ಕಾರ್ಕಳ: 52 ಸರಕಾರಿ ಶಾಲೆಗಳಲ್ಲಿ ದೈಹಿಕ ಶಿ. ಶಿಕ್ಷಕರೇ ಇಲ್ಲ !
ಶಿಕ್ಷಕರೇ ಇಲ್ಲದೆ ಕ್ರೀಡೆಯಲ್ಲಿ ಹಿನ್ನಡೆ; ಶಿಕ್ಷಕರ ಕಡ್ಡಾಯ ನೇಮಕಕ್ಕೆ ಆಗ್ರಹ
Team Udayavani, Jun 26, 2019, 5:35 AM IST
ಬೆಳ್ಮಣ್: ಹಲವು ರಂಗಗಳಲ್ಲಿ ನಾವು ಮುಂದುವರಿಯುತ್ತಿದ್ದರೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಪ್ರಾಥಮಿಕ ಹಂತದಲ್ಲೇ ಪ್ರತಿಭೆಗಳನ್ನು ಗುರುತಿಸುವ, ತರಬೇತಿ ನೀಡುವ ಕೊರತೆ. ಗ್ರಾಮೀಣ ಪ್ರದೇಶದಲ್ಲಂತೂ ಕ್ರೀಡಾ ಶಿಕ್ಷಕರೂ ಇಲ್ಲದೆ ಗ್ರಾಮೀಣ ಪ್ರತಿಭೆಗಳು ಮಂಕಾಗುತ್ತಿವೆ.
ಕಾರ್ಕಳ ತಾಲೂಕಿನಲ್ಲಿ ಒಟ್ಟು 85 ಸರಕಾರಿ ಪ್ರಾಥಮಿಕ ಶಾಲೆಗಳಿದ್ದು 33 ಶಾಲೆಗಳಲ್ಲಿ ದೈಹಿಕ ಶಿಕ್ಷಕರಿದ್ದರೆ, ಉಳಿದ 52 ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ. ಅಷ್ಟೇ ಅಲ್ಲ ಸಾಮಾನ್ಯ ಶಿಕ್ಷಕರೇ ಮೈದಾನದಲ್ಲೂ ಮಕ್ಕಳ ಆಟೋಟ ಚಟುವಟಿಕೆಗಳನ್ನು ನಿರ್ವಹಿಸಬೇಕಾಗಿದೆ.
ದೈ.ಶಿ. ಶಿಕ್ಷಕರೂ ಪಾಠ ಮಾಡಬೇಕು!
ದೈ. ಶಿ. ಶಿಕ್ಷಕರು ಇಲ್ಲದ ಶಾಲೆಗಳದ್ದು ಒಂದು ಕಥೆಯಾದರೆ, ದೈ. ಶಿ. ಶಿಕ್ಷಕರು ಇರುವ ಶಾಲೆಗಳ ಕಥೆ ವಿಭಿನ್ನ. ಕೆಲವೆಡೆ ಶಿಕ್ಷಕರ ಕೊರತೆ ಬಾಧಿಸುತ್ತಿರುವುದರಿಂದ ಅವರು ಪಾಠವನ್ನೂ ಮಾಡಬೇಕಿದೆ. ಶಾಲೆ ಒಳಗೆ ಮತ್ತು ಹೊರಗೂ ಅವರು ತೊಡಗಿಸಿಕೊಳ್ಳಬೇಕಾದ ಅನಿವಾರ್ಯವಿದೆ.
ಸರಕಾರದ ಧೋರಣೆಯಿಂದ ಸಮಸ್ಯೆ
ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ದೈ. ಶಿ. ಶಿಕ್ಷಕರನ್ನು ಸರಕಾರ ಹೆಚ್ಚುವರಿ ಶಿಕ್ಷಕರೆಂದು ಕಳೆದ ವರ್ಷ ಗುರುತಿಸಲು ಶುರು ಮಾಡಿತ್ತು. ಆದರೆ ದೈ. ಶಿ. ಶಿಕ್ಷಕರ ಅಗತ್ಯ ಮನವರಿಕೆಯಾದ ಬಳಿಕ ಆ ಪ್ರಕ್ರಿಯೆ ಕೈಬಿಡಲಾಗಿತ್ತು. ಇನ್ನು, 200 ವಿದ್ಯಾರ್ಥಿಗಳಿಗಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಿಗೆ ದೈ. ಶಿ. ಶಿಕ್ಷಕರ ನೇಮಕಾತಿ ಇಲ್ಲ ಎಂಬ ಮಸೂದೆ ಮಾಡಿದ್ದರೂ ಕಳೆದ ವರ್ಷ ಸರಕಾರಿ ಶಾಲೆಗಳಲ್ಲಿ ದೈ.ಶಿ. ಶಿಕ್ಷಕರಿರಬೇಕೆಂಬ ಮೌಖೀಕ ಆದೇಶವನ್ನು ಶಿಕ್ಷಣ ಇಲಾಖೆ ಹೊರಡಿಸಿತ್ತು. ಇನ್ನು ಕೆಲವು ಶಾಲೆಗಳಲ್ಲಿ 200ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದು ಅಲ್ಲಿ ದೈಹಿಕ ಶಿ. ಶಿಕ್ಷಕರು ವಯೋ ನಿವೃತ್ತಿ ಹೊಂದಿದರೂ ಮತ್ತೆ ಆ ಸ್ಥಾನವನ್ನು ಉಳಿಸಲಾಗುತ್ತಿಲ್ಲ.
ನೇಮಕಾತಿಯಾದರೆ ಉತ್ತಮ
ಕಾರ್ಕಳದ 52 ಪ್ರಾ. ಶಾಲೆಗಳಲ್ಲಿ ದೈ. ಶಿ. ಶಿಕ್ಷಕರಿಲ್ಲ. ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಪಾಠ ಬೋಧಿಸುವ ಹೊರೆಯಿದೆ. ಎಲ್ಲ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಯಾದರೆ ಉತ್ತಮ. ಇದರಿಂದ ಕ್ರೀಡೆಯನ್ನೂ ಪ್ರೋತ್ಸಾಹಿಸಿದಂತಾಗುತ್ತದೆ.
-ಆನಂದ ಪೂಜಾರಿ, ಅಧ್ಯಕ್ಷರು, ಕಾರ್ಕಳ ತಾ. ದೈ. ಶಿ. ಶಿಕ್ಷಕರ ಸಂಘ
ಕಡ್ಡಾಯ ನೇಮಕ
ಗ್ರಾಮೀಣ ಸರಕಾರಿ ಶಾಲೆಗಳಲ್ಲಿ ಕ್ರೀಡಾಸಕ್ತ ವಿದ್ಯಾರ್ಥಿಗಳು ಇರುತ್ತಾರೆ. ಇವರಿಗೆ ಉತ್ತಮ ತರಬೇತಿ ನೀಡಿದರೆ, ಉನ್ನತ ಮಟ್ಟಕ್ಕೇರಬಹುದು. ಆದ್ದರಿಂದ ಶಾಲೆಗಳಲ್ಲಿ ದೈ. ಶಿ. ಶಿಕ್ಷಕರ ಅನಿವಾರ್ಯತೆ ಇದೆ. ಕಾರ್ಕಳ ತಾ. ನ ವಿದ್ಯಾರ್ಥಿಗಳು ಈಗಾಗಲೇ ಕ್ರೀಡಾರಂಗದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೇರಿದ್ದಾರೆ. ಆದ್ದರಿಂದ ಸರಕಾರ ಪ್ರಾ. ಶಾಲೆಗಳಿಗೆ ಕಡ್ಡಾಯವಾಗಿ ಶಿಕ್ಷಕರನ್ನು ನೇಮಿಸಬೇಕಿದೆ.
-ಸಿದ್ದಪ್ಪ, ತಾ. ದೈ.ಶಿ. ಪರಿವೀಕ್ಷಣಾಧಿಕಾರಿ ಕಾರ್ಕಳ
– ಶರತ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ
Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ
Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.