‘ಸರಕಾರದಿಂದ ಮಂಗಳಮುಖಿಯರನ್ನು ಗುರುತಿಸುವ ಕಾರ್ಯ’: ಮಂಜಮ್ಮ ಜೋಗತಿ ಹರ್ಷ
Team Udayavani, Dec 23, 2019, 3:55 PM IST
ಕಾರ್ಯಕ್ರಮದಲ್ಲಿ ಮಂಜಮ್ಮ ಜೋಗತಿ ಅವರನ್ನು ಸಮ್ಮಾನಿಸಲಾಯಿತು.
ಉಡುಪಿ: ಮಂಗಳಮುಖಿಯರಿಗೆ ಇಂದಿನ ಸಮಾಜದಲ್ಲಿ ಎಲ್ಲರಂತೆ ಮುಕ್ತ ಆವಕಾಶ ಲಭ್ಯವಾಗಿದೆ. ದೇಶದಲ್ಲೇ ಪ್ರಪ್ರಥಮವಾಗಿ ಮಂಗಳಮುಖಿಯನ್ನು ಜಾನಪದ ಕೇಂದ್ರದ ಅಧ್ಯಕ್ಷರನ್ನಾಗಿ ಸರಕಾರ ಮಾಡಿರುವುದೆ ದೊಡ್ಡ ಉದಾಹರಣೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಸ್ವತಃ ಮಂಗಳಮುಖಿಯಾದ ಮಂಜಮ್ಮ ಜೋಗತಿ ಅವರು ತಿಳಿಸಿದರು.
ಉಡುಪಿ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಬೀಯಿಂಗ್ ಸೋಶಿಯಲ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಎಂ.ಜಿ.ಎಂ. ಕಾಲೇಜು ಇವುಗಳ ಆಶ್ರಯದಲ್ಲಿ ರವಿವಾರ ಎಂಜಿಎಂ ಕಾಲೇಜಿನ ಆರ್.ಆರ್.ಸಿ. ಧ್ವನ್ಯಾ ಲೋಕದಲ್ಲಿ ಹಮ್ಮಿಕೊಂಡ ‘ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲಾ ಕಾಲೇಜುಗಳಲ್ಲಿ ಜಾನಪದ ಶಿಬಿರ
ರಾಜ್ಯದ ಎಲ್ಲ ಶಾಲಾ ಕಾಲೇಜುಗಳ ಜಾನಪದ ಕೇಂದ್ರಗಳ ಸಹಯೋಗದಲ್ಲಿ ಆಸಕ್ತ ಯುವ ವಿದ್ಯಾರ್ಥಿಗಳಿಗೆ ಜಾನಪದ ಕಲೆಗಳ ತರಬೇತಿ ಕಾರ್ಯಕ್ರಮ ಸದ್ಯದಲ್ಲೇ ಅಕಾಡೆಮಿ ಮೂಲಕ ನಡೆಯಲಿದ್ದು, ಇದರಲ್ಲಿ ತರಬೇತಿ ಪಡೆದ ಯುವ ವಿದ್ಯಾರ್ಥಿಗಳನ್ನು ಬೆಂಗಳೂರಿನ ದೊಡ್ಡ ವೇದಿಕೆಯಲ್ಲಿ ಎಲ್ಲರನ್ನೂ ಒಟ್ಟುಗೂಡಿಸುವ ಮತ್ತು ಕಲೆಯ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಜಾನಪದ ಕಲೆ, ಕಲೆಗಾರರನ್ನು ಗುರುತಿಸುವ ಕಾರ್ಯಕ್ರಮವನ್ನು ಸರಕಾರದ ವತಿಯಿಂದ ಸದ್ಯದಲ್ಲೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.
ಆರ್.ಆರ್.ಸಿ. ಸಂಯೋಜಕ ಪ್ರೊ| ವರದೇಶ ಹಿರೇಗಂಗೆ ಮಾತನಾಡಿ, ಹಿಂದಿನಿಂದಲೂ ಜಾನಪದ ಮತ್ತು ಶಾಸ್ತ್ರೀಯ ಕಲೆಗಳ ನಡುವೆ ಗೊಂದಲ ಇದೆ. ಜಾನಪದ ಕಲೆ ಬಾಯಿ ಮಾತಿನ ಮೂಲಕ ಒಬ್ಬರಿಂದ ಒಬ್ಬರಿಗೆ ತಲುಪುತ್ತ ಬಂದು ಕಾವ್ಯ, ನೃತ್ಯದ ಮೂಲಕ ಜನರ ಬದುಕಿನ ಚಿತ್ರಣ ನೀಡುತ್ತದೆ. ಆರಂಭದಿಂದಲೂ ಜಾನಪದರ ಬದುಕು ಕಷ್ಟದಿಂದಲೇ ಕೂಡಿದ್ದು ಅಂತಹ ಕಷ್ಟಗಳನ್ನು ಮೆಟ್ಟಿ ಸಾಧನೆ ಮಾಡಿದ ಮಂಜಮ್ಮ ಜೋಗತಿ ಇಂದು ಎಲ್ಲ ವರ್ಗಗಳ ಜನರಿಗೆ ಆದರ್ಶ ಎಂದರು.
ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪೊ›| ಎಂ.ಎಲ್. ಸಾಮಗ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವ ಅಧ್ಯಕ್ಷ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ| ಶಂಕರ್ ಉಪಸ್ಥಿತರಿದ್ದರು.
ಆರಂಭದಲ್ಲಿ ಅನಿರುದ್ದ ಆರ್. ಭಟ್ ಅವರಿಂದ ಜನಪದ ಗೀತೆ, ಭಾವನಾ ಕೆರೆಮಠ ಜಾನಪದ ನೃತ್ಯ ಪ್ರದರ್ಶನ ನಡೆಯಿತು. ಕೀಬೋರ್ಡ್‌ನಲ್ಲಿ ತರಂಗ್ ತಂತ್ರಿ ಅವರು ಸಹಕರಿಸಿದರು. ಕಾರ್ಯಕ್ರಮದ ಸಂಯೋಜಕ ಅವಿನಾಶ್ ಕಾಮತ್ ನಿರೂಪಿಸಿ, ರವಿರಾಜ್ ಎಚ್.ಪಿ ವಂದಿಸಿದರು.
ಮಂಗಳಮುಖಿ ಉತ್ಸವ: ಚಿಂತನೆ ದುಡ್ಡಿನ ಹಿಂದೆ ಬೀಳದೆ ಕರ್ತವ್ಯದಲ್ಲಿ ನಿಷ್ಠೆಯಿಂದ ತೊಡಗಿದಾಗ ನಿಜವಾದ ಏಳಿಗೆ ಸಾಧ್ಯ. ದೇವರು ನಾವು ಮಾಡುವ ಕರ್ತವ್ಯದಲ್ಲಿ ಇದ್ದಾನೆ. ಅಧಿಕಾರ ಹುದ್ದೆಗಳು ಶಾಶ್ವತವಲ್ಲ, ನಾವು ಸಾಗಿ ಬಂದ ದಾರಿಯನ್ನು ಯಾವತ್ತೂ ಮರೆಯಬಾರದು.
ತೃತೀಯ ಲಿಂಗಿಗಳನ್ನು ಸಮಾಜಮುಖಿಯಾಗಿಸುವ ನಿಟ್ಟಿನಲ್ಲಿ ಜಾನಪದ ಅಕಾಡೆಮಿ ವತಿಯಿಂದ ಹಲವು ಯೋಜನೆಗಳ ಚಿಂತನೆ ನಡೆದಿದೆ. ವಿವಿಧ ವೃತ್ತಿರಂಗ ಹಾಗೂ ರಾಜ್ಯದ ಎಲ್ಲ ಕಡೆಯ ಮಂಗಳಮುಖಿಯರನ್ನು ಒಟ್ಟು ಸೇರಿಸಿ ಬೆಂಗಳೂರಿನಲ್ಲಿ ಮಂಗಳಮುಖಿ ಉತ್ಸವ ನಡೆಸುವ ಬಗ್ಗೆ ಸರಕಾರದ ಜತೆ ಚರ್ಚಿಸಲಾಗಿದೆ. ಮಂಗಳಮುಖಿಯರಿಗೆ ಮಾಹಿತಿ ಕಾರ್ಯಾಗಾರಗಳ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಮಂಜಮ್ಮ ಜೋಗತಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.