ಕಾರ್ಕಳ: ಕೆರೆಗೆ ಸ್ನಾನ ಮಾಡಲು ಹೋದ ಇಬ್ಬರು ನೀರುಪಾಲು
Team Udayavani, Mar 27, 2020, 5:29 PM IST
ಕಾರ್ಕಳ: ಕಾರ್ಕಳ ನಗರದಲ್ಲಿರುವ ರಾಮಸಮುದ್ರ ಕೆರೆಗೆ ಸ್ನಾನಕ್ಕೆಂದು ನೀರಿಗಿಳಿದ ಇಬ್ಬರು ಆಕಸ್ಮಿಕವಾಗಿ ನೀರುಪಾಲಾದ ಘಟನೆ ಮಾ. 27ರಂದು ಮಧ್ಯಾಹ್ನ ನಡೆದಿದೆ. ಭದ್ರಾವತಿ ಮೂಲದ ಕೂಲಿಕಾರ್ಮಿಕನ ಪತ್ನಿ ಕವಿತಾ (24) ಹಾಗೂ ಕಾರ್ಕಳ ಕಾಬೆಟ್ಟು ಶ್ರೀನಿವಾಸ ಅವರ ಮಗಳು ದೀಕ್ಷಿತಾ (12) ನೀರುಪಾಲಾದ ದುರ್ದೈವಿಗಳು.
ಕೆಲ ದಿನಗಳ ಹಿಂದೆ ಮಂಗಳಪಾದೆಯ ಚಿಕ್ಕಪ್ಪನ ಮನೆಗೆ ತೆರಳಿದ್ದ ದೀಕ್ಷಿತಾ ತನ್ನ ಚಿಕ್ಕಪ್ಪನ ಮಗ ಶರತ್ (10) ಹಾಗೂ ಕವಿತಾರೊಂದಿಗೆ ಸ್ನಾನಕ್ಕೆಂದು ಮಾ. 27ರ ಮಧ್ಯಾಹ್ನ ರಾಮಸಮದ್ರಕ್ಕೆ ತೆರಳಿದ್ದರು. ಕವಿತಾ ಹಾಗೂ ದೀಕ್ಷಿತಾ ನೀರಿಗಿಳಿದು ಸ್ನಾನಕ್ಕೆ ಮುಂದಾದರು. ಈ ವೇಳೆ ಇಬ್ಬರೂ ನೀರಲ್ಲಿ ಮುಳುಗುತ್ತಿರುವುದನ್ನು ಕಂಡ ಶರತ್ ಓಡಿ ಬಂದು ಮನೆಗೆ ಸುದ್ದಿ ತಿಳಿಸಿದನು. ತಕ್ಷಣವೇ ಸ್ಥಳೀಯ ಈಜುಪಟುಗಳು ನೀರಿಗಿಳಿದು ಶೋಧ ಕಾರ್ಯ ನಡೆಸಿದರು.
ಅಗ್ನಿಶಾಮಕ ದಳ ಸಿಬ್ಬಂದಿಯೂ ನೆರವಾದರು. ಕೆಲ ಗಂಟೆಗಳ ಬಳಿಕ ಇಬ್ಬರ ಮೃತದೇಹವನ್ನು ಪತ್ತೆ ಹಚ್ಚಿ ನೀರಿನಿಂದ ಮೇಲಕ್ಕೆತ್ತಲಾಯಿತು.
ಸ್ಥಳಕ್ಕೆ ತಹಶೀಲ್ದಾರ್ ಪುರಂದರ ಹೆಗ್ಡೆ, ನಗರ ಠಾಣಾ ಎಸ್‌ಐ ಮಧು ಬಿ.ಇ., ಪುರಸಭಾ ಸದಸ್ಯ ವಿನ್ನಿಬೋಲ್ಡ್, ಪುರಸಭಾ ಪರಿಸರ ಅಭಿಯಂತರ ಮದನ್, ಗ್ರಾಮ ಕರಣಿಕ ಶಿವಪ್ರಸಾದ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.