ಕಾರ್ಕಳ: 24 ಪಲ್ಲಕ್ಕಿಯಲ್ಲಿ ಭವ್ಯ ಮಂಗಳ ಶೋಭಾಯಾತ್ರೆ
Team Udayavani, Aug 19, 2018, 6:10 AM IST
ಕಾರ್ಕಳ: ಪರಮಪೂಜ್ಯ 108 ಮುನಿಶ್ರೀ ವೀರಸಾಗರ ಮಹಾರಾಜರ ಭವ್ಯಮಂಗಲ ಚಾತುರ್ಮಾಸ ಹಿನ್ನೆಲೆಯಲ್ಲಿ 1008ನೇ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಮೋಕ್ಷ ಕಲ್ಯಾಣ ಕಾರ್ಯಕ್ರಮದ ಪ್ರಯುಕ್ತ ಭವ್ಯಮಂಗಲ ಶೋಭಾಯಾತ್ರೆ ಆ. 18ರಂದು ನಗರದಲ್ಲಿ ನಡೆಯಿತು.
ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಿಂದ ಹೊರಟ ಶೋಭಾಯಾತ್ರೆ ಆನೆಕೆರೆ, ಮೂರು ಮಾರ್ಗ, ಬಸ್‌ನಿಲ್ದಾಣದಿಂದ ಅನಂತಶಯನ ಮಾರ್ಗವಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಾಹುಬಲಿ ಪ್ರಚನಮಂದಿರಕ್ಕೆ ಸಾಗಿತು. ಅದಕ್ಕೂ ಮೊದಲು ಮುಂಜಾನೆ ಹಿರಿಯಂಗಡಿ ಗುರುಬಸದಿಯಿಂದ ತೀರ್ಥಂಕರರ ಜಿನಬಿಂಬಗಳನ್ನು ಬಾಹುಬಲಿ ಪ್ರವಚನ ಮಂದಿರಕ್ಕೆ ಕೊಂಡೊಯ್ದು ಅಭಿಷೇಕ ಮಾಡಲಾಯಿತು.
24 ತೀರ್ಥಂಕರರ ಜಿನಬಿಂಬಗಳನ್ನು 24 ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ವಿವಿಧ ಸ್ತೋತ್ರ, ಜಿನವಾಣಿ, ಘೋಷಣೆಗಳ ಮೂಲಕ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಹೊರಜಿಲ್ಲೆಗಳ ಜನಪದೀಯ ಕಲಾ ತಂಡಗಳ ನೃತ್ಯಗಳು, ಡೋಲು, ವಾದ್ಯ, ಬ್ಯಾಂಡ್‌ಸೆಟ್ ಮೊದಲಾದ ಕಲಾ ಪ್ರಕಾರಗಳು ಮತ್ತಷ್ಟು ಮೆರುಗು ನೀಡಿತು.
ಹರಿದು ಬಂದ ಭಕ್ತಸಾಗರ
ಕರಾವಳಿ ಭಾಗದ ಸಾವಿರಾರು ಭಕ್ತರು ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.ಜತೆಗೆ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮಂಗಳೂರು ಮಾತ್ರವಲ್ಲದೇ ಉಡುಪಿ ಜಿಲ್ಲೆಯ ವಿವಿಧ ಭಾಗಗಳ ಸಾವಿರಾರು ಮಂದಿ ಶ್ರಾವಕ, ಶ್ರಾವಕಿಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.