ಕಾರ್ಕಳ: ಸಂಭ್ರಮದ ಲಕ್ಷ ದೀಪೋತ್ಸವ ಸಂಪನ್ನ
Team Udayavani, Nov 20, 2019, 5:16 AM IST
ಕಾರ್ಕಳ: ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ನ. 18ರಂದು ಸಂಭ್ರಮ ಸಡಗರದೊಂದಿಗೆ ಜರಗಿತು. ದೀಪೋತ್ಸವದಲ್ಲಿ ಊರ-ಪರವೂರ ಅಸಂಖ್ಯಾತ ಭಕ್ತರು ಭಾಗವಹಿಸಿ ಪುನೀತರಾದರು.
ಶ್ರೀ ವೆಂಕಟರಮಣ ದೇವರ ಮೂರ್ತಿಯನ್ನು ಪಲ್ಲಕ್ಕಿ ಹಾಗೂ ಚಪ್ಪರ ಶ್ರೀನಿವಾಸ ದೇವರನ್ನು ಬಂಗಾರದ ಮಂಟಪದಲ್ಲಿ ಕುಳ್ಳಿರಿಸಿ, ರಥಬೀದಿಯಾಗಿ ಅನಂತ ಶಯನದಿಂದ ವನಭೋಜನಕ್ಕೆ ಉತ್ಸವ ಮೂಲಕ ತೆರಳಲಾಯಿತು. ಅಲ್ಲಿ ಉಭಯ ದೇವರಿಗೆ ಪಂಚಾಮೃತಾಭಿಷೇಕ, ಮಹಾನೈವೇದ್ಯ, ಮಂಗಳಾರತಿ ನೆರವೇರಿತು.
ಸಾವಿರಾರು ಭಕ್ತರಿಂದ ಪ್ರಸಾದ ಸ್ವೀಕಾರ
ವನಭೋಜನದಲ್ಲಿ ಸಾವಿರಾರು ಭಕ್ತರು ಅನ್ನಸಂಪರ್ತಣೆ ಪ್ರಸಾದ ಸ್ವೀಕರಿಸಿದರು. ಬಳಿಕ 9 ಗಂಟೆಯ ವೇಳೆಗೆ ದೇವರ ಮೂರ್ತಿ ಪಲ್ಲಕ್ಕಿ ಹಾಗೂ ಬಂಗಾರದ ಮಂಟಪದಲ್ಲಿ ಮೆರವಣಿಗೆ ಮಣ್ಣಗೋಪುರಕ್ಕೆ ಸಾಗಿತು. ಉತ್ಸವದ ವೇಳೆ ರಥಬೀದಿಯಲ್ಲಿನ ಮನೆಯವರು ದೇವರಿಗೆ ಹಣ್ಣು ಕಾಯಿ ಅರ್ಪಿಸಿ, ಆರತಿಸೇವೆಗೈದರು. ಮುಂಜಾನೆ 2 ಗಂಟೆ ತನಕ ಸಾವಿರಾರು ಭಜಕರು ದೇವರ ದರ್ಶನ ಪಡೆದು ಕೃತಾರ್ಥರಾದರು. ಪಲ್ಲಕ್ಕಿಯಲ್ಲಿ ಸಾಗುವ ವೆಂಕಟರಮಣ ದೇವರಿಗೆ ಕುರಿಂದ ಕಟ್ಟೆಯಲ್ಲಿ ಪೂಜೆ ನೆರವೇರಿಸಲಾಯಿತು. ಬಳಿಕ ಉಭಯ ದೇವರು ಹನುಮಾನ್ ದೇವಸ್ಥಾನಕ್ಕೆ ಅಲ್ಲಿಂದ ವೆಂಕಟರಮಣ ದೇಗುಲಕ್ಕೆ ಆಗಮಿಸಿತು.
ಇಂದು ಅವಭೃತ ಓಕುಳಿ
ಮಂಗಳವಾರ ಅಪರಾಹ್ನ 3.30ರಿಂದ ಅವಭೃತ ಓಕುಳಿ ನಡೆಯಲಿದೆ. ಈ ವೇಳೆ ಪಟ್ಟದ ಶ್ರೀನಿವಾಸ ದೇವರು ಹಾಗೂ ಶ್ರೀ ವೆಂಕಟರಮಣ ದೇವರು ಬಂಗಾರದ ಒಂದೇ ಪಲ್ಲಕ್ಕಿಯಲ್ಲಿ ದೇವಸ್ಥಾನದಿಂದ ಅವಭೃತ ಉತ್ಸವದಲ್ಲಿ ರಾಮಸಮುದ್ರಕ್ಕೆ ತೆರಳಿ ಅವಭೃತ ಸ್ನಾನವಾಗಲಿದೆ. ಅಲ್ಲಿಂದ ದೇವರು ಅನಂತಶಯನ ಪದ್ಮಾವತಿ ದೇವಸ್ಥಾನಕ್ಕೆ ಬಂದು ಆರತಿಯಾದ ಬಳಿಕ ಉತ್ಸವದಲ್ಲಿ ವೆಂಕರಮಣ ದೇಗುಲಕ್ಕೆ ಕೊಂಡೊಯ್ಯಲಾಗುತ್ತದೆ. ಬಳಿಕ ರಾತ್ರಿ ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.