ಕಾರ್ಕಳ: ಗಾಳಿ-ಮಳೆಗೆೆ ಅಪಾರ ನಷ್ಟ , ವಿದ್ಯುತ್ ವ್ಯತ್ಯಯ
Team Udayavani, Aug 7, 2019, 5:26 AM IST
ಕಾರ್ಕಳ/ಅಜೆಕಾರು: ಕಾರ್ಕಳ ತಾಲೂಕಿನಾದ್ಯಂತ ಆ.5, 6ರಂದು ಸುರಿದ ಗಾಳಿ-ಮಳೆಗೆ ಅಪಾರ ನಷ್ಟ ಉಂಟಾಗಿದೆ.
ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಮುಳುಗಡೆ ಗೊಂಡಿದ್ದರೆ ನದಿ ಪಾತ್ರದ ಕೃಷಿ ಭೂಮಿ ಜಲಾವೃತಗೊಂಡಿತ್ತು. ಮರಗಳು ಬಿದ್ದು ವಿದ್ಯುತ್ ಕಂಬಗಳು ಹಾನಿಗೀಡಾಗಿ ತಾಲೂಕಿ ನಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸೀತಾನದಿ, ಸುರ್ವಣ ನದಿ, ಶಾಂಭವಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.
ಮನೆಗಳಿಗೆ ಹಾನಿ
ಹಲವೆಡೆ ಮನೆಗಳ ಮೇಲೆ ಮರ ಬಿದ್ದು ನಷ್ಟ ಸಂಭವಿಸಿದೆ. ಕೌಡೂರು ಗ್ರಾಮದ ವಿಜಯ ಪೂಜಾರಿ (20 ಸಾವಿರ ರೂ.), ರಘುನಾಥ ಪೂಜಾರಿ (8 ಸಾವಿರ ರೂ.), ದುರ್ಗಾ ಗ್ರಾಮದ ಅಮ್ಮಜಾನ್ ಬಾಯಿ (15 ಸಾವಿರ ರೂ.), ಕಸಬಾ ಗ್ರಾಮದ ವಿಟuಲ ಆಚಾರ್ಯ (10 ಸಾವಿರ ರೂ.), ಮರ್ಣೆ ಗ್ರಾಮದ ನಾರಾಯಣ ನಾಯಕ್ (10 ಸಾವಿರ ರೂ.), ಮಾಳ ಗ್ರಾಮದ ರತಿ ಮೂಲ್ಯ (10 ಸಾವಿರ ರೂ.), ಮುಟ್ಟಿ (6 ಸಾವಿರ ರೂ.), ಕುಕ್ಕುಂದೂರು ಗ್ರಾಮದ ನವೀನ್ ದೇವಾಡಿಗ (20 ಸಾವಿರ ರೂ.), ಶೀತಲ್ ಜೋಸನ್ (10 ಸಾವಿರ ರೂ.), ಬೋಳ ಗ್ರಾಮದ ದೇವಿ (8 ಸಾವಿರ ರೂ.), ಯರ್ಲಪಾಡಿ ಗ್ರಾಮದ ರತ್ನಾಕರ (5 ಸಾವಿರ ರೂ.), ಕೊರಪೊಳು (3 ಸಾವಿರ ರೂ.), ಶೇಖರ್ ದೇವಾಡಿಗ (5 ಸಾವಿರ ರೂ.), ಬೂದ ಮೇರ (3 ಸಾವಿರದ ಐನೂರು ರೂ.), ಶಿವರಾಮ ಆಚಾರ್ಯ (10 ಸಾವಿರ ರೂ.), ರಾಜೇಶ್ ಶೆಟ್ಟಿ (5 ಸಾವಿರ ರೂ.), ವಸಂತಿ ಮಡಿವಾಳ (2 ಸಾವಿರದ ಐನೂರು ರೂ.), ಸೂಡ ಗ್ರಾಮದ ವಿಕ್ಟರ್ ಡಿ’ಸೋಜಾ (10 ಸಾವಿರ ರೂ.), ಇನ್ನಾ ಗ್ರಾಮದ ವಾರಿಜಾ ಸಾಲಿಯಾನ್ (10 ಸಾವಿರ ರೂ.), ಪಳ್ಳಿ ಗ್ರಾಮದ ಬೊಜ ಹಾಂಡ (5 ಸಾವಿರ ರೂ.), ಹಿರ್ಗಾನ ಗ್ರಾಮದ ಶ್ರೀಧರ್ ಪ್ರಭು (5 ಸಾವಿರ ರೂ.), ಮುಡಾರು ಗ್ರಾಮದ ಪುಷ್ಪಲತಾ (10 ಸಾವಿರ ರೂ.), ದೇವಕಿ (10 ಸಾವಿರ ರೂ.,) ಅಪ್ಪಿ ಶೆಡ್ತಿ (10 ಸಾವಿರ ರೂ.), ಶೀನ (10 ಸಾವಿರ ರೂ.), ಕಸಬಾ ಗ್ರಾಮದ ರಮೇಶ್ ( 15 ಸಾವಿರ ರೂ.), ಶೇಖರ್ ಕುಲಾಲ್ (10 ಸಾವಿರ ರೂ.) ಕಸಬಾ ಗ್ರಾಮದ ರಮೇಶ್( 15 ಸಾವಿರ ರೂ.), ಶೇಖರ್ ಕುಲಾಲ್ (10 ಸಾವಿರ ರೂ.), ಶಾರದಾ (10 ಸಾವಿರ ರೂ.), ಅನಂತ ಕಾಮತ್ ಪೆರ್ವಾಜೆ ( 25 ಸಾವಿರ ರೂ.), ಈದು ಗ್ರಾಮದ ಸಜಿಯ (25 ಸಾವಿರ ರೂ.), ಮಾಳ ಗ್ರಾಮದ ಅಣ್ಣಿ ನಾಯ್ಕ ( 2,200 ರೂ.), ನೀರೆ ಗ್ರಾಮದ ಶಕುಂತಳಾ ಅವರ ಮನೆ ಹಾನಿಗೀಡಾಗಿ 1,25,000 ಸಾವಿರ ರೂ. ನಷ್ಟ ಸಂಭವಿಸಿದೆ.
ಮಿಯ್ನಾರು ಗ್ರಾಮದ ಮಾಧವ್ ಕಾಮತ್ ಅವರ ಅಂಗಡಿಗೆ ಹಾನಿಯಾಗಿ 10 ಸಾವಿರ ರೂ., ಶಿರ್ಲಾಲು ಗ್ರಾಮದ ಜೀವಂಧರ ಪೂಜಾರಿ ಅವರ ಅಡಿಕೆ ತೋಟ ಹಾನಿಯಾಗಿ 20 ಸಾವಿರ ರೂ., ಶಿರ್ಲಾಲು ಸದಾನಂದ ಅವರ ತೋಟಕ್ಕೆ ಹಾನಿಯಾಗಿ 25 ಸಾವಿರ ರೂ. ನಷ್ಟ ಸಂಭವಿಸಿದೆ.
ಹೆಬ್ರಿ: ಕೃಷಿ ಭೂಮಿ ಜಲಾವೃತ
ಹೆಬ್ರಿ: ಮಂಗಳವಾರ ಬೀಸಿದ ಭಾರೀ ಗಾಳಿ ಮಳೆಯಿಂದಾಗಿ ಹೆಬ್ರಿ ತಾಲೂಕಿನ ಹಲವೆಡೆ ನದಿಯ ನೀರು ತೋಟಗಳಿಗೆ ನುಗ್ಗಿ ಕೃಷಿ ಭೂಮಿ ಜಲಾವೃತವಾಗಿದ್ದು ಗಾಳಿಯಿಂದ ಮನೆಯ ಮೇಲೆ ಮರಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಹೆಬ್ರಿಯ ಪ್ರಮುಖ ಬೀದಿಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ಸಮಸ್ಯೆಯಾಗಿದೆ. ಹುತ್ತುರ್ಕೆ ಬಳಿ ನೀರು ರಸ್ತೆಯ ಮೇಲೆ ಹರಿದು ಸ್ವಲ್ಲ ಹೊತ್ತು ವಾಹನ ಸಂಚಾರ ಬಂದ್ ಆಗಿತ್ತು. ಹೆಬ್ರಿಯ ಬಡ್ಕಿಲಾಯ ಹೊಟೇಲ್ ಎದರು ಚರಂಡಿ ವ್ಯವಸ್ಥೆಯಿಲ್ಲದೆ ನೀರು ರಸ್ತೆಯ ಮೇಲೆ ಹರಿದು ಸಂಚಾರಕ್ಕೆ ಸಮಸ್ಯೆಯಾಗಿದೆ.
ಹೆಬ್ರಿ ಕುಚ್ಚಾರು ಚಾರ ಬೇಳಂಜೆ ಶಿವಪುರ ಮುದ್ರಾಡಿ, ಕಬ್ಬಿನಾಲೆ, ನಾಡ್ಪಾಲು, ಮಡಾಮಕ್ಕಿ, ಸಂತೆಕಟ್ಟೆ, ಸೀತಾನದಿ ಮೊದಲಾದ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ಥವಾಗಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಮಾರ್ಗ ಬದಲಾವಣೆ
ಸೀತಾನದಿ ನೀರು ರಸ್ತೆಗೆ ನುಗ್ಗಿದ ಪರಿಣಾಮ ಆಗುಂಬೆ-ಹೆಬ್ರಿ ರಸ್ತೆ ವಾಹನ ಸಂಚಾರ ಕಡಿತಗೊಂಡು ಆಗುಂಬೆ ಸಂಚರಿಸುವ ವಾಹನಗಳು ಹೆಬ್ರಿ ಕುಚ್ಚಾರು ಮಡಾಮಕ್ಕಿ ಸೋಮೇಶ್ವರ ಮಾರ್ಗವಾಗಿ ಚಲಿಸಿದವು. ಮುಂಜಾಗ್ರತೆ ಕ್ರಮವಾಗಿ ಹೆಬ್ರಿ ಠಾಣಾಧಿಕಾರಿ ಮಹಾಬಲ ಶೆಟ್ಟಿ ಅವರ ನೇತೃತ್ವದಲ್ಲಿ ಹೆಬ್ರಿ ಸರ್ಕಲ್ನಲ್ಲಿ ಬ್ಯಾರಿಕೇಡ್ ಅಳವಡಿಸಿ ಶಿವಮೊಗ್ಗ ಸಂಚರಿಸುವ ವಾಹನ ಸವಾರರಿಗೆ ಮಾಹಿತಿ ನೀಡಲಾಯಿತು. ಹೆಬ್ರಿ-ಆಗುಂಬೆ ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಹೆಬ್ರಿ ಮಾರ್ಗವಾಗಿ ಶಿವಮೊಗ್ಗ, ಉಡುಪಿ ಹೋಗುವ ಮತ್ತು ಬರುವ ಬಸ್‌ಗಳಿಗೆ ಬದಲಿ ಮಾರ್ಗವಾಗಿ ಹೆಬ್ರಿ-ಕುಚ್ಚಾರು-ಮಡಾಮಕ್ಕಿ-ಸೋಮೇಶ್ವರ ಮಾರ್ಗದಲ್ಲಿ ಸಂಚರಿಸುವಂತೆ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.