ಕಾರ್ಕಳ ನಗರ ಬಸ್‌ಸ್ಟ್ಯಾಂಡ್: ಪೊಲೀಸ್ ಚೌಕಿಯೇ ಇಲ್ಲಿ ಕಸದ ತೊಟ್ಟಿ
ಕಸ ಎಸೆಯಲು, ಬೀದಿ ನಾಯಿಗಳು ಮಲಗಲು ಸಹ ಬಳಕೆ
Team Udayavani, May 16, 2022, 11:21 AM IST
ಕಾರ್ಕಳ: ಸ್ವಚ್ಛ ಕಾರ್ಕಳ, ಸ್ವರ್ಣ ಕಾರ್ಕಳ ಕನಸು ಹೊತ್ತಿರುವ ಕಾರ್ಕಳ ನಗರಕ್ಕೆ ಕಸವೇ ದೊಡ್ಡ ಸಮಸ್ಯೆಯಾಗಿದೆ. ನಗರ ಬಸ್‌ಸ್ಟ್ಯಾಂಡ್ ಬಳಿ ಜನರು ಕಸ ಹಾಕಲು ಪೊಲೀಸರ ಚೌಕಿಯನ್ನೆ ಬಳಸುತ್ತಿದ್ದಾರೆ.
ನಗರದ ಹೃದಯ ಭಾಗದ ಬಸ್ ನಿಲ್ದಾಣ ಬಳಿ ಪೊಲೀಸ್ ಚೌಕಿಯಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ, ಜನ ದಟ್ಟನೆಯ ವೇಳೆ ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ಳುವ ಸಲುವಾಗಿ, ಹಾಗೂ ಕಾನೂನು ಸುವ್ಯವಸ್ಥೆ ಹದಗೆಡ ದಂತೆ ನೋಡಿಕೊಳ್ಳಲು ನಿಯೋಜನೆ ಗೊಂಡು ಇಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ಅನುಕೂಲಕ್ಕಾಗಿ ನಗರ ಪೊಲೀಸ್ ಚೌಕಿ ಇರಿಸಲಾಗಿದೆ. ಸದುದ್ದೇಶ ಕ್ಕಾಗಿ ಬಳಕೆಯಾಗಬೇಕಿದ್ದ ಈ ಪೊಲೀಸ್ ಚೌಕಿ ತ್ಯಾಜ್ಯ ತಂದು ಸುರಿಯುವ ತೊಟ್ಟಿ ಯಾಗಿ ಮಾರ್ಪಟ್ಟಿದೆ.
ಬಸ್‌ನಿಲ್ದಾಣದ ಒಂದು ಬದಿ ಯಲ್ಲಿರುವ ಚೌಕಿಯ ಒಳಗೆ ಒಣುಕಿ ನೋಡಿದರೆ ಅಲ್ಲಿ ಕಸದ ರಾಶಿಯೇ ಕಂಡು ಬರುತ್ತದೆ. ಗುಟ್ಕಾ, ಖಾಲಿ ನೀರಿನ ಬಾಟಲಿ, ಬಿಸ್ಕತ್ ಪ್ಯಾಕೇಟ್‌ಗಳ ಕವರ್, ಪ್ಲಾಸ್ಟಿಕ್ ತ್ಯಾಜ್ಯಗಳ ಜತೆಗೆ ಗೋಣಿ ಚೀಲದಲ್ಲಿ ತ್ಯಾಜ್ಯ ತುಂಬಿ ತಂದಿಟ್ಟಿದ್ದಾರೆ.
ಬೀದಿ ನಾಯಿಗಳ ಆವಾಸ ಸ್ಥಾನ
ಪೊಲೀಸ್ ಚೌಕಿಯಲ್ಲಿ ರಾತ್ರಿ ಹೊತ್ತು ಕೆಲ ವೃದ್ಧರು, ಅನ್ಯ ಜಿಲ್ಲೆ, ರಾಜ್ಯಗಳ ಕೂಲಿ ಕಾರ್ಮಿಕರು ಸಂಜೆ, ರಾತ್ರಿ ಕುಡಿದು, ಗುಟ್ಕ, ಪಾನ್ ತಿಂದು ಚೌಕಿಯೊಳಗೆ ಉಗುಳು ವುದರಿಂದ ಪರಿಸರ ಮಲಿನಗೊಂಡಿದೆ. ಇನ್ನು ಬೀದಿ ನಾಯಿಗಳು ಕೂಡ ಚೌಕಿ ಯೊಳಗೆ ಹತ್ತಿ ಮಲಗಿರುತ್ತವೆ. ಒಳಗಿನ ತ್ಯಾಜ್ಯಗಳನ್ನು ತಿನ್ನುತ್ತ ಮತ್ತಷ್ಟು ಮಲಿನಗೊಳ್ಳಲು ಕಾರಣವಾಗುತ್ತಿವೆ.
ದೂರ ಉಳಿದ ಪೊಲೀಸರು
ಪೊಲೀಸ್ ಚೌಕಿ ಇದ್ದರೂ ಆರಂಭ ದಲ್ಲಿ ಅದರಲ್ಲಿ ನಿಂತು ಕರ್ತವ್ಯ ನಿರ್ವಹಿಸ ಲಾಗುತ್ತಿತ್ತು. ಚೌಕಿ ಈಗ ನಿಲ್ಲುವಷ್ಟು ಯೋಗ್ಯ ಹಾಗೂ ಸುರಕ್ಷಿತವಾಗಿಲ್ಲ. ಇದೇ ಕಾರಣಕ್ಕೆ ಏನೋ ಇಲ್ಲಿ ನಿಯೋಜನೆ ಗೊಂಡ ಪೊಲೀಸರು ಯಾರೂ ಚೌಕಿ ಬಳಸದೆ ಪಕ್ಕದಲ್ಲಿ ಎಲ್ಲಾದರೂ ನಿಂತು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಮಳೆ ಬಂದಾಗ ಚೌಕಿಯೊಳಗೆ ನಿಂತು ಕರ್ತವ್ಯ ನಿರ್ವಹಿಸುವುದು ಕೂಡ ಕಷ್ಟ.
ಮಳೆಯಿಂದ ರಕ್ಷಣೆಗೆ ಸೂಕ್ತ ವ್ಯವಸ್ಥೆಗಳು ಚೌಕಿಯಲ್ಲಿಲ್ಲ. ಬಿಸಿಲ ತಾಪದ ರಕ್ಷಣೆಗೆ ಸುತ್ತ ಪರದೆಗಳು ಇಲ್ಲ. ಎಲ್ಲ ಸುರಕ್ಷತೆ, ವ್ಯವಸ್ಥೆಗಳುಳ್ಳ ಚೌಕಿ ಒದಗಿಸಿ ಸೂಕ್ತ ಜಾಗದಲ್ಲಿ ಇರಿಸಿದಲ್ಲಿ ಪೊಲೀಸ್ ಸಿಬಂದಿಗೆ ಕರ್ತವ್ಯ ನಿರ್ವಹಿಸಲು ಸುಗಮವಾಗುತ್ತದೆ.
ಜನ, ವಾಹನ ಹೆಚ್ಚು
ಉಡುಪಿ, ಮಂಗಳೂರು, ಹೆಬ್ರಿ ಸೇರಿ ದಂತೆ ವಿವಿಧೆಡೆಗಳಿಗೆ ತೆರಳುವ ಪ್ರಯಾಣಿಕರು ಇಲ್ಲಿನ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾದಿರುತ್ತಾರೆ. ಎಲ್ಲ ದಿನಗಳಲ್ಲಿ ಈ ಜಂಕ್ಷನ್‌ನಲ್ಲಿ ಅಪಾರ ಜನ, ವಾಹನ ಸಂದಣಿಯಿರುತ್ತದೆ. ಅದಕ್ಕೆ ಸುಸಜ್ಜಿತ ಪೊಲೀಸ್ ಚೌಕಿಯ ಅವಶ್ಯಕತೆ ಇಲ್ಲಿಗಿದೆ.
ಕಸ ಸಂಗ್ರಹ ಚೌಕಿಯ ಕೆಳಗೆ ಠಾಣೆಯ ಮೊಬೈಲ್, ಪೋನ್ ನಂಬರ್
ತ್ಯಾಜ್ಯ ಎಸೆಯುವ ತೊಟ್ಟಿಯಾಗಿ ಮಾರ್ಪಾಡುಗೊಂಡ ಪೊಲೀಸ್ ಚೌಕಿ ಇರುವುದು ಪುರಸಭೆಯ ಕೂಗಳತೆ ದೂರದಲ್ಲಿ. ಪುರಸಭೆ ಅಧಿಕಾರಿಗಳು, ಪೊಲೀಸರು ಇದೇ ಚೌಕಿಯನ್ನು ಸುತ್ತವರಿದು ಹಲವು ಬಾರಿ ಓಡಾಡುತ್ತಿರುತ್ತಾರೆ. ಆದರೇ ಚೌಕಿ ಯೊಳಗೆ ಚೀಲಗಟ್ಟಲೆ ಸಂಗ್ರಹವಾದ ತ್ಯಾಜ್ಯ ಮಾತ್ರ ಇವರ್ಯಾರ ಕಣ್ಣಿಗೂ ಈ ವರೆಗೂ ಬಿದ್ದಿಲ್ಲ ಎನ್ನುವುದೇ ಅಚ್ಚರಿಯಾಗಿದೆ. ಕಸ ತುಂಬಿದ ಚೌಕಿಯ ಕೆಳಗಡೆ ನಗರ ಪೊಲೀಸ್ ಠಾಣೆಯ ಮೊಬೈಲ್ ಸಂಖ್ಯೆ ಹಾಗೂ ಸ್ಥಿರ ದೂರವಾಣಿ ಸಂಖ್ಯೆ ಬರೆದಿದೆ.
ಶೀಘ್ರ ತೆರವು
ನಗರದ ಪೊಲೀಸ್ ಚೌಕಿಯಲ್ಲಿ ಕಸ ಎಸೆಯುತ್ತಿರುವ ವಿಚಾರ ಈಗ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ನಾಳೆಯೇ ಅದನ್ನು ತೆರವುಗೊಳಿಸಿ, ಸೂಕ್ತ ಅಗತ್ಯ ಕ್ರಮ ಕೈಗೊಳ್ಳಲಾಗುವುದು. -ಪ್ರಸನ್ನ, ಎಸ್‌ಐ ನಗರ ಠಾಣೆ, ಕಾರ್ಕಳ
-ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.