Karkala ಕೂಲಿ ಕಾರ್ಮಿಕೆಯ ಮಗ‌ ರಾಷ್ಟ್ರಮಟ್ಟಕ್ಕೆ

Team Udayavani, Dec 23, 2023, 7:00 AM IST

Karkala ಕೂಲಿ ಕಾರ್ಮಿಕೆಯ ಮಗ‌ ರಾಷ್ಟ್ರಮಟ್ಟಕ್ಕೆ

ಕಾರ್ಕಳ: ಕಿತ್ತು ತಿನ್ನುವ ಬಡತನ, ಇರಲು ಸ್ವಂತ ಸೂರಿಲ್ಲ, ಬಾಡಿಗೆ ಮನೆಯಲ್ಲಿ ವಾಸ, ಹೊಟೇಲ್‌ನಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತ ಕುಟುಂಬವನ್ನು ಪೊರೆಯುತ್ತಿರುವ ತಾಯಿಯೊಬ್ಬರು ಮಗನ ಕ್ರೀಡಾಸಕ್ತಿಗೆ ನೀಡಿರುವ ಪ್ರೋತ್ಸಾಹ ಇಂದು ಆತನನ್ನು ರಾಷ್ಟ್ರ ಮಟ್ಟದ ವರೆಗೆ ಕೊಂಡೊಯ್ದಿದೆ. ಸಾಧನೆಗೆ ಬಡತನ ಅಡ್ಡಿಯಲ್ಲ.ಆತ್ಮವಿಶ್ವಾಸ, ಪರಿಶ್ರಮದಿಂದ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಗ್ರಾಮೀಣ ಭಾಗದ ಸರಕಾರಿ ಕನ್ನಡ ಶಾಲೆಯ ಈ ಪ್ರತಿಭೆಯೇ ಸಾಕ್ಷಿ.

ಕಲ್ಯಾ ಸರಕಾರಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ, ವರಂಗದ ಲೀಲಾ-ಹರೀಶ್‌ ದಂಪತಿಯ ಪುತ್ರ ಹಿತೇಶ್‌ ಈ ಸಾಧಕ. ಪುತ್ತೂರಿನ ಶ್ರೀ ರಾಮಕೃಷ್ಣ ಶಾಲೆಯಲ್ಲಿ ನಡೆದ 17ರ ವಯೋಮಾನದ ರಾಜ್ಯ ಮಟ್ಟದ ಬಾಲಕರ ಕೂಟದ 110 ಮೀ. ಹರ್ಡಲ್ಸ್‌ ಓಟದಲ್ಲಿ ಬೆಳ್ಳಿ ಪದಕ ಪಡೆದು ಶಿಮ್ಲಾದ ಡೆಹರಾಡೂನ್‌ನಲ್ಲಿ ಡಿಸೆಂಬರ್‌ ಅಂತ್ಯಕ್ಕೆ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಹಿತೇಶ್‌ಆಯ್ಕೆಯಾಗಿದ್ದಾರೆ. ಕಲ್ಯಾದ ಗರಡಿ ನಗರದ ಬಾಡಿಗೆ ಮನೆಯಲ್ಲಿ ಹಿತೇಶ್‌ ತಾಯಿ ಮತ್ತು ಸಹೋದರಿಯೊಂದಿಗೆ ವಾಸವಾಗಿದ್ದಾರೆ. ತಾಯಿ ಹೊಟೇಲ್‌ ಕಾರ್ಮಿಕರಾಗಿದ್ದು, ಅವರ ಸಂಪಾದನೆಯಲ್ಲೇ ಮನೆಯ ಬಾಡಿಗೆ, ಕುಟುಂಬದ ನಿರ್ವಹಣೆ, ದ್ವಿತೀಯ ಪಿಯುಸಿ ಓದುತ್ತಿರುವ ಹಿರಿಯ ಮಗಳ ವಿದ್ಯಾಭ್ಯಾಸ ಖರ್ಚು, ಹಿತೇಶ್‌ನ ಶಿಕ್ಷಣ ವೆಚ್ಚವನ್ನೆಲ್ಲ ಭರಿಸಬೇಕು.

ಮಗನ ಕ್ರೀಡಾಸಕ್ತಿಗೆ ಹಣ ಹೊಂದಿಸಲು ತಾಯಿ ಹರಸಾಹಸ ಪಡುತ್ತಿದ್ದು, ಅಲ್ಪಸ್ವಲ್ಪ ಹಣ ಉಳಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ. ಹಿತೇಶ್‌ಗೆ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ವಸಂತ್‌ ನಾೖಕ್‌ ಮತ್ತು ಪ್ರೌಢಶಾಲೆಯಲ್ಲಿ ದೈ.ಶಿ. ಶಿಕ್ಷಕ ಚಂದ್ರಶೇಖರ್‌ ನೀಡುತ್ತಿದ್ದಾರೆ.

ಎಲ್ಲದರಲ್ಲೂ ಮುಂದು
6 ಮತ್ತು 9 ತರಗತಿಯಲ್ಲಿ ರಾಜ್ಯ ಮಟ್ಟದ ಹರ್ಡಲ್ಸ್‌ನಲ್ಲಿ ಸ್ಪರ್ಧೆ, ವಿಭಾಗ ಮಟ್ಟದ ಖೋಖೋ ಸ್ಪರ್ಧೆಯಲ್ಲಿ 2 ಬಾರಿ ಹಿತೇಶ್‌ ಭಾಗವಹಿಸಿದ್ದಾರೆ. ಜಿಲ್ಲಾ ಮಟ್ಟದ ಖೋಖೋದಲ್ಲಿ 2 ಬಾರಿ ಸವ್ಯಸಾಚಿ ಆಟಗಾರ ಪ್ರಶಸ್ತಿಯ ಜತೆಗೆ‌ ಹಲವು ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. 8ನೇ ತರಗತಿಯಲ್ಲಿ ಎನ್‌ಎಂಎಂಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಾರ್ಷಿಕ ವಿದ್ಯಾರ್ಥಿ ವೇತನಕ್ಕೆ ಪಾತ್ರರಾಗಿದ್ದಾರೆ.

ದೈಹಿಕ ಶಿಕ್ಷಣ ಶಿಕ್ಷಕರು ನೀಡುವ ತರಬೇತಿ ಬಿಟ್ಟರೆ ಬೇರೆ ಯಾವುದೇ ಹೆಚ್ಚಿನ ತರಬೇತಿ ಸಿಗುತ್ತಿಲ್ಲ. ಕ್ರೀಡೆಗಬೇಕಾದ ಅಗತ್ಯ ಪರಿಕರಗಳೂ ಈತನಲ್ಲಿಲ್ಲ. ತರಬೇತುದಾರರು, ಶಿಕ್ಷಕರು, ಸ್ಥಳೀಯ ಸಂಘ-ಸಂಸ್ಥೆಗಳು ಬಾಲಕನ ಸಾಧನೆ ಗುರುತಿಸಿ ತಮ್ಮಿಂದಾದ ನೆರವು ನೀಡುತ್ತಿದ್ದಾರೆ. ಆದರೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕಿದ್ದರೆ ಇನ್ನಷ್ಟು ಸೌಕರ್ಯ ಅಗತ್ಯ. ಕ್ರೀಡೆಯ ಜತೆಗೆ ಕಲಿಕೆಯಲ್ಲೂ ಮುಂದಿರುವ ಹಿತೇಶ್‌ 9ನೇ ತರಗತಿಯಲ್ಲಿ ತರಗತಿಗೆ ಟಾಪರ್‌ ಆಗಿ ಹೊರಹೊಮ್ಮಿದ್ದರು. ಪ್ರಸ್ತುತ ಶಾಲಾ ನಾಯಕನೂ ಹೌದು.

ಬೆಳಗ್ಗೆದ್ದು ಮನೆಮನೆಗೆ
ಪತ್ರಿಕೆ, ಹಾಲು ವಿತರಣೆ
ಹಿತೇಶ್‌ ಬೆಳಗ್ಗೆ 5 ಗಂಟೆಗೆದ್ದು ಓದುವುದರ ಜತೆಗೆ ಶಾರೀರಿಕ ಅಭ್ಯಾಸವನ್ನೂ ಮಾಡುತ್ತಾರೆ.ಬಡತನವಿದ್ದ ಕಾರಣ ಇತ್ತೀಚಿನ ದಿನಗಳ ತನಕ ಪ್ರತೀ ದಿನ ಬೆಳಗ್ಗೆ ಹಲವು ಮನೆಗಳಿಗೆ ಹಾಲು, ದಿನ ಪತ್ರಿಕೆ ಹಾಕುತ್ತಿದ್ದರು. ಅಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಕೆಲವು ದಿನಗಳಿಂದ ಬಿಟ್ಟಿದ್ದಾರೆ. ಮನೆಮನೆಗೆ ಪತ್ರಿಕೆ ಹಾಕುವಾಗ ಉದಯವಾಣಿ ಕ್ರೀಡಾಪುಟ ಓದುತ್ತಿದ್ದೆ. ಅಲ್ಲಿರುವ ಕ್ರೀಡಾಸಾಧಕರ ಬಗ್ಗೆ ತಿಳಿಯುತ್ತಿದ್ದೆ.ಅದು ಕೂಡ ನನಗೆ ಕ್ರೀಡೆಯಲ್ಲಿ ಆಸಕ್ತಿ ತಂದಿದೆ ಎನ್ನುತ್ತಾರೆ ಹಿತೇಶ್‌.

ಸೂಕ್ತ ಪ್ರೋತ್ಸಾಹ ದೊರೆತಲ್ಲಿ ಈತ ಖಂಡಿತ ದೊಡ್ಡ ಮಟ್ಟದ ಸಾಧನೆ ತೋರುತ್ತಾನೆೆ. ಸರಕಾರಿ ಶಾಲೆಯಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಜಿಲ್ಲೆಯ ಏಕೈಕ ಸ್ಪರ್ಧಿ ಎನ್ನುವುದು ಇನ್ನೊಂದು ಖುಷಿ. ಶಿಕ್ಷಕ ವರ್ಗ ಸಂಪೂರ್ಣ ಸಹಕಾರ ನೀಡುತ್ತಿದೆ.
-ಸುಮನಾ, ಮುಖ್ಯ ಶಿಕ್ಷಕಿ ಕಲ್ಯಾ ಸ. ಪ್ರೌಢ ಶಾಲೆ

ಆಟದಲ್ಲಿ ನಾನು ಏನಾದರೂ ಸಾಧಿಸಬೇಕು ಎನ್ನುತ್ತಿರುತ್ತಾನೆ. ಅದಕ್ಕೆ ತಕ್ಕಂತೆ ಅಭ್ಯಾಸ ಮಾಡುತ್ತಿದ್ದಾನೆ. ಅವನ ಆಸಕ್ತಿಗೆ ನನ್ನಿಂದಾದ ಗರಿಷ್ಠ ಸಹಾಯ ಮಾಡುತ್ತಿದ್ದೇನೆ. ದಾನಿಗಳು ಯಾರಾದರೂ ಮುಂದೆ ಬಂದರೆ ಅವನ ಸಾಧನೆಗೆ ಪೂರಕ ಆಗಬಹುದು.
– ಲೀಲಾ, ಕ್ರೀಡಾಪಟುವಿನ ತಾಯಿ

-ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

8

Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.