ಸಾಹಸ ಸಂಗತಿ : ಕಾಂಚನಜುಂಗಾ ಶಿಖರವೇರಿದ ಹರ್ಷದ್‌ ರಾವ್‌


Team Udayavani, Jun 15, 2018, 4:30 AM IST

ಕುಂದಾಪುರ: ಪರ್ವತಾಹರೋಹಣ ಮಾಡುವುದು ಕೆಲವರಿಗೊಂದು ಹವ್ಯಾಸ. ಅದರಲ್ಲೂ ಹಿಮಪ್ರದೇಶಗಳಲ್ಲಿ ಶಿಖರವೇರುವುದು ಅಸಾಮಾನ್ಯ ಸಾಧನೆಯೇ ಸರಿ. ಕುಂದಾಪುರದ ಆರ್ಡಿ ಮೂಲದವರಾದ ಹರ್ಷದ್‌ ರಾವ್‌ ಅವರು ಅಂತಹುದೇ ಒಂದು ಸಾಧನೆಯನ್ನು ಈಗ 28,169 ಅಡಿ ಎತ್ತರದ ಕಾಂಚನಜುಂಗಾ (ಕಾಂಚನಗಂಗಾ- ಕೆ-2) ಪರ್ವತವೇರುವ ಮೂಲಕ ಮಾಡಿದ್ದಾರೆ.

2016ರಲ್ಲಿ ವಿಶ್ವದ ಅತೀ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರವೇರಿದ್ದ 29ರ ಹರೆಯದ ಹರ್ಷದ್‌ ರಾವ್‌ ಅವರು ಈ ವರ್ಷದ ಮೇ 20ಕ್ಕೆ ಭಾರತದ ಅತೀ ಎತ್ತರದ ಪರ್ವತವಾಗಿರುವ ಸಿಕ್ಕಿ ರಾಜ್ಯ ಹಾಗೂ ನೇಪಾಳ ದೇಶದ ಮಧ್ಯೆ ಬರುವ ಕಾಂಚನಜುಂಗಾವನ್ನು ಏರುವ ಮೂಲಕ ಭಾರತದ ಶ್ರೇಷ್ಠ ಪರ್ವತಾರೋಹಿತಗಳ ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಹರ್ಷದ್‌ ರಾವ್‌ ಅವರು ಸದ್ಯ ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿದ್ದು, ಆರ್ಡಿಯ ಕಮಲಾಕ್ಷ ರಾವ್‌ ಹಾಗೂ ಹೇಮಲತಾ ರಾವ್‌ ದಂಪತಿಯ ಪುತ್ರ.

2014ರ ಅನಂತರ ಮೊದಲಿಗರು
2014ರ ಅನಂತರ ಕಾಂಚನ ಜುಂಗಾ ಶಿಖರವೇರುತ್ತಿರುವವರ ಪೈಕಿ ಹರ್ಷದ್‌ ಮೊದಲಿಗರು. ಕಾರಣ ಕಾಂಚನಜುಂಗಾ ಶಿಖರವೇರಲು ಹಲವು ಮಂದಿ ಪ್ರಯತ್ನಪಟ್ಟರೂ ಕೂಡ ಯಾರೂ ಅದರಲ್ಲಿ ಸಫಲತೆ ಕಂಡಿರಲಿಲ್ಲ. 2016ರಲ್ಲಿಯೂ ಅನೇಕ ಮಂದಿ ಪರ್ವತಾವೇರಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ.


ಎವರೆಸ್ಟ್‌ಗಿಂತ ಯಾಕೆ ಕೆ-2 ಕಷ್ಟ?

ಪರ್ವತಾರೋಹಣದಲ್ಲಿ ಯಾವಾಗಲೂ ಸವಾಲು ಹವಾಮಾನ. ಮಂಜುಗಡ್ಡೆ ಯಾವಾಗ ಕರಗುತ್ತದೋ ಗೊತ್ತಾಗುವುದಿಲ್ಲ. ಎವರೆಸ್ಟ್‌ಗೆ ಏರಿದಾಗಲೂ ಆಕ್ಸಿಜನ್‌ ರೆಗ್ಯುಲೇಟರ್‌ ಕೈ ಕೊಟ್ಟಿತ್ತು. ಆದರೂ ಬೇರೆಯವರ ಸಹಾಯದಿಂದ ಶಿಖರವೇರಿದ್ದರು. ಕೆ-2 ನಲ್ಲೂ ಅದೇ ರೀತಿ ಆಕ್ಸಿಜನ್‌ ಸಮಸ್ಯೆ ಕಾಡಿತ್ತು. ಶಿಖರವೇರುವಾಗ 4 ಹಂತಗಳಿದ್ದು, ಅದರಲ್ಲಿ ಕೊನೆಯ ಸಮ್ಮಿಟ್‌ (ಮುಕ್ತಾಯ) ಎನ್ನುವ ಹಂತದಿಂದ ಕೆ-2ನ ತುತ್ತತುದಿಗೆ 1,200 ಮೀ. ಎತ್ತರವಿದ್ದರೆ, ಅದೇ ಎವರೆಸ್ಟ್‌ನಲ್ಲಿ ಇದು ಸುಮಾರು 300 ಮೀ. ಎತ್ತರದ ಕಡಿಮೆ ಇರುತ್ತದೆ. ಆ ಕಾರಣದಿಂದ ಕೆ-2 ಶಿಖರವೇರುವುದು ತ್ರಾಸದಾಯಕ ಎಂದು ಹರ್ಷದ್‌ ತಮ್ಮ ಪರ್ವತಾರೋಹಣದ ಅನುಭವವನ್ನು ಬಿಚ್ಚಿಡುತ್ತಾರೆ. ಹರ್ಷದ್‌ ರಾವ್‌ ಅವರು ವಿಶ್ವದ ಎರಡು ಶ್ರೇಷ್ಠ ಶಿಖರಗಳನ್ನು ಏರಿ, ಅಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದು, ಕರಾವಳಿಗರಿಗೆ ಮಾತ್ರವಲ್ಲದೆ, ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ.

ಎವರೆಸ್ಟ್‌ಗಿಂತ ಕೆ-2ಗೇರುವುದು ಕಷ್ಟ
12 ಗಂಟೆ ಶಿಖರವೇರಿ, 13 ಗಂಟೆ ಅವರೋಹಣ ಮಾಡುವುದು ತ್ರಾಸದಾಯಕವಾದ ಕೆಲಸ. ನಾನು ಒಂದು ಹಂತದಲ್ಲಿ ಸಂಪೂರ್ಣ ಬಸವಳಿದು ಹೋಗಿದ್ದೆ. ಆದರೂ ಗುರಿ ತಲುಪಿ ತ್ರಿವರ್ಣ ಧ್ವಜವನ್ನು ಕಾಂಚನಜುಂಗಾದ (ಕೆ-2) ತುತ್ತತುದಿಯಲ್ಲಿ ಹಾರಿಸಿದ್ದು, ಆ ಎಲ್ಲ ಆಯಾಸ, ಬಳಲಿಕೆಯನ್ನು ತಿಳಿಗೊಳಿಸಿತು. ಮೌಂಟ್‌ ಎವರೆಸ್ಟ್‌ ವಿಶ್ವದ ಎತ್ತರದ ಶಿಖರವಾಗಿದ್ದರೂ, ಕಾಂಚನಜುಂಗಾವನ್ನು ಹತ್ತುವುದು ಅಷ್ಟು ಸುಲಭವಲ್ಲ.
– ಹರ್ಷದ್‌ ರಾವ್‌

— ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

complaint

Kundapura: ಹಲ್ಲೆ, ಗಾಯ; ದೂರು ದಾಖಲು

byndoor

Kundapura: ಪ್ರತ್ಯೇಕ ಅಪಘಾತ ಪ್ರಕರಣ; ಗಾಯ

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

7

Malpe: ಫಿಶರೀಸ್‌ ಕಾಲೇಜು ಆವರಣ ಕೊಳಚೆ ಮುಕ್ತಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

15

Mangaluru: ಚಿನ್ನದ ಬಿಸ್ಕೆಟ್‌ ಇದೆ ಎಂದು ನಂಬಿಸಿ 4 ಲಕ್ಷ ರೂ. ವಂಚನೆ

ssa

Mangaluru: ಮಾದಕ ವಸ್ತು ಸೇವನೆ; ಯುವಕ ವಶಕ್ಕೆ

complaint

Kundapura: ಹಲ್ಲೆ, ಗಾಯ; ದೂರು ದಾಖಲು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

byndoor

Kundapura: ಪ್ರತ್ಯೇಕ ಅಪಘಾತ ಪ್ರಕರಣ; ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.