ಅತ್ತೂರು ಜಾತ್ರೆ: ಹರಿದು ಬಂತು ಜನಸಾಗರ
Team Udayavani, Jan 31, 2019, 12:30 AM IST
ಕಾರ್ಕಳ: ಅತ್ತೂರು ಸಂತ ಲಾರೆನ್ಸರ ಬಸಿಲಿಕಾದ ವಾರ್ಷಿಕ ಮಹೋತ್ಸವದ ನಾಲ್ಕನೇ ದಿನದ ಹಬ್ಬವು ವೈಭವದಿಂದ ಜರಗಿತು. ಜನ ಸಾಗರವೇ ಹರಿದು ಬಂತು. ಬುಧವಾರ ಬೆಳಗ್ಗೆ ಮಂಗಳೂರು ಧರ್ಮಾಧ್ಯಕ್ಷ ರೈ| ರೆ| ಡಾ| ಪೀಟರ್ ಪಾವ್É ಸಲ್ಡಾನ್ಹಾ ಬಲಿಪೂಜೆ ನೆರವೇರಿಸಿ ಪ್ರವಚನ ನೀಡಿದರು. ಪ್ರಭು ಏಸುವಿನ ದಿವ್ಯ ಬಲಿದಾನ, ಪುನರುತ್ಥಾನದ ಮಹಿಮೆಯನ್ನು ವಿವರಿಸಿ, ತ್ಯಾಗ, ಸೇವೆಯೇ ನಮ್ಮ ಮೂಲ ಧ್ಯೇಯವಾಗಬೇಕೆಂದರು.
ರಾಜ್ಯ ಮಾತ್ರವಲ್ಲದೇ ದೇಶದ ಮೂಲೆ ಮೂಲೆಯಿಂದ ಭಾವೈಕ್ಯತೆಯ ಕ್ಷೇತ್ರ ಅತ್ತೂರಿಗೆ ಜನರು ಆಗಮಿಸಿದರು. ಪಾರ್ಕಿಂಗ್‌ಗೆ ನಿಗದಿಗೊಳಿಸಿದ ಮೈದಾನಗಳೆಲ್ಲವೂ ಭರ್ತಿಗೊಂಡು ಭಕ್ತರು ರಸ್ತೆ ಬದಿಯಲ್ಲೇ ವಾಹನ ಪಾರ್ಕಿಂಗ್ ಮಾಡಿದ್ದರು. ಪವಿತ್ರ ಪುಷ್ಕರಿಣಿ, ಪವಾಡ ಮೂರ್ತಿ, ಮೋಂಬತ್ತಿ ಉರಿಸುವಲ್ಲಿ ಜನದಟ್ಟಣೆಯಿತ್ತು. ಭಿಕ್ಷುಕರು ವಾಪಸ್ ಭಿಕ್ಷಾಟನೆ ಕಾನೂನಾತ್ಮಕವಾಗಿ ನಿಷೇಧಿಸಿದ್ದರಿಂದ ಭಿಕ್ಷೆ ಬೇಡಲು ಬಂದ ಭಿಕ್ಷುಕರನ್ನು ಪೊಲೀಸರು ವಾಪಸ್ ಕಳುಹಿಸಿದರು.
ಸಂಜೆಯ ಕನ್ನಡ ಬಲಿಪೂಜೆಯನ್ನು ನೆರವೇರಿಸಿದ ಬೆಳ್ತಂಗಡಿಯ ಧರ್ಮಾ ಧ್ಯಕ್ಷರಾದ ಡಾ| ಲಾರೆನ್ಸ್ ಮುಕ್ಕುಯಿ ಅವರು ಪ್ರವಚನ ನೀಡಿ, ಸನ್ಮಾರ್ಗದಲ್ಲಿ ಬಾಳಲು ಪ್ರಯತ್ನಿಸಿದಾಗ ನೆಮ್ಮದಿಯ ಜೀವನ ಕಾಣಲು ಸಾಧ್ಯ. ಎಲ್ಲರೂ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆ, ನಿಷ್ಠೆಯಿಂದ ನಿರ್ವಹಿಸಿದಲ್ಲಿ ಸುಂದರ ಸಮಾಜ ನಿರ್ಮಿಸಬಹುದು ಎಂದರು.
ಇಂದಿನ ಕಾರ್ಯಕ್ರಮ
ಗುರುವಾರ ವಾರ್ಷಿಕ ಹಬ್ಬದ ಕೊನೆಯ ದಿನವಾಗಿದ್ದು, ಬೆಳಗ್ಗೆ 10.30ಕ್ಕೆ ಹಬ್ಬದ ಪ್ರಮುಖ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮಾಧ್ಯಕ್ಷರಾದ ರೈ| ರೆ| ಡಾ| ಜೆರಾಲ್ಡ್ ಲೋಬೊ ನೆರವೇರಿಸಲಿ¨ªಾರೆ. ಇಡೀ ದಿನ ಹತ್ತು ಬಲಿಪೂಜೆಗಳು ನಡೆಯಲಿದ್ದು, ರಾತ್ರಿ 9.30ಕ್ಕೆ ಕೊನೆಯ ಬಲಿಪೂಜೆಯು ಕೊಂಕಣಿಯಲ್ಲಿ ನಡೆಯಲಿದೆ. ಇದರೊಂದಿಗೆ ವೈಭವದ ಅತ್ತೂರು ವಾರ್ಷಿಕ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.