ಕಾರ್ಕಳ ಪುರಸಭೆ ಸಾಮಾನ್ಯ ಸಭೆ: ಪ್ರತಿಧ್ವನಿಸಿತು ನೀರಿನ ಸಮಸ್ಯೆ
Team Udayavani, Mar 31, 2017, 12:08 PM IST
ಕಾರ್ಕಳ: ಕಾರ್ಕಳ ಪುರಸಭೆಯ ಸಾಮಾನ್ಯ ಸಭೆ ಗುರುವಾರ ನಡೆಯಿತು.ವಾರ್ಡ್‌ಗಳಲ್ಲಿ ಕಾಡುತ್ತಿರುವ ನೀರಿನ ಸಮಸ್ಯೆ, ನೀರು ಬಿಡುವವರ ನಿರ್ಲಕ್ಷತನ,ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ವಹಿಸದೇ ಇದ್ದದ್ದು, ಟೆಂಡರ್ ಕರೆಯುವ ಮೊದಲೇ ಕಾಮಗಾರಿಗಳು ನಡೆದದ್ದು ಮೊದಲಾದ ವಿಷಯಗಳು ಸಭೆಯಲ್ಲಿ ಚರ್ಚೆಗೆ ಗ್ರಾಸವಾದವು.
ನೀರಿನ ಸಮಸ್ಯೆ :
ನೀರು ಬಿಡುವವರ ರಜೆ
ನೀರಿನ ಸಮಸ್ಯೆಯಿಂದ ವಿವಿಧ ವಾರ್ಡ್‌ಗಳು ಕಂಗೆಟ್ಟಿವೆ. ನೀರು ಬಿಡುವವರು ರಜೆ ಹಾಕಿ ಮನೆಯಲ್ಲಿ ಕೂತಿದ್ದಾರೆ. ನೀರು ಬಿಡುವವರಿಂದಲೇ ದಿನನಿತ್ಯ ಸಮಸ್ಯೆಗಳು ಉದ್ಭವಿಸುತ್ತಿವೆ. ತಮ್ಮ ವಾರ್ಡ್‌ಗಳಿಗೆ 8 ದಿನಗಳಿಂದ ಈ ರೀತಿಯ ಸಮಸ್ಯೆಯಾಗುತ್ತಿದೆ ಎಂದು ಸದಸ್ಯರಾದ ಯೋಗೀಶ್, ಶಾಂತಿ, ರೆಹಮತ್, ನಳಿನಿ, ಪಾರ್ಶ್ವನಾಥ್, ಪ್ರಕಾಶ್ ರಾವ್ ಮೊದಲಾದವರು ದೂರಿದರು.
ನೀರು ಹಾಕುವವರಿಗೆ ರಜೆ ನೀಡುವವರು ಯಾರು? ದಿಢೀರ್ ಕರೆ ಮಾಡಿ ರಜೆ ನೀಡುವಂತೆ ಮುಖ್ಯಾಧಿಕಾರಿಯವರಲ್ಲಿ ರಜೆ ಕೇಳುವ ನೌಕರರಿಂದ ನೀರು ಬಿಡುವ ಪ್ರಕ್ರಿಯೆಯಲ್ಲಿ ಸಮಸ್ಯೆಗಳಾಗುತ್ತಿವೆ.ಇಂತಹ ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು. ನೀರಿನ ಸಮಸ್ಯೆ ಉದ್ಭವಿಸುವಲ್ಲಿ ಇದೊಂದು ಮುಖ್ಯ ಕಾರಣ ಎಂದು ಸದಸ್ಯರು ಆಗ್ರಹಿಸಿದರು.
ಸದಸ್ಯ ನವೀನ್ ದೇವಾಡಿಗ ಮಾತನಾಡಿ, ನೀರಿನ ಸಮಸ್ಯೆಗಳಿರುವ ವಾರ್ಡ್‌ಗಳಿಗೆ ಟ್ಯಾಂಕರ್‌ನಲ್ಲಿ ನೀರು ವಿತರಣೆ ವ್ಯವಸ್ಥೆ ಮಾಡಬೇಕು. ನೀರಿನ ಗೇಟುಗಳನ್ನು ಪರ್ಪಲ್‌ಗುಡ್ಡೆ ಪ್ರದೇಶಗಳಲ್ಲಿ ಮನಬಂದಂತೆ ತೆಗೆಯಲಾಗುತ್ತಿದೆ. ಇದರಿಂದಾಗುವ ಪೈಪ್‌ಗ್ಳ ಹಾನಿಗೆ ಯಾರು ಜವಾಬ್ದಾರರು? ಎಂದು ಪ್ರಶ್ನಿಸಿದರು.
ನೀರು ಬಿಡುವವರನ್ನು ಬದಲಾಯಿಸಬೇಕು ಹಾಗೂ ನೀರು ಬಿಡುವವರನ್ನು ಹತೋಟಿಗೆ ತರಲು ಸರ್ವಾನುಮತದ ನಿರ್ಣಯವಾಗಬೇಕು ಎಂದು ಸದಸ್ಯೆ ರೆಹಮತ್ ಹೇಳಿದರು. ಸದಸ್ಯ ಮಹಮ್ಮದ್ ಶರೀಫ್ ಮಾತನಾಡಿ, ಪುರಸಭೆಯ ನಿರ್ಧಾರಗಳನ್ನು ನೀರುಬಿಡುವ ಕಾರ್ಮಿಕರು ಕೇಳದೇ ಇದ್ದಲ್ಲಿ ಅವರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮುಖ್ಯಾಧಿಕಾರಿಯವರು ದೂರು ನೀಡಬೇಕು ಎಂದರು.
ಸದಸ್ಯ ಅಶ#ಕ್ ಅಹಮ್ಮದ್ ಮಾತನಾಡಿ,ಜರಿಗುಡ್ಡೆ ಪ್ರದೇಶವನ್ನು ಕಡೆಗಣಿಸಲಾಗುತ್ತಿದೆ. ನಗರೋತ್ಥಾನ ಯೋಜನೆಯಡಿ ಅನುದಾನ ಬಂದ ಬಳಿಕ ಪೈಪ್‌ಲೈನುಗಳನ್ನು ಮಾಡಿದ್ದಲ್ಲಿ ಸಮಸ್ಯೆ ಮರುಕಳಿಸುತ್ತಿರಲಿಲ್ಲ ಎಂದರು.
ಟೆಂಡರ್ ಬಿಡುವ ಮೊದಲೇ ಕಾಮಗಾರಿ ಖತಂ!
ಟೆಂಡರ್ ಬಿಡುವ ಮೊದಲೇ ಪುರಸಭಾ ವ್ಯಾಪ್ತಿಯಲ್ಲಿ ಕಾಮಗಾರಿಗಳು ನಡೆದೂ ಆಗಿವೆ ಎನ್ನುವ ಸುದ್ದಿ ಇದೆ. ಆದರೆ ನನ್ನ ವಾರ್ಡ್‌ನಲ್ಲಿ ಈ ವರೆಗೆ ಯಾವ ಕೆಲಸಗಳೂ ನಡೆದಿಲ್ಲ, ಕಾಮಗಾರಿ ಆಗಿದೆ ಎಂದಾದರೆ ಅದು ಎಲ್ಲಿ ಆಗಿದೆ ಎನ್ನುವ ಮಾಹಿತಿ ಸಿಗಲಿ ಎಂದು ಅಶ#ಕ್ ಅಹಮ್ಮದ್ ಮುಖ್ಯಾಧಿಕಾರಿಗಳಿಗೆ ಸವಾಲು ಎಸೆದರು.
ಸಭೆಯಲ್ಲಿ ಅಧ್ಯಕ್ಷೆ ಅನಿತಾ ಅಂಚನ್, ಉಪಾಧ್ಯಕ್ಷ ಗಿರಿಧರ್ ನಾಯಕ್, ಸ್ಥಾಯೀ ಸಮಿತಿ ಅಧ್ಯಕ್ಷ ಅಕ್ಷಯ್ ರಾವ್, ಮುಖ್ಯಾಧಿಕಾರಿ ಮೇಬಲ್ ಡಿ’ಸೋಜಾ ಉಪಸ್ಥಿತರಿದ್ದರು.
ವಸತಿ ಅಸಿಂಧು ಮಾಡಿ
ಸದಸ್ಯ ಶುಭದ್ ರಾವ್ ಮಾತನಾಡಿ, ವಸತಿ ಯೋಜನೆಯಡಿ 78 ಫಲಾನುಭವಿಗಳು ಆಯ್ಕೆಯಾಗಿದ್ದಾರೆ.ಆದರೆ ಅವರನ್ನು ಆಯ್ಕೆ ಮಾಡಿದ್ದು ಯಾರು? ಫಲಾನುಭವಿಗಳನ್ನು ಆ ಯೋಜನೆಯ ಸಮಿತಿಯಲ್ಲಿರುವವರು ಆಯ್ಕೆ ಮಾಡಬೇಕು. ಸಮಿತಿ ಅದರದ್ದೇ ಮಾನದಂಡದ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ವಿನಃ ಮನಬಂದತೆ ಆಯ್ಕೆ ಮಾಡುವುದಲ್ಲ. ಈ ಫಲಾನುಭವಿಗಳನ್ನು ಯಾವುದೇ ಆಶ್ರಯ ಯೋಜನೆ ಸಮಿತಿಯವರು ಆಯ್ಕೆ ಮಾಡಿಲ್ಲ, ಹಾಗಾಗಿ ಈ ಪ್ರಕ್ರಿಯೆಯನ್ನು ಶೀಘ್ರವೇ ಅಸಿಂಧು ಮಾಡಬೇಕು ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.