ಕಾರ್ಕಳ-ಮಂಗಳೂರು ಸರಕಾರಿ ಬಸ್‌ ಆರಂಭಕ್ಕೆ ಪ್ರಯಾಣಿಕರ ಬೇಡಿಕೆ


Team Udayavani, Feb 28, 2017, 5:14 PM IST

buss-1.jpg

ಸರಕಾರಿ ಬಸ್‌ ವಿರೋಧ ನೀತಿ: ಖಾಸಗಿ ಬಸ್‌ ಮಾಲಕರಿಗೆ ಶರಣಾಗಿದೆಯೇ ಆರ್‌ಟಿಒ

ಕಾರ್ಕಳ:ಇತ್ತೀಚೆಗಷ್ಟೇ ಆರಂಭಿಸಿದ ಕಾರ್ಕಳ – ಉಡುಪಿ ನಗರ ಸಾರಿಗೆ ಬಸ್‌ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ನಗರದ ಪ್ರಯಾಣಿಕರಲ್ಲಿ ಸಂತಸ ಮೂಡಿಸಿರುವ ಬೆನ್ನಲ್ಲೇ ಇದೀಗ ಕಾರ್ಕಳ-ಮಂಗಳೂರು ದಾರಿಗೂ ಸರಕಾರಿ ಬಸ್‌ ಭಾಗ್ಯ ಬೇಕು ಎನ್ನುವ ಪ್ರಯಾಣಿಕರ ಒತ್ತಾಸೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.ಕಾರ್ಕಳ-ಮಂಗಳೂರು ದಾರಿ ಮಧ್ಯೆ ಯಾವುದೇ ಸರಕಾರಿ ಎಕ್ಸ್‌ಪ್ರೆಸ್‌ ಸೇವೆಗಳೂ ಅಥವಾ ನಗರ ಸಾರಿಗೆ ಬಸ್‌ ಸೇವೆಗಳೂ ಇಲ್ಲದೇ ಪ್ರಯಾಣಿಕ ಸರಕಾರಿ ಬಸ್‌ ಸೇವೆಗಳಿಂದ ವಂಚಿತನಾಗಿದ್ದಾನೆ.

ತುಂಬಿ ತುಳುಕುವ ಖಾಸಗಿ ಬಸ್‌
ಕಾರ್ಕಳ-ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಕಾರ್ಕಳದತ್ತ ನಿತ್ಯ ಸಂಚರಿಸುವ ಬಸ್‌ಗಳಲ್ಲಿ ಅನಿಯಮಿತ ಪ್ರಯಾಣಿಕರನ್ನು ತುಂಬಿಸಲಾಗುತ್ತಿದೆ.ಬಸ್‌ನ ಸೀಟುಗಳಿಗಿಂತಲೂ ದುಪ್ಪಟ್ಟು ಜನರನ್ನು ತುಂಬಿಸಲಾಗುತ್ತಿದೆ.ಇದರಿಂದ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿದೆ. ಜತೆಗೆ ಮಂಗಳೂರಿನಿಂದ ಕಾರ್ಕಳದವರೆಗೂ ಪ್ರಯಾಣಿಕರು ಹಣ ಕೊಟ್ಟು ನಿಂತೇ ಪ್ರಯಾಣ ಮಾಡುವ ದುಸ್ತರ ಸ್ಥಿತಿ ಎದುರಾಗಿದೆ. ಅಲ್ಲದೇ ನಿಯಮಗಳನ್ನು ಗಾಳಿಗೆ ತೂರಿ ಬಸ್‌ಗಳು ಸಂಚರಿಸುತ್ತಿವೆ. ಖಾಸಗಿ ಬಸ್‌ಗಳಲ್ಲಿ ಸೇವಾ ಕೊರತೆ ಇದ್ದು ಕೆಲವು ಕಡೆ ಪ್ರಯಾಣಿಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿ ಇಲ್ಲ  ಎನ್ನುವುದು ಕೆಲ ಪ್ರಯಾಣಿಕರ ಅಭಿಪ್ರಾಯ. ಹೀಗಾಗಿ ಸರಕಾರಿ ಬಸ್‌ಗಳ ಆವಶ್ಯಕತೆ ಇದೆ, ಅಲ್ಲದೇ ಕಾರ್ಕಳ- ಮಂಗಳೂರು ದಾರಿಯಾಗಿ ದಿನೇ ದಿನೇ ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ತೆರಳುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಸರಕಾರಿ ಬಸ್‌ ಪಾಸ್‌ಗಳಿಂದ ತೀರಾ ಉಳಿತಾಯವಾಗಲಿದೆ. ಖಾಸಗಿ ಬಸ್‌ ಪ್ರಯಾಣ ದರ ದಿನೇ ದಿನೇ ಜಾಸ್ತಿಯಾಗುತ್ತಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ತೀರಾ ಉಳಿತಾಯ ತಂದುಕೊಡುವ ಪಾಸ್‌ನ ವ್ಯವಸ್ಥೆಯೂ ಖಾಸಗಿ ಬಸ್‌ಗಳಲ್ಲಿಲ್ಲ. ಹಾಗಾಗಿ ಸರಕಾರಿ ಬಸ್‌ ಸೇವೆ ಅಗತ್ಯವಿದೆ ಎನ್ನುವುದು ವಿದ್ಯಾರ್ಥಿಗಳ ಹಾಗೂ ಮಂಗಳೂರಿಗೆ ಖಾಸಗಿ ಬಸ್‌ಗಳ ಮುಖಾಂತರ ಸಾಗುವ ಪ್ರಯಾಣಿಕರ ಒತ್ತಾಸೆ.

ಆರ್‌ಟಿಒದಿಂದ ಸರಕಾರಿ ಬಸ್‌ ವಿರೋಧಿ ನೀತಿ
ಈ ಹಿಂದೆ ಮಂಗಳೂರಿಗೂ ಸರಕಾರಿ ಬಸ್‌ಗಳು ಬೇಕು ಎನ್ನುವ ಬೇಡಿಕೆಗಳು ಕೇಳಿ ಬಂದಿದ್ದವು. ಈ ಕುರಿತು ಆರ್‌ಟಿಒಗೆ ಮಾಹಿತಿ ಇದ್ದರೂ ಆರ್‌ಟಿಒ ಖಾಸಗಿ ಬಸ್‌ಗಳ ಕಾಣದ ಕೈಗಳ ಲಾಬಿಗೆ ಮಣಿದು ಸುಮ್ಮನೇ ಕುಳಿತಿದೆ ಮತ್ತು ಈ ಕುರಿತು ಯಾವುದೇ ಆಸಕ್ತಿಯನ್ನು ತೋರಿಸುತ್ತಿಲ್ಲ. ಸರಕಾರಿ ಬಸ್‌ ವ್ಯವಸ್ಥೆಯನ್ನೇ ಈ ರೀತಿ ಕಡೆಗಣಿಸುವ ಹಾಗೂ ಸರಕಾರಿ ಬಸ್‌ಗಳಿಗೆ ಉತ್ತೇಜನ ಕೊಡದ ಆರ್‌ಟಿಒ ಅಧಿಕಾರಿಗಳು ಜನರನ್ನೂ ಸರಕಾರಿ ಬಸ್‌ ಸೇವೆಯಿಂದ ವಂಚಿತರನ್ನಾಗಿಸುವ ಜನವಿರೋಧಿ ನೀತಿ ಅನುಸರಿಸುತ್ತಿದೆ ಎನ್ನುವುದು ಆರ್‌ಟಿಒ ಮೇಲಿರುವ ಗಂಭೀರ ಆರೋಪ.

ಇನ್ನಾದರೂ ಆರ್‌ಟಿಒ ಖಾಸಗಿ ಬಸ್‌ಗಳ ಲಾಬಿಗೆ ಮಣಿಯುವುದನ್ನು ಬಿಟ್ಟು ಸಮಾಜಮುಖೀಯಾಗಿ ಯೋಚಿಸಲಿ.ಸಾವಿರಾರು  ಪ್ರಯಾಣಿಕರಿಗೆ ಅನುಕೂಲಕರವಾಗಿರುವ ಕಾರ್ಕಳ-ಮಂಗಳೂರು ದಾರಿ ಮಧ್ಯೆ ಸರಕಾರಿ ಬಸ್‌ ಸೇವೆ ಆರಂಭಿಸಲು ತತ್‌ಕ್ಷಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ಒಂದು ವೇಳೆ ಮುಂದೆಯೂ ಆರ್‌ಟಿಒ ಈ ಕುರಿತು ಮೃದು ಧೋರಣೆ ತಣೆದು ಸರಕಾರಿ ಬಸ್‌ ವಿರೋಧಿ ನೀತಿ ಅನುಸರಿಸಿದರೆ ಮೊದಲೇ ಆರ್‌ಟಿಒ ಮೇಲೆ ವಿಶ್ವಾಸ ಕಳೆದುಕೊಂಡಿರುವ ಜನತೆ ಪೂರ್ತಿ ವಿಶ್ವಾಸ ಕಳೆದುಕೊಳ್ಳುವ ದಿನ ದೂರವಿಲ್ಲ.

– ಪ್ರಸಾದ್‌ ಶೆಣೈ, ಕಾರ್ಕಳ

ಟಾಪ್ ನ್ಯೂಸ್

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Karkala: ಬೈಕ್‌ ಢಿಕ್ಕಿ; ಗಾಯ

Karkala: ಬೈಕ್‌ ಢಿಕ್ಕಿ; ಗಾಯ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

school

KPS ಹೆಚ್ಚುವರಿ ಎಲ್‌ಕೆಜಿ, 1ನೇ ತರಗತಿ ತೆರೆಯಲು ಅವಕಾಶ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.