ಕಾರ್ಕಳ:”ಉದಯವಾಣಿ’ ಏಜೆಂಟ್, ವಿತರಕರ ಸಮಾವೇಶ
Team Udayavani, Apr 20, 2017, 3:19 PM IST
ಉಡುಪಿ: “ಉದಯವಾಣಿ’ ಪತ್ರಿಕೆಯ ಏಜೆಂಟರು, ವಿತರಕರ ಸಮಾವೇಶ ಬುಧವಾರ ಕಾರ್ಕಳದ ಕಟೀಲು ಇಂಟರ್‌ನ್ಯಾಶನಲ್ ಹೊಟೇಲ್ ಸಭಾಂಗಣದಲ್ಲಿ ಜರಗಿತು.
“ಉದಯವಾಣಿ’ ಜನಮನದ ಜೀವನಾಡಿಯಾದರೆ ಏಜೆಂಟರು ಮತ್ತು ವಿತರಕರೇ ಉದಯವಾಣಿಯ ಜೀವನಾಡಿ. ಬೆಳಗ್ಗಿನ ಸಿಹಿನಿದ್ರೆಯನ್ನು ತ್ಯಾಗ ಮಾಡಿ ದುಡಿಯುತ್ತಿರುವ ನೀವೇ ನಮ್ಮ ಹೆಮ್ಮೆಯಾಗಿದ್ದೀರಿ. ಯಾವುದೇ ಕ್ಲಿಷ್ಟ ಸಂದರ್ಭದಲ್ಲಿಯೂ ಪಾವತಿಯಲ್ಲಿಯೂ ಜಾಗರೂಕತೆ ವಹಿಸಿ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೀರಿ. ಸಂಸ್ಥೆಯು ಈಗಿರುವ 3.5 ಲಕ್ಷ ಪ್ರಸರಣವನ್ನು ಇನ್ನಷ್ಟು ಹೆಚ್ಚಿಸಲು 2017-18ರಲ್ಲಿ ಕಾರ್ಯ ಯೋಜನೆ ಹಾಕಿಕೊಂಡಿದೆ. ನಿಮ್ಮ ಸಹಕಾರ ನಿರಂತರವಾಗಿ ಇರಲಿ ಎಂದು ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಡಿಜಿಎಂ (ಹಣಕಾಸು) ಸುದರ್ಶನ್ ಶೇರಿಗಾರ್ ಹೇಳಿದರು.
ಸುಖಕಷ್ಟಗಳಲ್ಲಿ ಸಹಭಾಗಿ
ದೇಶದ ಅಭಿವೃದ್ಧಿಯಲ್ಲಿ ಕರಾವಳಿಯ ಅಭಿವೃದ್ಧಿಯೂ ಸೇರಿಕೊಂಡಿದೆ. ಇದರಲ್ಲಿ ಏಜೆಂಟರು, ವಿತರಕರ ಕೊಡುಗೆ ಅಪಾರ. ಸ್ವಾರ್ಥಪರ ಸಮಾಜದ ನಡುವೆ ಪತ್ರಿಕೆಯನ್ನು ಓದುಗರಿಗೆ ತಲುಪಿಸಬೇಕೆಂಬ ನಿಮ್ಮ ತಾಳ್ಮೆ, ಬದ್ಧತೆ ವರ್ಣಿಸಲು ಸಾಧ್ಯವಿಲ್ಲ. ಏಜೆಂಟರು, ವಿತರಕರು ಉದಯವಾಣಿಯ ಎಲ್ಲ ಸುಖಕಷ್ಟಗಳಲ್ಲಿ ಸಹಭಾಗಿಗಳು ಎಂದು ನ್ಯಾಶನಲ್ ಹೆಡ್ (ಮ್ಯಾಗಜಿನ್ಸ್ ಆ್ಯಂಡ್ ಸ್ಪೆಶಲ್ ಇನೀಶಿಯೇಟಿವ್ಸ್) ರಾಮಚಂದ್ರ ಮಿಜಾರು ಹೇಳಿದರು. ಪತ್ರಿಕೆಯನ್ನು ವಿತರಿಸಿ ಬಂದ ಆದಾಯದಿಂದ ಕಲಿತು ರ್‍ಯಾಂಕ್ ಪಡೆದ ಉದಾಹರಣೆ ಬೆಂಗಳೂರು ಆರ್‌ಟಿ ನಗರದಲ್ಲಿದೆ ಎಂದರು.
ಎಜಿಎಂ (ವ್ಯಾಪಾರ ಅಭಿವೃದ್ಧಿ) ಸತೀಶ್ ಶೆಣೈ ಸ್ವಾಗತಿಸಿ, ಮಾರುಕಟ್ಟೆ ವಿಭಾಗದ ಸಹ ಉಪಾಧ್ಯಕ್ಷ ಆನಂದ್ ಕೆ. ವಂದಿಸಿದರು. ಸಂಪಾದಕ ಎ.ವಿ. ಬಾಲಕೃಷ್ಣ ಹೊಳ್ಳ ಉಪಸ್ಥಿತರಿದ್ದರು.
ಪ್ರಸರಣ ವಿಭಾಗದ ಸೀನಿಯರ್ ಎಕ್ಸಿಕ್ಯೂಟಿವ್ ಪ್ರಕಾಶ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಪತ್ರಿಕಾ ಏಜೆಂಟರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ
Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.