ಕಾರ್ಕಳ ಪಡುಬಿದ್ರಿ ಹೆದ್ದಾರಿ: ಬಣ್ಣ ಕಳೆದುಕೊಂಡ ಹಂಪ್ಸ್‌ಗಳು
Team Udayavani, Oct 29, 2019, 5:25 AM IST
ಬೆಳ್ಮಣ್: ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ 1ರಲ್ಲಿ ಬಣ್ಣ ಕಳೆದುಕೊಂಡ 30ಕ್ಕೂ ಅಧಿ ಕ ಹಂಪ್ಸ್‌ಗಳು ವಾಹನ ಸವಾರರರನ್ನು ಆತಂಕಕ್ಕೀಡು ಮಾಡಿವೆ.
ಕಳೆದ ಐದು ವರ್ಷಗಳ ಹಿಂದೆ ಸುಮಾರು 29 ಕಿ.ಮೀ. ಉದ್ದದ ಕಾರ್ಕಳ -ಪಡುಬಿದ್ರೆ ರಾಜ್ಯ ಹೆದ್ದಾರಿಯ ಸುಂದರ ರಸ್ತೆ ನಿರ್ಮಾಣದ ಬಳಿಕ ಅಪಘಾತಗಳ ಸಂಖ್ಯೆ ಹೆಚ್ಚಾಗತೊಡಗಿತು.ಬಳಿಕ ಗುತ್ತಿಗೆದಾರರು ವಿಶೇಷ ತಂಡದಿಂದ ರಸ್ತೆ ಸರ್ವೆ ಕಾರ್ಯ ನಡೆಸಿ ಅತ್ಯಂತ ಹೆಚ್ಚು ಅಪಘಾತ ನಡೆಯುವ ಸ್ಥಳಗಳಿಗೆ ಹಂಪ್ಸ್‌ಗಳನ್ನು ನಿರ್ಮಾಣ ಮಾಡಿದ್ದರು. ಅದರಂತೆ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಸ್ಪೀಡ್ ಬ್ರೇಕರ್ ಹಾಗೂ ಸುಮಾರು 10ಕ್ಕೂ ಅಧಿಕ ದೊಡ್ಡ ಗಾತ್ರದ ಹಂಪ್ಸ್ ಗಳನ್ನು ನಿರ್ಮಾಣ ಮಾಡಿ ಅದಕ್ಕೆ ಸುಣ್ಣ -ಬಣ್ಣ ಬಳಿಯಲಾಗಿತ್ತು. ಆದರೆ ಇದೀಗ ರಸ್ತೆ ಹಂಪ್ಸ್‌ಗಳು ಬಣ್ಣ ಕಳೆದುಕೊಂಡು ಸವಾರರಿಗೆ ಗೋಚರಕ್ಕೆ ಬಾರದೆ ನಿತ್ಯ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.
ಅಪಾಯಕಾರಿ ಹಂಪ್ಸ್ ಈ ಅವೈಜ್ಞಾನಿಕ ಹಂಪ್ಸ್‌ಗಳ ಪರಿಣಾಮ ನಿತ್ಯ ಅಪಘಾತ ನಡೆಯುತ್ತಿವೆ.ಮುಖ್ಯ ವಾಗಿ ಪೇಟೆ ಪ್ರದೇಶದಲ್ಲಿ ಹಂಪ್ಸ್ ಗಳನ್ನು ನಿರ್ಮಿಸುವುದು ಸಾಮಾನ್ಯ. ಆದರೆ ಈ ರಾಜ್ಯ ಹೆದ್ದಾರಿಯಲ್ಲಿ ಮಾತ್ರ ಪಡುಬಿದ್ರೆಯಿಂದ ಕಾರ್ಕಳದ ವರೆಗೆ ಸುಮಾರು 38 ಹಂಪ್ಸ್‌ಗಳನ್ನು ನಿರ್ಮಿಸಿದ್ದು ವಾಹನ ಸವಾರರು ಪದೇ ಪದೇ ಬ್ರೇಕ್ ಹೊಡೆದು ಸಾಗಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹಂಪ್ಸ್‌ಗಳಿಗೆ ಬಣ್ಣ ಇಲ್ಲದ ಪರಿಣಾಮ ಹೊಸದಾಗಿ ಸಂಚಾರ ನಡೆಸುವ ವಾಹನ ಸವಾರರು ಹಂಪ್ಸ್‌ನ ಗೊತ್ತು ಗುರಿಯಿಲ್ಲದೆ ನಿತ್ಯ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಬೆ„ಕ್ ಸವಾರರಿಗಂತೂ ಭಾರೀ ಅಪಾಯಕಾರಿಯಾಗಿದೆ.
ನಿರಂತರ ಅಪಘಾತ
ಬೆಳ್ಮಣ್, ಕೆದಿಂಜೆ, ನಿಟ್ಟೆ , ಹಾಳೆಕಟ್ಟೆ , ನಂದಳಿಕೆ ಲಕ್ಷ್ಮೀ ಜನಾರ್ದನ ಶಾಲೆಯ ಬಳಿ ಹಾಗೂ ಅಡ್ವೆ, ನಂದಿಕೂರು , ಕಾಂಜರ ಕಟ್ಟೆಯ ಬಳಿಯಲ್ಲಿ ನಿರ್ಮಿಸಿರುವ ಹಂಪ್ಸ್‌ಗಳಿಂದಾಗಿ ನಿತ್ಯ ಒಂದಲ್ಲ ಒಂದು ಅವಘಡ ನಿರಂತರ ನಡೆಯುತ್ತಿವೆ. ಬೆಳ್ಮಣ್ ಪೇಟೆಯಿಂದ ಅನತಿ ದೂರದಲ್ಲಿರುವ ಅಂಚೆ ಕಚೇರಿಯ ಮುಂಭಾಗದಲ್ಲಿ ಹಂಪ್ಸ್‌ನಿಂದಾಗಿ ಹಾಗೂ ಚರ್ಚ್ ಬಳಿಯಲ್ಲಿರುವ ಹಂಪ್ಸ್ ನಿಂದಾಗಿ ಈಗಾಗಲೇ ಹಲವು ಅಪಘಾತ ನಡೆದಿವೆ.
ಕಾರ್ಕಳದಿಂದ ಪಡುಬಿದ್ರೆ ವರೆಗಿನ ರಸ್ತೆಯಲ್ಲಿರುವ ಎಲ್ಲ ಹಂಪ್ಸ್‌ಗಳು ಬಣ್ಣ ಕಳೆದುಕೊಂಡಿವೆ.ಇದರಿಂದ ಹೊಸದಾಗಿ ಸಂಚಾರ ನಡೆಸುವ ವಾಹನ ಸವಾರರಿಗೆ ತೊಂದರೆಯಾಗಿದೆ.ಕೂಡಲೇ ಗುತ್ತಿಗೆದಾರರು ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
ಇಲಾಖೆಗೆ ತಿಳಿಸಲಾಗುವುದು
ಹಂಪ್ಸ್‌ಗಳಿಗೆ ಬಣ್ಣ ಬಳಿಯುವ ಬಗ್ಗೆ ಲೋಕೋಪಯೋಗಿ ಇಲಾಖೆಗೆ ತಿಳಿಸಲಾಗುವುದು.
-ಸುಧಾಕರ್ ಕಾರ್ಕಳ,ಪಂಚಾಯತ್‌ರಾಜ್ ಇಂಜಿನಿಯರ್, ಕಾರ್ಕಳ
ಹಂಪ್ಸ್ ಗೋಚರಿಸುತ್ತಿಲ್ಲ
ಕಾರ್ಕಳ -ಪಡುಬಿದ್ರೆ ರಸ್ತೆಯಲ್ಲಿ ಪದೇ ಪದೇ ಬ್ರೇಕ್ ಹೊಡೆಯುವುದರಿಂದ ,ಹಂಪ್ಸ್‌ಗಳು ಬಣ್ಣವಿಲ್ಲದೆ ಗೋಚರಕ್ಕೆ ಬಾರದೆ ಎಡವಟ್ಟು ಮಾಡಿಕೊಳ್ಳುವಂತಾಗಿದೆ.
-ರಾಜೇಶ್ ,ಬಸ್ ಚಾಲಕ
ಆ್ಯಂಬುಲೆನ್ಸ್‌ಗಳಿಗೆ ತೊಂದರೆ
ನಿತ್ಯ ಈ ರಸ್ತೆಯಲ್ಲಿ ಅದೆಷ್ಟೋ ವಾಹನಗಳ ಸಹಿತ ಆ್ಯಂಬುಲೆನ್ಸ್ ಗಳು ಕೂಡ ಓಡಾಡುತ್ತವೆ.ಆದರೆ ಹಂಪ್ಸ್‌ಗಳು ಬಣ್ಣ ಕಳೆದುಕೊಂಡ ಪರಿಣಾಮ ವಾಹನ ಸವಾರರಿಗೆ ನಿತ್ಯ ತೊಂದರೆಯಾಗುತ್ತಿದೆ. ಕೂಡಲೇ ಈ ಬಗ್ಗೆ ಇಲಾಖೆ ಗಮನ ಹರಿಸಬೇಕಾಗಿದೆ. -ನಿರಂಜನ್,ಬೆಳ್ಮಣ್ ನಾಗರಿಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.