ಸಂಕಷ್ಟದಲ್ಲಿ ಕಾರ್ಕಳ ಕೈಗಾರಿಕಾ ತರಬೇತಿ ಸಂಸ್ಥೆ

Team Udayavani, Oct 24, 2019, 5:38 AM IST

sankasta

ಕಾರ್ಕಳ: ಬೋಧಕರ ಕೊರತೆಯಿಂದ ಕಾರ್ಕಳದಲ್ಲಿರುವ ಕೈಗಾರಿಕಾ ತರಬೇತಿ ಸಂಸ್ಥೆ ಸಂಕಷ್ಟ ದಲ್ಲಿದ್ದು, ವಿದ್ಯಾರ್ಥಿಗಳನ್ನು, ಪೋಷಕ ರನ್ನು ಆತಂಕಕ್ಕೀಡು ಮಾಡಿದೆ. ನಗರದ ಹೃದಯ ಭಾಗ ಬೋರ್ಡ್‌ ಹೈಸ್ಕೂಲ್‌ನ ಪಕ್ಕದ ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ತಾಲೂಕಿನ ಏಕೈಕ ಸರಕಾರಿ ಐಟಿಐ ಒಂದೇ ಒಂದು ಖಾಯಂ ಬೋಧಕರಿಲ್ಲದೇ ಬಳಲುವಂತಾಗಿದೆ.

ಕೈಗಾರಿಕಾ ತರಬೇತಿ ಕಲಿಯುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ
ಕೊಡುವ ನಿಟ್ಟಿನಲ್ಲಿ ಸರಕಾರ 2018ರ ಆಗಸ್ಟ್‌ ನಲ್ಲಿ ನೂತನವಾಗಿ ಐಟಿಐಯೊಂದನ್ನು ಆರಂಭಿಸಿತ್ತು. ಈ ಹಿಂದೆ ಜೆಒಸಿ ತರಗತಿ ನಡೆಸ ಲಾಗುತ್ತಿದ್ದ ಕಟ್ಟಡವನ್ನು ಇದಕ್ಕಾಗಿ ನವೀಕರಣಗೊಳಿಸಲಾಗಿತ್ತು. ಬಡ ವಿದ್ಯಾರ್ಥಿಗಳಿಗೆ ಆಸರೆಯಾಗ ಬೇಕೆನ್ನುವ ನಿಟ್ಟಿನಲ್ಲಿ ಐಟಿಐ ತೆರೆದರೂ ಸರಕಾರ ಮೂಲ ಸೌಕರ್ಯಗಳನ್ನು ಒದಗಿಸಿದೇ ಕೇವಲ ಸಂಖ್ಯೆ ಭರ್ತಿಗಾಗಿ ಐಟಿಐ ಕಾಲೇಜನ್ನು ನೀಡಿದಂತಾಯಿತು.

ಯಾವೆಲ್ಲ ಕೋರ್ಸ್‌ಗಳಿವೆ ?
ಕಾರ್ಕಳ ಐಟಿಐನಲ್ಲಿ ಇಲೆಕ್ಟ್ರೀಷಿಯನ್‌, ಎಂಎಂವಿ (ಮೆಕ್ಯಾನಿಕ್‌ ಮೋಟಾರ್‌ ವೆಹಿಕಲ್‌), ಫಿಟ್ಟರ್‌, ಎಂಆರ್‌ಎಸಿ (ಮೆಕ್ಯಾನಿಕಲ್‌ ರೆಫ್ರಿಜರೇಶನ್‌ ಏರ್‌
ಕಂಡೀಷನಿಂಗ್‌) ಕೋರ್ಸ್‌ಗಳು ಲಭ್ಯ ವಿದೆ. ಈಗಾಗಲೇ ಇಎಂ (ಇಲೆಕ್ಟ್ರಾನಿಕ್‌ ಮೆಕ್ಯಾನಿಕಲ್‌) ಕೋರ್ಸ್‌ಗೆ ಅನುಮತಿ ದೊರೆತಿದ್ದು, ತರಗತಿ ಇನ್ನಷ್ಟೇ ಆರಂಭವಾಗಬೇಕಿದೆ.

ಪ್ರಸ್ತುತ ಇಲೆಕ್ಟ್ರೀಷಿಯನ್‌ನಲ್ಲಿ-37 ವಿದ್ಯಾರ್ಥಿಗಳು, ಎಂಎಂವಿ-41 ವಿದ್ಯಾರ್ಥಿಗಳು, ಫಿಟ್ಟರ್‌-16, ಎಂಆರ್‌ಎಸಿ-38 ವಿದ್ಯಾರ್ಥಿಗಳು ವ್ಯಾಸಂಗ ಮಾಡು ತ್ತಿದ್ದಾರೆ.

ತುಕ್ಕು ಹಿಡಿದಿರುವ ಪರಿಕರಗಳು
2018ರಲ್ಲೇ ಕಾಲೇಜಿಗೆ ಕೋಟಿ ರೂ.ಗಳ ಪ್ರಯೋಗಾಲಯ ಪರಿಕರ ದೊರೆತಿದ್ದರೂ ಸುಸಜ್ಜಿತ ಕಟ್ಟಡವಿಲ್ಲದೆ, ಅದರ ಕುರಿತು ಜ್ಞಾನ ಹೊಂದಿರುವ ಬೋಧಕರಿಲ್ಲದೆ ಪರಿಕರಗಳು ತುಕ್ಕುಹಿಡಿಯುಂತಾಗಿದೆ.

ಪ್ರಾಂಶುಪಾಲರಿಗೆ ಹೆಚ್ಚುವರಿ ಹೊಣೆ
ಪ್ರಸ್ತುತ ಇಲ್ಲಿನ ಪ್ರಾಂಶುಪಾಲರು ಉಡುಪಿ ತಾಲೂಕಿನ ಪೆರ್ಡೂರು ಮತ್ತು
ಕೊಕ್ಕರ್ಣೆ ಐಟಿಐ ಕೇಂದ್ರಗಳಲ್ಲೂ ಪ್ರಾಂಶುಪಾಲ ರಾಗಿ ಕಾರ್ಯನಿರ್ವಹಿಸುತ್ತಿ ದ್ದಾರೆ. ಹೀಗಾಗಿ ಪ್ರಾಂಶುಪಾಲರಾದ ಕೆ.ಎಲ್‌. ನಾಗರಾಜ್‌ ಅವರು ಒಟ್ಟು ಮೂರು ಸರಕಾರಿ ಐಟಿಐಗಳ ಜವಾಬ್ದಾರಿ ಹೊರುತ್ತಿದ್ದಾರೆ.

ಅತಿಥಿ ಬೋಧಕರಿಗೆ ಅತ್ಯಲ್ಪ ವೇತನ
ಐಟಿಐನಲ್ಲಿ ಅತಿಥಿ ಬೋಧಕರಾಗಿ ತರಗತಿ ನಡೆಸುತ್ತಿರುವ ಬೋಧಕರಿಗೆ
ಸರಕಾರ ಅತ್ಯಲ್ಪ ವೇತನ ಪಾವತಿಸುತ್ತಿದೆ. ದಿನಕೂಲಿ ನೌಕರರಾಗಿ ದುಡಿಯುತ್ತಿರುವ ಇವರು ದಿನವೊಂದಕ್ಕೆ ಕೇವಲ 400 ರೂ. ಸಂಬಳ ಪಡೆಯುತ್ತಿದ್ದಾರೆ. ಸರಕಾರಿ ರಜೆ, ವಾರದ ರಜೆ ಸೇರಿದಂತೆ ಇನ್ನಿತರ ರಜೆ ದಿವಸ ಇವರ ಸಂಬಳ್ಕಕೆ ಕತ್ತರಿ ಹಾಕುವ ಪರಿಣಾಮ ಓರ್ವ ಅತಿಥಿ ಬೋಧಕರಿಗೆ ತಿಂಗಳಿಗೆ ಸಿಗುವ ವೇತನ 7ರಿಂದ 8 ಸಾವಿರ ರೂ. ಮಾತ್ರ.

ಸಿಬಂದಿ ಕೊರತೆ: 18 ಹುದ್ದೆಗಳು ಖಾಲಿ
ಕಾರ್ಕಳ ಐಟಿಐನಲ್ಲಿ ಒಟ್ಟು 18 ಹುದ್ದೆಗಳಿವೆ. 4 ಟ್ರೇಡ್‌ಗಳಲ್ಲಿ 7 ಯುನಿಟ್‌ಗಳಿವೆ. ಆದರೆ, ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕೇವಲ 5 ಮಂದಿ ಅತಿಥಿ ಬೋಧಕರು. ಇದರೊಂದಿಗೆ ಪೆರ್ಡೂರು ಐಟಿಐನ ಇಬ್ಬರು ಬೋಧಕರು ವಾರದಲ್ಲಿ ಕೆಲವು ದಿನ ಬಂದು ತರಗತಿ ಮಾಡಿ ತೆರಳುತ್ತಾರೆ. ಬೋಧಕರ ಕೊರತೆಯಿಂದಾಗಿ ತರಗತಿ ಅವಧಿಯಲ್ಲಿ ವಿದ್ಯಾರ್ಥಿಗಳೂ ತಮ್ಮ ಪಾಡಿಗೆ ತಾವಿರುತ್ತಾರೆ. ರಾಜ್ಯದಲ್ಲಿ ಒಟ್ಟು 269 ಸರಕಾರಿ ಐಟಿಐಗಳಿದ್ದು, ಶೇ. 67ರ ಪ್ರಮಾಣದಲ್ಲಿ ಹುದ್ದೆಗಳು ಖಾಲಿಯಿವೆ ಎನ್ನಲಾಗುತ್ತಿದೆ.

ನೇಮಕಾತಿ ನಡೆಯುತ್ತಿದೆ
ಕೆಪಿಎಸ್‌ಸಿಯಿಂದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಕಚೇರಿ ಕಾರ್ಯಗಳ ನಿರ್ವಹಣೆಗಾಗಿ ಕಾರ್ಕಳ ಐಟಿಐಗೆ ವಾರದಲ್ಲಿ ಮೂರು ದಿನ ಪೆರ್ಡೂರು ಐಟಿಐ ಸಿಬಂದಿಯನ್ನು ನಿಯೋಜಿಸಲಾಗಿದೆ. ಸಿಬಂದಿ ಕೊರತೆಯಿದ್ದಾಗ್ಯೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.
-ಕೆ.ಎಲ್‌. ನಾಗರಾಜ್‌, ಪ್ರಾಂಶುಪಾಲರು

2 ಕೋಟಿ ರೂ. ಬಿಡುಗಡೆ
ಗುಂಡ್ಯಡ್ಕ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಬಳಿ ಸುಮಾರು 1.5 ಎಕ್ರೆ ಸರಕಾರಿ ಜಾಗವನ್ನು ಐಟಿಐ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಉದ್ದೇಶದಿಂದ ಕಾದಿರಿಸಲಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ಕೈಗಾರಿಕಾ ಮತ್ತು ಉದ್ಯೋಗ ಇಲಾಖೆಗೆ ಪಿಡಬ್ಲ್ಯುಡಿಯು 3.5 ಕೋ. ರೂ. ಅಂದಾಜು ಪಟ್ಟಿಯ ಪ್ರಸ್ತಾವನೆ ಕಳುಹಿಸಿದ್ದು, 2 ಕೋ. ರೂ. ಅನುದಾನ ಬಿಡುಗಡೆ ಹಂತದಲ್ಲಿದ್ದು, ಆಡಳಿತಾತ್ಮಕ ಮಂಜೂರಾತಿ ಮಾತ್ರ ದೊರೆಯಬೇಕಿದೆ.

ಟಾಪ್ ನ್ಯೂಸ್

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Media powerhouse: ರಿಲಯನ್ಸ್‌- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ

Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ

4

Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

1-horoscope

Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.