ಕಾರ್ಕಳ ತಾ|: ಕಳೆದ ವರ್ಷಕ್ಕಿಂತ ಈ ಬಾರಿ ನೀರಿನ ಹರಿವು ಹೆಚ್ಚಳ


Team Udayavani, Dec 17, 2019, 5:48 AM IST

1112BELMNE1A

ಈ ವರ್ಷ ಡಿಸೆಂಬರ್‌ನಲ್ಲಿ ಶಾಂಭವಿ ನದಿ ತುಂಬಿರುವುದು.

ಈಗಲೂ ತುಂಬಿ ತುಳುಕುತ್ತಿರುವ ಶಾಂಭವಿ ನದಿ
ಬೆಳ್ಮಣ್‌: ಈ ಬಾರಿ ಸುರಿದ ಭಾರೀ ಮುಂಗಾರು ಮಳೆ ಹಾಗೂ ಬಳಿಕ ಸುರಿದ ಅಕಾಲಿಕ ಮಳೆಯಿಂದಾಗಿ ಈ ವರ್ಷ ಡಿಸೆಂಬರ್‌ ತಿಂಗಳಲ್ಲಿ ಸಂಕಲಕರಿಯದ ಶಾಂಭವಿ ನದಿ ತುಂಬಿ ತುಳುಕುತ್ತಿದೆ.

ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ಬತ್ತಿ ಹೋಗಿದ್ದ ಇದೇ ನದಿ ಈ ಬಾರಿ ಈ ವೇಳೆಗೆ ತುಂಬಿದ್ದು ಕೃಷಿಕರಲ್ಲಿ ಹೊಸ ಭರವಸೆ ಮೂಡಿಸಿದೆ.ಈಗಾಗಲೇ ಪಲಿಮಾರು ಅಣೆಕಟ್ಟು ನಿರ್ವಹಣ ಸಮಿತಿ ಅಣೆಕಟ್ಟುವಿಗೆ ಹಲಗೆ ಹಾಕಿದ್ದು ಶಾಂಭವಿ ನದಿಯಲ್ಲಿ ನೀರಿನ ಮಟ್ಟ ಭಾರೀ ಏರಿಕೆಯಾಗಿದೆ.

ಸಂಕಲಕರಿಯದಲ್ಲಿಯೂ ಅಣೆಕಟ್ಟು ವಿಗೆ ಹಲಗೆ ಅಳವಡಿಸಲಾಗಿದ್ದರೂ ನೀರಿನ ರಭಸಕ್ಕೆ ನಿರ್ವಹಣೆಯ ಜವಾಬ್ದಾರಿ ವಹಿಸಿದ್ದ ಸುಧಾಕರ ಸಾಲ್ಯಾನ್‌ ಮುಂದಿನ ಹಲಗೆ ಹಾಕುವ ಪ್ರಕ್ರಿಯೆ ಮುಂದೂಡಿದ್ದಾರೆ.

ನವೆಂಬರ್‌ ಕೊನೆಯ ವಾರದಲ್ಲಿ ಎರಡು ಮೂರು ದಿನ ಸುರಿದ ಮಳೆಯ ಕಾರಣದಿಂದ ನದಿಯಲ್ಲಿ ಇನ್ನೂ ನೀರು ಹರಿಯುತ್ತಿದ್ದು ಅಣೆಕಟ್ಟು ನಿರ್ವಾಹಕರಿಗೂ ಸವಾಲಾಗಿದೆ. ಶಾಂಭವಿ ನದಿಯಲ್ಲಿ ನೀರು ಸಚ್ಚೇರಿಪೇಟೆ, ಕಡಂದಲೆಯವರೆಗೂ ಏರಿದ್ದು ಮುಂಡ್ಕೂರು, ಸಂಕಲಕರಿಯ, ಏಳಿಂಜೆ, ಐಕಳ, ಪೊಸ್ರಾಲು, ಕೊಟ್ರಪಾಡಿ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಅಧಿಕವಾಗಿದೆ. ಈ ಭಾಗದ ಮನೆಯ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗಿದ್ದು ಜನರಲ್ಲಿ ಸಂತಸಕ್ಕೆ ಕಾರಣವಾಗಿದೆ. ಇದೇ ರೀತಿಯ ನೀರಿನ ಒರತೆ ಉಳಿದಲ್ಲಿ ಮುಂದಿನ ಸುಗ್ಗಿ, ಕೊಳಕೆ ಬೆಳೆಗಳಿಗೂ ಪೂರಕ ಸಹಕಾರ ಸಿಗಲಿದೆ ಎನ್ನುವುದು ಕೃಷಿಕರ ಅಭಿಮತ. ಒಟ್ಟಾರೆಯಾಗಿ ಈ ಬಾರಿಯ ಮಳೆ ಕರಾವಳಿ ಭಾಗದ ಕೃಷಿಕರಲ್ಲಿ ಹೊಸ ಭರವಸೆ ಮೂಡಿಸಿದೆ. ನದಿಯಲ್ಲಿ ನೀರು ತುಂಬಿದ ಪರಿಣಾಮ ಹಳ್ಳ-ಕೊಳ್ಳಗಳಲ್ಲಿಯೂ ನೀರು ತುಂಬಿ ಕಾಡು ಪ್ರಾಣಿಗಳಿಗೂ ಆಸರೆಯಾಗಲಿದೆ.

– ಶರತ್‌ ಶೆಟ್ಟಿ ಬೆಳ್ಮಣ್‌

ಬಜಗೋಳಿ:ನೀರಿನ ಹರಿವು ಹೆಚ್ಚಳ
ಬಜಗೋಳಿ: ಬಜಗೋಳಿ ವ್ಯಾಪ್ತಿಯ ಮಾಳ ಮಲ್ಲಾರ್‌ ಹೊಳೆ, ಕಡಾರಿ ಹೊಳೆ, ಮಂಜಲ್ತಾರ್‌ ಹೊಳೆಗಳಲ್ಲಿ ಕಳೆದ ಬಾರಿ ಡಿಸೆಂಬರ್‌ ತಿಂಗಳಲ್ಲಿ ನೀರಿನ ಒರತೆ ಕಡಿಮೆಯಾಗಿ ನದಿಗಳಲ್ಲಿ ನೀರು ಹರಿಯುತ್ತಿರಲಿಲ್ಲ.

ಆದರೆ ಈ ಬಾರಿ ನವೆಂಬರ್‌ ವರೆಗೆ ಸುರಿದ ಮಳೆಯಿಂದಾಗಿ ನದಿಗಳಲ್ಲಿ ನೀರು ಹರಿಯುತ್ತಿದ್ದು ಕಳೆದ ಬಾರಿಗಿಂತ ಈ ಬಾರಿ ನೀರಿನ ಹರಿವು ಜಾಸ್ತಿಯಾಗಿದೆ.

ನೀರಿನ ಒರತೆಯಿಂದಾಗಿ ನದಿದಡ‌ ಪರಿಸರದ ಕೃಷಿಕರಿಗೆ ಅನುಕೂಲವಾಗಿದೆ. ಈ ಭಾಗದ ರೈತರು ಈ ಬಾರಿ ಭತ್ತ ಬೆಳೆಯಲು ಮುಂದಾಗಿದ್ದಾರೆ. ಕಳೆದ ವರ್ಷ ಮಳೆ ಕೊರತೆಯಿಂದಾಗಿ ಈ ಪರಿಸರದ ನದಿಗಳೆಲ್ಲವೂ ಬತ್ತಿ ಹೋಗಿ ಕೃಷಿಕರು ಸಂಕಷ್ಟಪಡುವಂತಾಗಿತ್ತು. ಪರಿಸರದಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆ ಬಿದ್ದ ಪರಿಣಾಮ ಬಜಗೋಳಿ, ಈದು, ಪಳ್ಳಿ ಪರಿಸರದ ನದಿಗಳು ಡಿಸೆಂಬರ್‌ ತಿಂಗಳಿನಲ್ಲಿಯೂ ಒರತೆಯಿಂದಾಗಿ ಸರಾಗವಾಗಿ ಹರಿಯುವಂತಾಗಿದೆ.

– ಸಂದೇಶ್‌ ಕುಮಾರ್‌

ಅಜೆಕಾರು ಹೊಳೆಯಲ್ಲಿ ಸಮೃದ್ಧ ನೀರು
ಅಜೆಕಾರು: ಅಜೆಕಾರು ಹಾಗೂ ಸುತ್ತಲ ಪರಿಸರದಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆಬಿದ್ದ ಪರಿಣಾಮ ಎಣ್ಣೆಹೊಳೆಯ ಸುವರ್ಣಾ ನದಿ ಸೇರಿದಂತೆ ಬಹುತೇಕ ಎಲ್ಲ ನದಿಗಳಲ್ಲಿ ಡಿಸೆಂಬರ್‌ ತಿಂಗಳಿನಲ್ಲಿಯೂ ನೀರು ಸರಾಗವಾಗಿ ಹರಿಯುತ್ತಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ಕೆರೆತೊರೆಗಳಲ್ಲಿ ನೀರು ಸಮೃದ್ದವಾಗಿದೆ. ಕಳೆದ ವರ್ಷ ಎಣ್ಣೆಹೊಳೆ ಸೇರಿದಂತೆ ಎಲ್ಲ ನದಿಗಳ ನೀರು ಡಿಸೆಂಬರ್‌ ತಿಂಗಳಿನಲ್ಲಿಯೇ ಬರಿದಾಗಿ ಜನತೆ ಸಂಕಷ್ಟಪಡುವಂತಾಗಿತ್ತು. ಆದರೆ ಈ ಬಾರಿ ನದಿಗಳಲ್ಲಿ ನೀರು ಹರಿಯುತ್ತಿರುವುದರಿಂದ ನದಿ ದಡಗಳ ಕೃಷಿಕರಿಗೂ ಬಹಳಷ್ಟು ಅನುಕೂಲವಾಗಿದೆ.

ಹೊಳೆಯಲ್ಲಿ ನೀರು ಹರಿಯುವ ಜತೆಗೆ ನದಿ ಪಾತ್ರಗಳಲ್ಲಿ ನೀರಿನ ಒರತೆ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಕೆರ್ವಾಶೆ, ಶಿರ್ಲಾಲು, ಅಂಡಾರು, ಮರ್ಣೆ, ಕಡ್ತಲ, ಕುಕ್ಕುಜೆ ಭಾಗದ ರೈತರು ಪಾಳುಬಿದ್ದ ಗದ್ದೆಗಳಲ್ಲಿಯೂ ಈ ಬಾರಿ ಭತ್ತ ನಾಟಿ ಮಾಡಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ ವೇಳೆಯಲ್ಲಿಯೇ ನದಿತೊರೆಗಳು ನೀರಿ ಲ್ಲದೆ ಬರಿದಾದ ಪರಿಣಾಮ ಕೃಷಿ ಚಟುವಟಿಕೆಗಳಿಗೆ ಭಾರೀ ಹಿನ್ನಡೆ ಉಂಟಾಗಿತ್ತು. ಅಲ್ಲದೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿತ್ತು.

ಸ್ಥಳೀಯಾಡಳಿತ ಕುಡಿಯುವ ನೀರು ಪೂರೈಸುವಲ್ಲಿ ಹೈರಾಣಾಗಿತ್ತು. ಅಜೆಕಾರು ಸೇರಿದಂತೆ ಸುತ್ತಲ ಪರಿಸರದಲ್ಲಿ ಡಿ.8ರ ವರೆಗೂ ಮಳೆಯಾಗಿದ್ದು ರೈತರು ಸೇರಿ ದಂತೆ ಸ್ಥಳೀಯರಲ್ಲಿ ಸಂತಸ ತಂದಿದೆ.

ಕೆರ್ವಾಶೆ ಹೊಳೆ, ಶಿರ್ಲಾಲು ಚೌಕಿ ಹೊಳೆ, ಅಂಡಾರು ಹೊಳೆ, ಕಾಡುಹೊಳೆ, ತೀಥೊìಟ್ಟು ಹೊಳೆ, ದಬುìಜೆ ಹೊಳೆ, ಎಣ್ಣೆಹೊಳೆ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದ ನದಿಗಳು ನೀರಿನ ಸಮೃದ್ದ ಒರತೆಯೊಂದಿಗೆ ತುಂಬಿ ಹರಿಯುತ್ತಿವೆ.

– ಜಗದೀಶ ಅಜೆಕಾರು

ಹೆಬ್ರಿ: ಮರಳಿನಿಂದ ಅಂತರ್ಜಲ ಮಟ್ಟ ಕುಂಠಿತ
ಹೆಬ್ರಿ : ಹೆಬ್ರಿ ಪರಿಸರದಲ್ಲಿ ಹಾದು ಹೋಗುವ ಸೀತಾನದಿಯಲ್ಲಿ ಕಳೆದ ಬಾರಿ ಇದೇ ಸಂದರ್ಭದಲ್ಲಿ ನೀರಿನ ಮಟ್ಟ ಹೆಚ್ಚಿತ್ತು. ಆದರೆ ಈ ಬಾರಿ ನೀರಿನ ಮಟ್ಟ ಕಡಿಮೆಯಾಗಿದೆ. ಈ ಬಾರಿ ಈ ಪ್ರದೇಶ ದಲ್ಲಿ ಮಳೆ ಹೆಚ್ಚಾಗಿದ್ದರೂ ಈಗಲೇ ಕೆಲವೊಂದು ಬಾವಿಕೆರೆಗಳಲ್ಲಿ ಎಪ್ರಿಲ್‌ ತಿಂಗಳಲ್ಲಿರುವ ಹಾಗೆ ನೀರಿನ ಮಟ್ಟವಿದೆ. ನದಿಯಲ್ಲಿ ಹೇರಳ ಮರಳನ್ನು ಕಳೆದ ಬಾರಿ ತೆಗೆಯದೇ ಇರುವುದರಿಂದ ಅಂತರ್ಜಲ ಮಟ್ಟ ಕಡಿಮೆಯಾಗಿ ಈ ಬಾರಿ ನದಿಯ ನೀರಿನ ಮಟ್ಟ ಕಡಿಮೆಯಾಗಿದೆ ಎನ್ನುವುದು ಈ ಭಾಗದ ಕೃಷಿಕರ ಅಭಿಪ್ರಾಯ.

ಈ ಬಾರಿ ಅಂತರ್ಜಲ ಮಟ್ಟ ಕಡಿಮೆಯಾಗಿ ನದಿ ಬಾವಿಗಳಲ್ಲಿ ಈಗಲೇ ನೀರು ಕಡಿಮೆಯಾಗಿದೆ ಎನ್ನುವುದು ಕೃಷಿಕರಾದ ರಾಜೀವ ಶೆಟ್ಟಿ ಅವರ ಅಭಿಪ್ರಾಯ. ಹರಿದು ಹೋಗುವ ಸೀತಾನದಿಗೆ ಸೀತಾನದಿ ಬ್ರಿಜ್‌ ಬಳಿ ಡ್ಯಾಮ್‌ ನಿರ್ಮಾಣ ಕಾರ್ಯ ಆರಂಭಗೊಂಡು 6 ತಿಂಗಳು ಕಳೆದರೂ ಇನ್ನೂ ಹಲಗೆ ಹಾಕುವ ಕಾರ್ಯ ನಡೆಯದೆ ನೀರು ಹರಿದು ಹೋಗುತ್ತಿದೆ. ಈ ಹಿಂದೆಯೇ ಹಲಗೆ ಹಾಕಿ ಡ್ಯಾಮ್‌ ಕಾಮಗಾರಿ ಪೂರ್ಣಗೊಂಡಿದ್ದರೂ ನೀರು ನಿಂತು ಸುತ್ತಮುತ್ತಲಿನ ಬಾವಿಕೆರೆಗಳಲ್ಲಿ ಅಂತರ್ಜಲ ಮಟ್ಟದ ಹೆಚ್ಚಾಗುತ್ತಿತ್ತು ಎನ್ನುವುದು ಈ ಭಾಗದ ಕೃಷಿಕರ ಅನಿಸಿಕೆ.

– ಹೆಬ್ರಿ ಉದಯಕುಮಾರ್‌ ಶೆಟ್ಟಿ

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

5

Kundapura: ಬಸ್‌ ತಂಗುದಾಣಗಳೇ ಮಾಯ; ಜನರು ಅಯೋಮಯ!

4

ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್‌

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.