ಕಾರ್ಕಳ: ಅಪಘಾತ ಪ್ರಕರಣ ಆರೋಪಿಗೆ ಶಿಕ್ಷೆ
Team Udayavani, Dec 10, 2022, 12:56 AM IST
ಕಾರ್ಕಳ: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆದಿಂಜೆ ಗ್ರಾಮದ, ಮಾವಿನ ಕಟ್ಟೆ ಎಂಬಲ್ಲಿ 2014ರಲ್ಲಿ ಖಾಸಗಿ ಬಸ್ಸು ಮತ್ತು ಆಟೋರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಮಹಿಳೆ ಮತ್ತು ಮಗುವಿನ ಸಾವಿಗೆ ಕಾರಣವಾದ ಆರೋಪಿ ನಂದಳಿಕೆ ಕಕ್ಕೆಪದವು 5 ಸೆಂಟ್ಸ್ ನಿವಾಸಿ ಶ್ರೀನಿವಾಸ ಪೂಜಾರಿ ಎಂಬಾತನಿಗೆ ಕಾರ್ಕಳ 2ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಡಿ.9ರಂದು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2014ರ 17ರಂದು ಸಂಜೆ 5.45ರ ಅವಧಿಯಲ್ಲಿ ಕೆದಿಂಜೆ ಗ್ರಾಮದ, ಮಾವಿನ ಕಟ್ಟೆ ಎಂಬಲ್ಲಿ ಖಾಸಗಿ ಬಸ್ಸು ಮತ್ತು ಆಟೋರಿಕ್ಷದ ನಡುವೆ ನಡುವೆ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಆಟೋರಿಕ್ಷದಲ್ಲಿ ಪ್ರಯಾಣಿಸುತ್ತಿದ್ದ 3 ಜನ ವಯಸ್ಕರು ಮತ್ತು ಚಿಕ್ಕ ಮಕ್ಕಳು ಸೇರಿದಂತೆ 9 ಜನ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ ಜಮೀಲಾ ಮತ್ತು ಕು| ನಿಹಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದರು. ಈ ಕುರಿತು ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಜಿ ಎಂ ನಾಯ್ಕರವರು ಆರೋಪಿಯ ವಿರುದ್ಧ ದೋಷಾರೋಪಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣವನ್ನು ವಿಚಾರಣೆ ಮಾಡಿದ 2ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಕಾರ್ಕಳದ ನ್ಯಾಯಾಧೀಶೆ ಚೇತನಾ ಸಿ.ಎಫ್ ರವರು ಆರೋಪಿಗೆ 6 ತಿಂಗಳ ಸಾಧಾರಣ ಸಜೆ ಮತ್ತು 5 ಸಾವಿರ ದಂಡ ತಪ್ಪಿದ್ದಲ್ಲಿ 1 ತಿಂಗಳ ಸಾಧಾರಣ ಸಜೆ, 1 ಸಾವಿರ ದಂಡ ತಪ್ಪಿದ್ದಲ್ಲಿ 1 ತಿಂಗಳ ಸಾಧಾರಣ ಸಜೆ, 500 ದಂಡ ತಪ್ಪಿದ್ದಲ್ಲಿ 15 ದಿನಗಳ ಸಾಧಾರಣ ಸಜೆ, 1ಸಾವಿರ ದಂಡ ತಪ್ಪಿದ್ದಲ್ಲಿ 1 ತಿಂಗಳ ಸಾಧಾರಣ ಸಜೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ರಾಜಶೇಖರ್ ಪಿ ಶಾಮರಾವ್ ಸಹಾಯಕ ಸರ್ಕಾರಿ ಅಭಿಯೋಜಕರು ಕಾರ್ಕಳ ಇವರು ವಾದಿಸಿದ್ದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.