ಆಗಸ್ಟ್ 20ರಂದು ಉಡುಪಿಯಲ್ಲಿ ಪಿ.ಸಾಯಿನಾಥ್ ಉಪನ್ಯಾಸ
Team Udayavani, Aug 16, 2017, 10:15 AM IST
ಉಡುಪಿ: ಹಿರಿಯ ಪತ್ರಕರ್ತ, ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ಪಾಲಗುಮ್ಮಿ ಸಾಯಿನಾಥ್ ಅವರು ಆ. 20 ರಂದು ಉಡುಪಿಯಲ್ಲಿ ತಲ್ಲೂರು ನುಡಿಮಾಲೆ ದತ್ತಿನಿಧಿ ಉಪನ್ಯಾಸ ನೀಡಲಿದ್ದಾರೆ ಎಂದು ಸಂಘಟಕ ತಂಡದ ಡಾ| ಪಿ.ವಿ. ಭಂಡಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಲ್ಲೂರು ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕರಾವಳಿ ಕಟ್ಟು ಸರಣಿಯ ಉಪನ್ಯಾಸ ಮಾಲಿಕೆ ಇದಾಗಿದ್ದು, ಉಡುಪಿಯ ಪುರಭವನದಲ್ಲಿ ಆ. 20 ರ ಬೆಳಗ್ಗೆ 10 ಗಂಟೆಗೆ ‘ಡಿಜಿಟಲ್ ಯುಗದಲ್ಲಿ ಗ್ರಾಮೀಣ ಭಾರತದ ಕಥನ’ ಎನ್ನುವ ವಿಷಯದ ಕುರಿತು ಸಾಯಿನಾಥ್ ಮಾತನಾಡಲಿದ್ದಾರೆ.
ಬಳಿಕ ಹಿರಿಯ ಪತ್ರಕರ್ತ ಜಿ. ಎನ್. ಮೋಹನ್ ಅವರು ಸಾಯಿನಾಥ್ ಜತೆ ಸಂವಾದ ನಡೆಸಿಕೊಡಲಿದ್ದು, ಹಿರಿಯ ಪತ್ರಕರ್ತ ನಾಗೇಶ ಹೆಗಡೆ, ಅರ್ಥಶಾಸ್ತ್ರಜ್ಞ, ಕಥೆಗಾರ ಪ್ರೊ| ಎಂ. ಎಸ್. ಶ್ರೀರಾಮ್, ಅಜೀಂ ಪ್ರೇಂಜಿ ವಿವಿ.ಯ ಉಪನ್ಯಾಸಕ ಡಾ| ನಾರಾಯಣ ಎ. ಪಾಲ್ಗೊಳ್ಳಲಿದ್ದಾರೆ ಎಂದರು.
ಭಾರತದಲ್ಲಿ ಅಭ್ಯುದಯ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿರುವ ಸಾಯಿನಾಥ್ ಅವರು ರೈತರ ಸಂಕಟ, ಸವಾಲುಗಳನ್ನು ರಾಷ್ಟ್ರೀಯ ಸಮಸ್ಯೆ ಎಂದು ಬಿಂಬಿಸಿದವರು. ಈ ಉಪನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ಡಾ| ರಾಬರ್ಟ್ ಜೋಸ್, ರಾಜಾರಾಂ ತಲ್ಲೂರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಉದಯವಾಣಿ. ಕಾಂ ಫೇಸ್ ಬುಕ್ ಪುಟದಲ್ಲಿ ವೀಕ್ಷಿಸಬಹುದಾಗಿರುತ್ತದೆ,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.