬೇರೆ- ಬೇರೆ ಕಡೆಗಳಲ್ಲಿ ಗುಂಪು ಸೇರಿ ದ್ದರು. ಅನಂತರ ಕೆಲವರು ಕೋಟತಟ್ಟು ಗ್ರಾ.ಪಂ. ಎದುರಿನ ಪ್ರವೇಶ ದ್ವಾರದಲ್ಲಿ ಜಮಾ ಯಿಸಿ ದರು. ಈ ಸಂದರ್ಭ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಜೈ ಭಾರ್ಗವ ಸಂಘಟನೆಯವರು ಮತ್ತು ಹಿಂದೂ ಜಾಗರಣ ವೇದಿಕೆಯವರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಅಖೀಲ ಕರ್ನಾಟಕ ಜೋಗಿ ಸಮಾಜ ಸೇವಾ ಸಮಿತಿ ಸದಸ್ಯರು ಕೋಟ ಅಮೃತೇಶ್ವರೀ ದೇವಸ್ಥಾನದಿಂದ ಕೋಟತಟ್ಟು ಗ್ರಾ.ಪಂ. ಮುಖ್ಯ ದ್ವಾರದ ತನಕ ಮೌನ ಪ್ರತಿಭಟನೆ ನಡೆಸಿದರು.
ಅವಕಾಶ ನಿರಾಕರಣೆ
ಬಿಜೆಪಿ ಮುಖಂಡರು ಕೂಡ ಪ್ರತ್ಯೇಕ ಪ್ರತಿ ಭಟನೆ ನಡೆಸಿದರು. ಪ್ರಕಾಶ್ ರೈ ಆಗಮಿಸುವ ಸಂದರ್ಭ ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ನೀಡುವಂತೆ ಪೊಲೀಸರಲ್ಲಿ ಸಂಘಟನೆಗಳ ಪ್ರಮುಖರು ವಿನಂತಿಸಿದರು. ಆದರೆ ಪೊಲೀಸರು ಅವಕಾಶ ನಿರಾಕರಿಸಿದಾಗ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಬಸ್ ಮೂಲಕ ಕರೆದೊಯ್ದರು.
ಕರ್ನಾಟಕ ಜೋಗಿ ಸೇವಾ ಸಮಿತಿ ಅಧ್ಯಕ್ಷ ಕೇಶವ ಕೋಟೇಶ್ವರ, ಯಡಮೊಗೆ ಹಳವರಿ ಮಠದ ಶ್ರೀ ಜಗದೀಶನಾಥ ಸ್ವಾಮಿಜಿ, ಜೈ ಭಾರ್ಗವ ಸಂಘಟನೆಯ ಸಂಚಾಲಕ ಅಜಿತ್ ಶೆಟ್ಟಿ ಕಿರಾಡಿ, ಬಿಜೆಪಿ ಮುಖಂಡ ಯಶಪಾಲ್ ಸುವರ್ಣ, ನವೀನ್ ಶೆಟ್ಟಿ ಕುತ್ಯಾರು, ಕಾಡೂರು ಸುರೇಶ ಶೆಟ್ಟಿ, ಶಿವರಾಮ ಉಡುಪ ಸಾಲಿಗ್ರಾಮ ಹಾಗೂ ಹಿಂದೂ ಸಂಘಟನೆಯ ರತ್ನಾಕರ ಬಾರಿಕೆರೆ, ಶಂಕರ್ ಕೋಟ, ಅವಿನಾಶ್ ಮುಂತಾದವರನ್ನು ವಶಕ್ಕೆ ಪಡೆಯಲಾಯಿತು.
ಕಣ್ತಪ್ಪಿಸಿ ಬಂದ ಪ್ರತಿಭಟನಕಾರರು !
ರೈ ಅವರು ಪ್ರಶಸ್ತಿ ಪಡೆಯಲು ಕಾರಂತ ಭವನ ಒಳಪ್ರವೇಶಿಸುತ್ತಿದ್ದಂತೆ ಬಿಗು ಪೊಲೀಸ್ ಬಂದೋಬಸ್ತಿನ ನಡುವೆಯೂ ಕೆಲವು ಮಂದಿ ಪ್ರತಿಭಟನಕಾರರು ಕಾರಂತ ಭವನದ ಪಕ್ಕದ ಹಿಂದಿನ ರಸ್ತೆಯಲ್ಲಿ ಜಮಾಯಿಸಿ ಕಪ್ಪು ಬಾವುಟ ಪ್ರದರ್ಶಿಸಿ, ರೈ ಅವರಿಗೆ ಈ ಪ್ರಶಸ್ತಿ ಪಡೆಯುವ ಯಾವುದೇ ಅರ್ಹತೆ ಇಲ್ಲ ಎಂದು ಧಿಕ್ಕಾರ ಕೂಗಿದರು. ಅನಂತರ ಪೊಲೀಸರು ಗುಂಪನ್ನು ಚದುರಿಸಿದರು.
ರೈಗೆ ಹಲವು ಸಂಘಟನೆಗಳ ಬೆಂಬಲ
ಈ ಸಂದರ್ಭ ಜಿಲ್ಲೆಯ ಹಲವು ಸಂಘಟನೆ ಗಳು ಪ್ರಕಾಶ್ ರೈ ಅವರಿಗೆ ಬೆಂಬಲ ವ್ಯಕ್ತಪಡಿಸಿ ಪುಷ್ಪಗುತ್ಛ ನೀಡಿ ಬರಮಾಡಿಕೊಂಡರು.
ಕಪ್ಪು ಬಟ್ಟೆ ಧರಿಸಿ ಬಂದ ರೈ !
ಕಪ್ಪು ಬಟ್ಟೆ, ಕಪ್ಪು ವಸ್ತುಗಳನ್ನು ಹಿಡಿದವರಿಗೆ ಪೊಲೀಸರು ಪ್ರವೇಶ ನಿರಾಕರಿಸಿದ್ದರು. ಪ್ರಶಸ್ತಿ ಸ್ವೀಕರಿಸಲು ಬಂದ ಪ್ರಕಾಶ್ ರೈ ಅವರು ಕೂಡ ಕಪ್ಪು ಬಟ್ಟೆ ಧರಿಸಿರುವುದನ್ನು ಕಂಡ ಪ್ರತಿಭಟನ ಕಾರರು “ರೈ ಅವರೇ ಕಪ್ಪು ಬಟ್ಟೆ ಧರಿಸಿದ್ದಾರೆ; ಅವರ ಜತೆ ನಮ್ಮನ್ನೂ ಒಳಬಿಡಿ’ ಎಂದು ಪೊಲೀಸರಲ್ಲಿ ತಮಾಷೆಯಾಗಿ ಕೇಳಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!
Mangaluru: ನಿರ್ವಹಣೆ ಇಲ್ಲದೆ ಆಕರ್ಷಣೆ ಕಳೆದುಕೊಂಡ ಜಿಂಕೆ ವನ
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.