ಉದ್ಘಾಟನೆ ಭಾಗ್ಯವಿಲ್ಲದ ಕಾರ್ಕಳ ತಾಲೂಕು ಆಸ್ಪತ್ರೆ !
ಸೋರುತಿಹುದು ಹಳೆ ಕಟ್ಟಡ, ಹೊಸ ಕಟ್ಟಡ ನಿರ್ಮಾಣವಾಗಿ ಏಳು ತಿಂಗಳು
Team Udayavani, Aug 27, 2019, 5:10 AM IST
ಉದ್ಘಾಟನೆಗೊಳ್ಳದ 8.7 ಕೋಟಿ ರೂ. ವೆಚ್ಚದ ಕಾರ್ಕಳ ತಾಲೂಕು ಆಸ್ಪತ್ರೆ ನೂತನ ಕಟ್ಟಡ.
ಕಾರ್ಕಳ: ಸಾರ್ವಜನಿಕ ತಾಲೂಕು ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಗೊಂಡು ತಿಂಗಳು ಏಳು ಕಳೆದರೂ ಉದ್ಘಾಟನೆಗೊಂಡಿಲ್ಲ. ಹಳೆ ಕಟ್ಟಡದಲ್ಲಿ ಮಳೆ ನೀರು ಸೋರುತ್ತಿದ್ದರೂ ಆಧುನಿಕ ಸೌಲಭ್ಯದೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನೂತನ ತಾಲೂಕು ಆಸ್ಪತ್ರೆ ಕಟ್ಟಡ ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಉದ್ಘಾಟನೆಗೆ ಮಂತ್ರಿಗಳು ಬರಬೇಕೆನ್ನುವ ಏಕೈಕ ಕಾರಣಕ್ಕಾಗಿ ಆಸ್ಪತ್ರೆ ಲೋಕಾರ್ಪಣೆ ವಿಳಂಬವಾಗುತ್ತಿದೆ ಎನ್ನುವ ಆಕ್ರೋಶ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಸುಂದರ ಬೃಹತ್ ಕಟ್ಟಡ
2017ರ ಫೆಬ್ರವರಿಯಲ್ಲಿ ನೂತನ ಆಸ್ಪತ್ರೆ ಕಟ್ಟಡಕ್ಕೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶಿಲಾನ್ಯಾಸ ನೆರವೇರಿಸಿದ್ದರು. ಆಸ್ಪತ್ರೆ ಗುತ್ತಿಗೆ ಪಡೆದಿದ್ದ ಬೆಂಗಳೂರಿನ ಸ್ಟಾರ್ ಬಿಲ್ಡರ್ ಆ್ಯಂಡ್ ಡೆವೆಲಪರ್ ಕಂಪೆನಿಯು ಕಟ್ಟಡ ಕಾಮಗಾರಿಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಿದೆ.
8.7 ಕೋಟಿ ರೂ. ವೆಚ್ಚದಲ್ಲಿ 3,294 ಚದರಡಿ ವಿಸ್ತೀರ್ಣದೊಂದಿಗೆ 100 ಬೆಡ್ ಸಾಮರ್ಥ್ಯವಿರುವ ಒಂದು ಅಂತಸ್ತಿನ ಕಟ್ಟಡ ತಲೆ ಎತ್ತಿ ನಿಂತಿದೆ. ನಬಾರ್ಡ್ ಯೋಜನೆಯಿಂದ 6 ಕೋಟಿ ರೂ., ಕೆಎಲ್‌ಎಡಿಎಸ್‌ನಿಂದ 2.7 ಕೋಟಿ ರೂ. ಅನುದಾನ ಕಟ್ಟಡ ಕಾಮಗಾರಿಗೆ ದೊರೆತಿದೆ.
ಏನಿದೆ ವಿಶೇಷತೆ ?
ಸಿಆರ್‌ಎಂ, ಡಯಾಲಿಸಿಸ್ ಘಟಕ, ಆಧುನಿಕ ರೀತಿಯ ಐಸಿಯು, ಎಕ್ಸ್‌ರೇ, ಮೇಜರ್ ಒಟಿ, ಐಒಟಿ, ಎಸ್‌ಎನ್‌ಸಿಯು ಘಟಕ, ಆಯುಶ್ ವಿಂಗ್, ಎಲುಬು ಮತ್ತು ಕೀಲು ಚಿಕಿತ್ಸೆ ಸಂದರ್ಭ ಬಳಸುವ ಸಿಆರ್‌ಎಂ ಯಂತ್ರ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಡಯಾಲಿಸಿಸ್ ಘಟಕ, ಆಧುನಿಕ ರೀತಿಯ ಐಸಿಯು ಘಟಕ, ನವಜಾತ ಶಿಶುಗಳ ತುರ್ತು ಚಿಕಿತ್ಸೆಗಾಗಿ ಎಸ್‌ಎನ್‌ಸಿಯು ಪಾಲನಾ ಕೇಂದ್ರ, ಆಯುಷ್ ವಿಂಗ್ ಸೌಲಭ್ಯಗಳು ಆಸ್ಪತ್ರೆಯ ಹೊಸ ಕಟ್ಟಡದಲ್ಲಿವೆ.
ಸ್ಪೇಷಲ್ ರೂಮ್ಸ್
ಖಾಸಗಿ ಆಸ್ಪತ್ರೆಯ ಮಾದರಿಯಲ್ಲಿಯೇ 4 ಸಿಂಗಲ್ ಸ್ಪೇಷಲ್ ರೂಂ, 3 ಡಬ್ಬಲ್ ಸ್ಪೇಷಲ್ ರೂಂ, 6 ಬೆಡ್‌ನ 9 ಮಹಿಳಾ ಹಾಗೂ ಪುರುಷರ ವಾರ್ಡ್ ಸೇರಿದಂತೆ 10 ಬೆಡ್ ಸಾಮರ್ಥ್ಯ ಹೊಂದಿರುವ ವಿಶಾಲವಾದ ವಾರ್ಡ್ ಒಳಗೊಂಡಿದೆ.
ಕೊರತೆ
ಹೆರಿಗೆ ಹಾಗೂ ಮಕ್ಕಳ ತಜ್ಞರು ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನುವ ಪ್ರಶಂಸೆ ವ್ಯಕ್ತವಾಗುತ್ತಿದ್ದರೂ ಎಲುಬು ತಜ್ಞರು ಮಾತ್ರ ಸಂಪರ್ಕಕ್ಕೆ ಸಿಗುವುದು ವಿರಳ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಬಹುತೇಕ ಎಲ್ಲ ವಿಭಾಗದ ತಜ್ಞ ವೈದ್ಯರು ಇದ್ದರೂ ಆಸ್ಪತ್ರೆಯಲ್ಲಿ ಕಾವಲುಗಾರರಿಲ್ಲ. ಡಿ ಗ್ರೂಪ್ ನೌಕರರ ಕೊರತೆಯಿದೆ.
ಸೋರುತ್ತಿರುವ ಹೆರಿಗೆ ಕೊಠಡಿ
ಹಳೆ ಕಟ್ಟಡದ ಹೆರಿಗೆ ಕೊಠಡಿ ಮಳೆ ನೀರಿಗೆ ಸೋರುತ್ತಿದೆ. ಬ್ಲಿಡ್ ಟೆಸ್ಟಿಂಗ್‌ಗೆ ಸಾಗುವಲ್ಲಿ ಪಾಚಿ ಹಿಡಿದು ಆಸ್ಪತ್ರೆಯ ಅವ್ಯವಸ್ಥೆಯನ್ನು ಅನಾವರಣಗೊಳಿಸುತ್ತಿದೆ. ಒಪಿ ಸ್ಲಿಪ್ ಕೊಡುವಲ್ಲಿ ಮಳೆ, ಬಿಸಿಲಿನಿಂದ ರಕ್ಷಿಸಿಕೊಳ್ಳುವಂತಹ ಯಾವುದೇ ವ್ಯವಸ್ಥೆ ಇಲ್ಲ. ರೋಗಿಗಳ ಬಟ್ಟೆ ಒಣಗಿಸುವಲ್ಲೂ ಸರಿಯಾದ ವ್ಯವಸ್ಥೆ ಇಲ್ಲ ಎಂಬುದು ರೋಗಿಗಳ ದೂರು.
ಡ್ರೈವರ್ ಇದ್ರೂ ಆ್ಯಂಬುಲೆನ್ಸ್ ಇಲ್ಲ !
ಆ್ಯಂಬುಲನ್ಸ್ ಚಾಲಕರಾಗಿ ಇಬ್ಬರಿದ್ದರೂ ಆಸ್ಪತ್ರೆಗೆ ಅಗತ್ಯವಾಗಿರುವ ಆ್ಯಂಬುಲೆನ್ಸ್ ವಾಹನ ಕೆಟ್ಟುಹೋಗಿರುವುದರಿಂದ ಸಾರ್ವಜನಿಕರ ಉಪಯೋಗಕ್ಕಿಲ್ಲದಂತಾಗಿದೆ. ಇರುವ ಆ್ಯಂಬುಲನ್ಸ್ ವಾಹನ 11 ವರ್ಷಗಳ ಹಳೆಯದಾದ ಕಾರಣ ಪದೇ ಪದೆ ಕೆಟ್ಟು ಕೈಕೊಡುತ್ತಿದೆ ಎನ್ನಲಾಗುತ್ತಿದೆ.
ಮಾಹಿತಿ ಪಡೆಯಲಾಗುವುದು
ಕಾರ್ಕಳ ಸಾರ್ವಜನಿಕ ತಾಲೂಕು ಆಸ್ಪತ್ರೆ ಕುರಿತು ಜಿಲ್ಲಾ ವೈದ್ಯಾಧಿಕಾರಿಯವರಿಂದ ಸಮಗ್ರ ಮಾಹಿತಿ ಪಡೆಯುತ್ತೇನೆ. ಆಸ್ಪತ್ರೆ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ನಿರ್ದೇಶಕರೊಂದಿಗೆ ಮಾತನಾಡುತ್ತೇನೆ.
-ಕೋಟ ಶ್ರೀನಿವಾಸ ಪೂಜಾರಿ, ಸಚಿವರು
ಸದ್ಯದಲ್ಲೇ ಲೋಕಾರ್ಪಣೆ
ತಾಲೂಕು ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯದಲ್ಲೇ ಲೋಕಾರ್ಪಣೆಯಾಗಲಿದೆ. ಫಿಸಿಶಿಯನ್, ರೇಡಿಯಾಲಜಿಸ್ಟ್ , ಪರಿಣತ ವೈದ್ಯರ ನೇಮಕವಾಗಿದೆ. ಆಸ್ಪತ್ರೆಗೆ ಸಂಬಂಧಿಸಿದ ಬಹುತೇಕ ಪರಿಕರಗಳು ಕೂಡ ಈಗಾಗಲೇ ಬಂದಿವೆ.
-ಡಾ| ಕೇಶವ ಮಲ್ಯ,
ವೈದ್ಯಾಧಿಕಾರಿ
-ರಾಮಚಂದ್ರ ಬರೆಪ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.