ಕಾರ್ಕಳ: ಶ್ವಾನಗಳಿಗಾಗಿ ಕ್ಯಾನಲ್ ಹೌಸ್
Team Udayavani, Jun 13, 2019, 6:10 AM IST
ಕಾರ್ಕಳ: ನಕ್ಸಲರ ಶೋಧ, ನೆಲ ಬಾಂಬ್ ಪತ್ತೆಗಾಗಿ ಎಎನ್‌ಎಫ್ ಸಿಬಂದಿ ಜತೆ ಶ್ವಾನಗಳೂ ಇರಲಿವೆ. ಅದಕ್ಕಾಗಿ ರಾಮ ಸಮುದ್ರದ ಬಳಿಯಲ್ಲಿರುವ ಎಎನ್‌ಎಫ್ ಕ್ಯಾಂಪಸ್‌ನಲ್ಲಿ ಶ್ವಾನಗಳಿಗಾಗಿ 22 ಲಕ್ಷ ರೂ. ವೆಚ್ಚದಲ್ಲಿ ಕ್ಯಾನಲ್‌ಹೌಸ್ ನಿರ್ಮಾಣಗೊಳ್ಳುತ್ತಿದೆ. 1200 ಚದರ ಅಡಿ ವಿಸೀ¤ರ್ಣದಲ್ಲಿ ಈ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, 4 ತಿಂಗಳೊಳಗಡೆ ಕ್ಯಾನಲ್ ಹೌಸ್ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ 4 ಶ್ವಾನಗಳು ಕ್ಯಾನಲ್ ಹೌಸ್‌ನಲ್ಲಿರಲಿದೆ.
ತರಬೇತಿ
ಬೆಂಗಳೂರಿನ ಸಿ.ಆರ್.ಪಿ.ಎಫ್ನಲ್ಲಿ ಬೆಲ್ಜಿಯಂ ಶಫರ್ಡ್ ಎಂಬ ತಳಿಯ ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ. ಒಟ್ಟು ನಾಲ್ಕು ಶ್ವಾನಗಳಿಗೆ ತಲಾ ಇಬ್ಬರಂತೆ ಎಂಟು ಸಿಬಂದಿಗಳನ್ನು ನೇಮಕ ಮಾಡಲಾಗಿದೆ. ನಕ್ಸಲ್‌ರ ಜಾಡು ಹಿಡಿಯುವುದು, ನೆಲ ಬಾಂಬ್ ಪತ್ತೆ ಸೇರಿದಂತೆ ಹಲವು ಅಪರಾಧಗಳಿಗೆ ಸಂಬಂಧಿಸಿದಂತೆ ಪತ್ತೆ ಹಚ್ಚುವ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ. ಇನ್ನು ಮುಂದೆ ನಕ್ಸಲ್ ಕೂಬಿಂಗ್ ಕಾರ್ಯಾಚರಣೆ ವೇಳೆ ಈ ಶ್ವಾನಗಳು ಎಎನ್‌ಎಫ್ ಸಿಬಂದಿ ಜತೆ ಅರಣ್ಯಗಳಿಗೆ ತೆರಳಿ ಕಾರ್ಯಾಚರಣೆ ನಡೆಸಲಿವೆ.
ಹೆಚ್ಚಿನ ತರಬೇತಿ
ಶ್ವಾನಗಳಿಗೆ ಈಗಾಗಲೇ ಬೆಂಗಳೂರಿನಲ್ಲಿ ತರಬೇತಿ ನೀಡಲಾಗುತ್ತಿದೆ. ಕಾಮಗಾರಿ ಮುಗಿದ ಬಳಿಕ ಆ ಶ್ವಾನಗಳನ್ನು ಇಲ್ಲಿಗೆ ತಂದು ಹೆಚ್ಚಿನ ತರಬೇತಿ ನೀಡಲಾಗುವುದು.
-ಬೆಳ್ಳಿಯಪ್ಪ ಡಿವೈಎಸ್ಪಿ, ಎಎನ್‌ಎಫ್ ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.