ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ಸಾಮಾನ್ಯ ಸಭೆ
Team Udayavani, Jul 11, 2017, 1:40 AM IST
ಕುಂದಾಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ.) ತಾಲೂಕು ಶಾಖೆ ಕುಂದಾಪುರ ಇವರ ಸಾಮಾನ್ಯ ಸಭೆ ಇಲ್ಲಿನ ಚಿಕನ್ ಸಾಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.
ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಕುಂದಾಪುರ ಪುರಸಭಾ ವ್ಯಾಪ್ತಿ ಯಲ್ಲಿರುವ ಮುದ್ದು ಗುಡ್ಡೆಯಲ್ಲಿರುವ ದಲಿತ ಕುಟುಂಬದ ಸಮಸ್ಯೆ, ಕಡ್ಗಿ ರಸ್ತೆ ಹೊಸಬೆಟ್ಟು ದಲಿತ ನಿವಾಸಿಗಳ ಸಮಸ್ಯೆ, ಪೆರಿ ರಸ್ತೆಯ ದಲಿತ ನಿವಾಸಿಗಳ ಸಮಸ್ಯೆಯನ್ನು ಬಗೆಹರಿಸಲು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಪರಿಹರಿಸಲು ನಿರ್ಣಯಿಸ ಲಾಯಿತು. ಕುಂದಾಪುರ ತಾಲೂಕಿನ ಅಕ್ರಮ ಮದ್ಯ ಮಾರುವವರ ವಿರುದ್ಧ ಮತ್ತು ಎಲ್ಲೆಂದರಲ್ಲಿ ಶಾಲಾ ಕಾಲೇಜುಗಳ ಸಮೀಪ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮನೆ ಸಮೀಪ ಈಗ ತೆರೆದಿರುವ ಮತ್ತು ಹೊಸದಾಗಿ ತೆರೆಯಲು ಉದ್ದೇಶವಿರುವ ಮದ್ಯ ದಂಗಡಿಗಳನ್ನು ತೆರೆಯದಂತೆ ಕಾನೂನಾತ್ಮಕ ಹೋರಾಟ ಮಾಡಲು ನಿರ್ಣಯಿಸಲಾಯಿತು.
ದಲಿತ ವಿರೋಧಿ ನೀತಿಗಳನ್ನು ಅನುಕರಿಸುವ ಸಂಸ್ಥೆಗಳ ವಿರುದ್ಧ ದಲಿತ ದೌರ್ಜನ್ಯ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ದ.ಸಂ.ಸ. ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ. ರಾಜು ಬೆಟ್ಟಿನ ಮನೆ, ದ.ಸಂ.ಸ. ಜಿಲ್ಲಾ ನಾಯಕ ಮಂಜುನಾಥ ಗಿಳಿಯಾರು, ಸುರೇಶ್ ಬಾಕೂìರು, ತಾಲೂಕು ಸಂಘಟನ ಸಂಚಾಲಕ ಪ್ರಭಾಕರ್ ವಿ., ಗಿರೀಶ್ ಕುಮಾರ್ ಜಿ., ಮಂಜುನಾಥ ಕೆ., ಗಂಗಾಧರ ಜಿ., ಮಂಜುನಾಥ ನಾಗೂರು, ತಾಲೂಕು ಮಹಿಳಾ ಒಕ್ಕೂಟದ ಸಂಘಟನಾ ಸಂಚಾಲಕಿ ನಯನಾ ಎ., ಸೀತಾ ಕೆ., ದ.ಸಂ.ಸ. ಗ್ರಾಮ ಶಾಖೆಯ ಸಂಚಾಲಕರಾದ ಹರೀಶ್ ಕೆರಾಡಿ, ಆನಂದ ಹಲೂ¤ರು,ರವಿ ಸುಣ್ಣಾರಿ, ಅಣ್ಣಪ್ಪ ಬಿ.ಎಂ. ಹರೀಶ್ ಅನಗಳ್ಳಿ, ವೀರಭದ್ರ ಕೆ., ತಿಮ್ಮ ಪಿ., ಉಮೇಶ್ ಎಚ್. ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
MUST WATCH
ಹೊಸ ಸೇರ್ಪಡೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Lawyer Jagadish: ಮತ್ತೆ ಬಿಗ್ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್ ಜಗದೀಶ್ ಎಂಟ್ರಿ..!
Bengaluru: 54 ಎಂಜಿನಿಯರಿಂಗ್ ಸೀಟ್ ಬ್ಲಾಕ್: ಕೆಇಎ ಶಂಕೆ
Hospitalised: ಚಂದ್ರಬಾಬು ನಾಯ್ಡು ಅವರ ಸಹೋದರನ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.