ಕಾರ್ಕಳ ಕಜೆ ಅಕ್ಕಿ, ಬಿಳಿ ಬೆಂಡೆ ಬ್ರ್ಯಾಂಡಿಂಗ್‌ ಬಿಡುಗಡೆ


Team Udayavani, Jan 19, 2021, 3:20 AM IST

ಕಾರ್ಕಳ ಕಜೆ ಅಕ್ಕಿ, ಬಿಳಿ ಬೆಂಡೆ ಬ್ರ್ಯಾಂಡಿಂಗ್‌ ಬಿಡುಗಡೆ

ಕಾರ್ಕಳ: ಸ್ಥಳೀಯ ಉತ್ಪನ್ನ ಗಳಾದ ಕಾರ್ಲ ಕಜೆ ಕುಚ್ಚಲು ಅಕ್ಕಿ  ಹಾಗೂ ಬಿಳಿ ಬೆಂಡೆ ಉತ್ಪನ್ನಗಳ ಬ್ರ್ಯಾಂಡ್‌ ಬಿಡುಗಡೆ ಅಂಗವಾಗಿ ಸೋಮವಾರ ನಡೆದ ಕಾರ್ಯಕ್ರಮವು ಅಕ್ಷರಶಃ ರೈತರ ಮೇಳವಾಗಿ  ಮಾರ್ಪಾಟುಗೊಂಡಿತ್ತು.

ಕರ್ನಾಟಕ ಸರಕಾರ, ಜಿ.ಪಂ. ಉಡುಪಿ, ಕೃಷಿ ಇಲಾಖೆ ಕಾರ್ಕಳ ಹಾಗೂ ಕೃಷಿ ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಆತ್ಮ ಯೋಜನೆಯಡಿ  ನಡೆದ “ಒಂದು ತಾಲೂಕು ಒಂದು ಉತ್ಪನ್ನ’ ಯೋಜನೆಯಡಿ ಎರಡು ಉತ್ಪನ್ನಗಳ ಬಿಡುಗಡೆ ಕಾರ್ಯ ಕ್ರಮ ನಡೆಯಿತು.

ಕುಕ್ಕುಂದೂರು ಗ್ರಾಮ ಪಂಚಾಯತ್‌ ಮೈದಾನದಲ್ಲಿ ರೈತರಿಗೆ ಉಪಯುಕ್ತ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.

ಕೃಷಿ ವಸ್ತು ಪ್ರದರ್ಶನಕ್ಕೆ  ಕೃಷಿ ಸಚಿವ ಬಿ.ಸಿ. ಪಾಟೀಲ್‌ ಚಾಲನೆ ನೀಡಿದರು. ಮಾರಾಟ ಮೇಳದಲ್ಲಿ   ರೈತರ ಮೇಳ  ಪ್ರಗತಿಪರ ರೈತರು ಬೆಳೆದಿದ್ದ  ಆಹಾರ ಬೆಳೆಗಳ ಪ್ರದರ್ಶನ ನಡೆಯಿತು. ಯಂತ್ರೋಪಕರಣಗಳ ಪ್ರಾತ್ಯಕ್ಷಿತೆ, ಸಮಗ್ರ ಕೃಷಿ ಪದ್ಧತಿ, ಸುಸ್ಥಿರ ಕೃಷಿ, ಸಾವಯವ ಕೃಷಿ ಪರಂಪರೆ ಹೀಗೆ ಅನೇಕ ಮಾದರಿಗಳು  ಮೇಳದಲ್ಲಿ  ಕೃಷಿ ಪರಂಪರೆ ಎತ್ತಿ ಹಿಡಿದವು.

ಜಿ.ಪಂ.  ಉಡುಪಿ, ತಾ.ಪಂ ಕಾರ್ಕಳ, ಪಶುಪಾಲನ ಮತ್ತು ವೈದ್ಯಕೀಯ ಇಲಾಖೆ ಕಾರ್ಕಳ, ಕಾರ್ಕಳ ತೋಟಗಾರಿಕೆ ಉತ್ಪಾದಕ ಕಂಪೆನಿ ನಿಯಮಿತ.  ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಜೇನುಗಾರಿಕೆ ಮತ್ತು ಮರಿಪಾಲನಾ ಕೇಂದ್ರ ಬ್ರಹ್ಮಾವರ, ಕರ್ನಾಟಕ ಸರಕಾರ ಕುಕ್ಕುಟ ಮಂಡಳಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ವಲಯ, ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಹಾಗೂ ವಿವಿಧ ಯಂತ್ರೋಪಕರಣಗಳ 20 ಮಳಿಗೆಗಳನ್ನು ತೆರೆದಿದ್ದು ಕೃಷಿಕರನ್ನು ಆಕರ್ಷಿಸಿತು.

ಸಾಂಕೇತಿಕ ಬಿಡುಗಡೆ :

ಸಾಂಕೇತಿಕವಾಗಿ ಕಾರ್ಲ ಕಜೆ ಹಾಗೂ ಕಾರ್ಕಳ ಬಿಳಿ ಬೆಂಡೆ ಬೀಜ ವಿತರಣೆ ನಡೆಯಿತು. ಕಾರ್ಲ ಕಜೆ ಸಂಸ್ಕರಣೆಯಲ್ಲಿ ಸಹಕರಿಸಿದ ಮಿಲ್‌ನವರಿಗೆ ಗೌರವ ನಡೆಯಿತು. ಭಾರತೀಯ ಕಿಸಾನ್‌ ಸಂಘದವರು ಸಚಿವರಿಗೆ ಮನವಿ ಮಾಡಿದರು.

ತಳಿಗಳ ಪ್ರದರ್ಶನ :

ಕೃಷಿ ಯಂತ್ರೋಪಕರಣಗಳ ಮಾರಾಟ, ಗೊಬ್ಬರ ಘನ ಜೀವನಾಮೃತ, ಗೇರು ಬೀಜಗಳ ತಳಿ, ತರಕಾರಿ ಬೀಜಗಳ ಪ್ರದರ್ಶನ, ಅಮೃತ ಸಾವಯವ ಉತ್ಪನ್ನ ಮಳಿಗೆ, ಅಡಿಕೆ, ಸೀಯಾಳ, ಬಾಳೆ ವಿವಿಧ ತರಕಾರಿ, ಗೇರು ಬೀಜ  ತಳಿಗಳ ಪ್ರದರ್ಶನವಿತ್ತು. ಭತ್ತದ ತಿರಿ, ಭತ್ತದ ತಳಿಗಳ ಪ್ರದರ್ಶನ, ಗೊಬ್ಬರ ಅನಿಲ ಸ್ಥಾವರ. ಕ್ಯಾಶ್ಯೂಸ್‌, ಟಿಲ್ಲರ್‌, ಅಡಿಕೆ ಮರ ಏರುವ ಯಂತ್ರ ಮುಂತಾದ ಕೃಷಿ ಸಂಬಂಧಿಸಿದ ಯಂತ್ರೋಪಕರಣಗಳ ಮಳಿಗೆಗಳು ಗಮನ ಸೆಳೆದವು. ಕೃಷಿ ಇಲಾಖೆ ಪ್ರಗತಿಪರ ರೈತರು ಬೆಳೆದ ಬೆಳೆಗಳು ಕಣ್ಮಣ ಸೆಳೆಯಿತು.

ಶಾಸಕ ವಿ ಸುನಿಲ್‌ ಕುಮಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ಇತಿಹಾಸ ಸೃಷ್ಟಿಯಾಗಿದೆ. ಸ್ಥಳೀಯ ರೈತರು ಬೆಳೆದ ಉತ್ಪನ್ನ ರಾಜ್ಯ ಮಾರುಕಟ್ಟೆ  ಪ್ರವೇಶಿಸಬೇಕು. ಆಗ ತಾ| ರೈತರ ಘನತೆ ಹೆಚ್ಚುತ್ತದೆ. ದೇಶ, ರಾಜ್ಯದ ವಿವಿ ಧೆ ಡೆ ಯ ಅಲ್ಲಿಯ ರೈತರು ಬೆಳೆದ ಉತ್ಪನ್ನ ಬ್ರ್ಯಾಂಡ್‌ ಆದಂತೆ ಇಲ್ಲಿಯ ಉತ್ಪನ್ನವು  ಬ್ರ್ಯಾಂಡ್‌ ಆಗಿ  ವಿಸ್ತರಿಸಬೇಕಿದೆ ಎಂದರು.

ಕೌರವನಿಂದ – ಗೌರವ :

ಬ್ರ್ಯಾಂಡ್‌  ಉತ್ಪನ್ನ  ಅನಾವರಣಗೊಳಿಸಿ ಮಾತನಾಡಿದ ಸಚಿವರು ಭಾಷಣ ಮಧ್ಯೆ  ಕರಾವಳಿ  ಜಿಲ್ಲೆಯ ಕೃಷಿಕರ ಬಗ್ಗೆ ಅಭಿಮಾನ ವ್ಯಕ್ತಪಡಿಸಿ ಮಾತುಗಳನ್ನಾಡಿದರು. ಇದೇ ವೇಳೆ ಅವರು ಕಾರ್ಕಳ ಅಕ್ಕಿಗೆ ಸರಕಾರದ ಮಾನ್ಯತೆ ನೀಡುವ ಮೂಲಕ ಕಾರ್ಕಳಕ್ಕೆ  ಕೌರವನಿಂದ ಗೌರವ ನೀಡಲಾಗುವುದು ಎಂದು ಹಾಸ್ಯ ಚಟಾಕಿ ಹಾರಿಸಿದರು.

ಶಾಸಕ ವಿ. ಸುನಿಲ್‌ಕುಮಾರ್‌ ಅವರು ಭಾಷಣದಲ್ಲಿ  2004ರಲ್ಲಿ ಶಾಸಕರಾಗಿದ್ದ  ಬಿ.ಸಿ. ಪಾಟೀಲ್‌ ಎತ್ತಿನ ಗಾಡಿಯಲ್ಲಿ  ವಿಧಾನ ಸಭೆಗೆ ಬರುವ ಮೂಲಕ ಅವರಲ್ಲಿದ್ದ ಕೃಷಿ ಪ್ರೀತಿಯನ್ನು ತೋರ್ಪಡಿಸಿದ್ದರು ಎಂದು ಉಲ್ಲೇಖೀಸಿದರು.

ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ,  ಕೃಷಿ ಮತ್ತು ಕೈಗಾರಿಕೆ ಸ್ಥಾಯೀ ಸಮಿತಿ ಅಧ್ಯಕ್ಷ ಸುಮಿತ್‌ ಶೆಟ್ಟಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಎಂ.ಕೆ. ನಾಯ್ಕ  ಮಾತನಾಡಿದರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಹೆಬ್ರಿ ತಾ.ಪಂ. ಅಧ್ಯಕ್ಷ  ರಮೇಶ ಪೂಜಾರಿ, ಪುರಸಭೆ ಅಧ್ಯಕ್ಷೆ ಸುಮಾಕೇಶವ್‌, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌,  ಜಿ.ಪಂ. ಸದಸ್ಯರಾದ ರೇಷ್ಮಾ ಉದಯ ಶೆಟ್ಟಿ, ಉದಯ್‌ ಎಸ್‌. ಕೋಟ್ಯಾನ್‌, ಜ್ಯೋತಿ ಹರೀಶ್‌ ಪೂಜಾರಿ,  ತಾ.ಪಂ. ಉಪಾಧ್ಯಕ್ಷ ಹರೀಶ್‌ ನಾಯಕ್‌,  ಭಾರತೀಯ ಕಿಸಾನ್‌ ಸಂಘದ ಅಧ್ಯಕ್ಷ  ಉಮಾಕಾಂತ ರಾನಡೆ,  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ  ಮೋಹನದಾಸ ಶೆಟ್ಟಿ, ಕಾರ್ಕಳ ತೋಟಗಾರಿಕೆ ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ಆಂತೋನಿ ಡಿ’ಸೋಜಾ,  ಜಿ.ಪಂ. ಸಿಇಒ ಡಾ| ನವೀನ್‌ ಭಟ್‌,  ತೋಟಗಾರಿಕೆ ಉಪನಿರ್ದೇಶಕಿ ಭುವನೇಶ್ವರಿ  ವೇದಿಕೆಯಲ್ಲಿದ್ದರು.

ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಸ್ವಾಗತಿಸಿದರು. ನವೀನಚಂದ್ರ ಜೈನ್‌ ಪ್ರಸ್ತಾವನೆಗೈದರು. ಕೃಷಿ ಅಧಿಕಾರಿ ಶ್ರೀನಿವಾಸ್‌ ವಂದಿಸಿದರು. ಯೋಗೀಶ್‌ ಕಿಣಿ ರೈತ ಗೀತೆ ಹಾಡಿದರು.

ಹಾಡುಗಳ ಸುಧೆ :

ಕಾರ್ಲಕಜೆ ಬಿಡುಗಡೆ ಕಾರ್ಯಕ್ರಮಕ್ಕೆ ಮುಂಚಿತ ಕಲಾವಿದ ಯೋಗೀಶ್‌ ಕಿಣಿ ಹಾಗೂ ಬಳಗದವರಿಂದ ಗಾಯನ ಕಾರ್ಯಕ್ರಮ ನಡೆಯಿತು. ಕೃಷಿ ಗೀತೆ, ನಾಡಗೀತೆ,  ಭಾವಗೀತೆ ಮೊದಲಾದ ಸುಮಧುರ ಹಾಡುಗಳನ್ನು  ಶುಶ್ರಾವ್ಯವಾಗಿ ಹಾಡಿ  ಗಮನಸೆಳೆದರು.

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.