ಕಾರ್ಕಳ : ಅಳಿಯನಿಂದ ಮಾವನ ಮೇಲೆ ಹಲ್ಲೆ, ಜೀವ ಬೆದರಿಕೆ
Team Udayavani, Jul 27, 2022, 12:04 AM IST
ಕಾರ್ಕಳ : ಸ್ಕೂಟರಿನಿಂದ ಮಾವನನ್ನು ಅಳಿಯ ಎಳೆದು ಹಾಕಿ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ ಘಟನೆ ಬೈಲೂರಿನಲ್ಲಿ ನಡೆದಿದೆ.
ಮದರ್ ಹೌಸ್ ನಿವಾಸಿ ಮುಸ್ತಾಫಾ ಹಸನಬ್ಬ (65) ಹಲ್ಲೆಗೊಳಗಾದವರು. ಅವರ ಮಗಳ ಗಂಡ ಮಹಮ್ಮದ್ ಮುಸ್ತಕ್ ಸೇರಿ ಐವರು ಹಲ್ಲೆ ನಡೆಸಿದ್ದಾರೆ. ಮುಸ್ತಾಫಾ ಹಜನಬ್ಬ ಅವರ ಪುತ್ರಿ ಖತೀಜಮ್ಮ ತೌಸಿಯಾ ಅವರನ್ನು ಮಂಗಳೂರು ಕುತ್ತಾರು ನಿವಾಸಿ ಮಹಮ್ಮದ್ ಮುಸ್ತಕ್ ಎಂಬಾತನಿಗೆ 2009ರಲ್ಲಿ ವಿವಾಹ ಮಾಡಿಕೊಡಲಾಗಿತ್ತು. 5 ವರ್ಷಗಳ ಹಿಂದೆ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿ ಪ್ರಕರಣ ನ್ಯಾಯಾಲಯದಲ್ಲಿದೆ. ಈ ನಡುವೆ ಆರೋಪಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯನ್ನು ವಾಪಸು ಪಡೆಯಲು ಒತ್ತಡ ಹೇರುತ್ತಿದ್ದ. ಅದೇ ಕಾರಣಕ್ಕಾಗಿ ಹಲ್ಲೆ ನಡೆಸಿದ್ದಾನೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.