ಕಾರ್ಕಳ: ಇಸ್ಪೀಟ್ ಜುಗಾರಿ: ನಾಲ್ವರು ವಶಕ್ಕೆ ಪಡೆದ ಪೊಲೀಸರು
Team Udayavani, Sep 10, 2022, 10:43 PM IST
ಕಾರ್ಕಳ: ನಿಟ್ಟೆ ಗ್ರಾಮದ ಕೆಮ್ಮಣ್ಣು ಡ್ಯಾಮ್ ಬಳಿಯ ಪಾಳು ಬಿದ್ದ ಹಳೆಯ ಕೆ.ಪಿ.ಟಿ.ಸಿ.ಎಲ್. ಕಟ್ಟಡದಲ್ಲಿ ಇಸ್ಪೀಟ್ ಜುಗಾರಿ ಆಟದಲ್ಲಿ ನಿರತರಾಗಿದ್ದ ನಾಲ್ವರನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತ್ತು. ಪ್ರಥಮ್ ಶೆಟ್ಟಿ (29), ಸಂದೀಪ (29), ಗುರುಪ್ರಸಾದ್ (23) ಮತ್ತು ರಾಜೇಶ್ ಪೂಜಾರಿ (30) ಬಂಧಿತರು. ಅವರಿಂದ 1360 ರೂ. ನಗದು, ಇಸ್ಪೀಟ್ ಎಲೆಗಳು, ನೆಲಕ್ಕೆ ಹಾಸಿದ ಬ್ಯಾನರ್-1, ಮತ್ತು ಇಸ್ಪೀಟ್ ಕಾರ್ಡ್‌ನ ಸ್ಯಾಚೆಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ: ಮಟ್ಕಾ ಜುಗಾರಿಗೆ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿಯ ಬಂಧನ
ಪಡುಬಿದ್ರಿ: ಮುದ ರಂಗಡಿಯ ಮೀನು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಆರೋಪಿ ಉಡುಪಿ ಪುತ್ತೂರಿನ ದಿನೇಶ್ ಶೆಟ್ಟಿ (53) ಎಂಬಾತನನ್ನು ಪಡುಬಿದ್ರಿ ಪಿಎಸ್‌ಐ ಪುರುಷೋತ್ತಮ್ ಮತ್ತು ಸಿಬಂದಿ ದಾಳಿ ನಡೆಸಿ ಶನಿವಾರ ಬಂಧಿಸಿದ್ದಾರೆ.
ಆರೋಪಿಯು ಸಾರ್ವಜನಿಕರಿಂದ ಮಟ್ಕಾ ಜುಗಾರಿಗೆ ಸಂಗ್ರಹಿಸಿದ್ದ 1050 ರೂ. ನಗದು ಮತ್ತು ಆತ ಆಟಕ್ಕೆ ಬಳಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪಡುಬಿದ್ರಿ: ವೃದ್ಧ ಆತ್ಮಹತ್ಯೆ
ಪಡುಬಿದ್ರಿ: ಬೀಡು ಬಳಿಯ ನಿವಾಸಿ ರಾಘು ಜಿ. ಶೆಟ್ಟಿ (75) ಅವರು ಸೆ. 6ರಂದು ಗೆದ್ದಲು ಹುಳುವಿಗೆ ಹಾಕುವ ವಿಷವನ್ನು ಸೇವಿಸಿ ಅಸ್ವಸ್ಥರಾಗಿದ್ದು, ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಶನಿವಾರ ಅವರು ಸಾವನ್ನಪ್ಪಿದ್ದಾರೆ. ರಾಘು ಶೆಟ್ಟಿ ಕೃಷಿ ಕೆಲಸ ಮಾಡಿಕೊಂಡಿದ್ದು, ಕುಡಿತದ ಚಟ ಮತ್ತು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇಗುಲದಿಂದ ನಗದು ಕಳವು
ಕೋಟ: ಬಿದ್ಕಲ್‌ಕಟ್ಟೆ ಸಮೀಪ ಕಕ್ಕುಂಜೆ ಗ್ರಾಮದ ಕಂಬಿಕಲ್ಲು ಮಹಾಗಣಪತಿ ದೇಗುಲಕ್ಕೆ ಸೆ. 8ರ ರಾತ್ರಿ ದುಷ್ಕರ್ಮಿಗಳು ನುಗ್ಗಿ ಕಾಣಿಕೆ ಹುಂಡಿ ಹಾಗೂ ಕಚೇರಿಯಲ್ಲಿದ್ದ ಸುಮಾರು 11 ಸಾವಿರ ನಗದು ಕಳವುಗೈದಿದ್ದಾರೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ಮೂಲದ ವ್ಯಕ್ತಿ ಸೌದಿಯಲ್ಲಿ ಸಾವು
ಮೃತದೇಹ ತರಲು ಐಎಸ್‌ಎಫ್ ನೆರವು
ಮಂಗಳೂರು: ಸೌದಿ ಅರೇಬಿಯಾದ ರಿಯಾದ್ ನಗರದ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದ ಕಡಬ ಮೂಲದ ಹರೀಶ್ ಗೋಕುಲ್‌ದಾಸ್ ಪೈ ಅವರು ಆ. 27ರಂದು ಹೃದಯಾಘಾತದಿಂದ ಮೃತಪಟ್ಟಿದ್ದು ಅವರ ಮೃತದೇಹವನ್ನು ಭಾರತಕ್ಕೆ ತರುವಲ್ಲಿ ಇಂಡಿಯನ್ ಸೋಶಿಯಲ್ ಫೋರಂ (ಐಎಸ್‌ಎಫ್) ನೆರವಾಗಿದೆ.
ಫೋರಂನ ನೌಶಾದ್ ಕಡಬ, ನಿಝಾಮ್ ಬಜ್ಪೆ, ಅಶ್ಪಾಕ್ ಉಚ್ಚಿಲ ಹಾಗೂ ಇಜಾಝ್ ಫರಂಗಿಪೇಟೆ ಅವರ ನೇತೃತ್ವದ ತಂಡ ಸೌದಿ ಅರೇಬಿಯಾದ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಮೃತದೇಹವನ್ನು ಊರಿಗೆ ತಲುಪಿಸುವಲ್ಲಿ ಯಶಸ್ವಿ ಯಾಯಿತು.ಸೆ. 8ರಂದು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸ ಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.