ಕರಾವಳಿಯ ಜೀವನ ಶೈಲಿಯಲ್ಲಿ ಮೂಡಿ ಬಂದ ಬಹು ನಿರೀಕ್ಷೆಯ ಕರ್ಣೆ
Team Udayavani, Nov 14, 2018, 12:55 PM IST
ಮಲ್ಪೆ : ‘ಬೆನ್ ನುಂಡಾ ಅಪ್ಪೆ ಅಮ್ಮೆ … ಸಂಸಾರ ಮಲ್ತ್‌ಂಡ ಬುಡೆದಿ ಜೋಕುಲು… ದುಡ್ಡು ಮಲ್ತ್‌ಂಡ ಜನಕೊಲು… ಪುದರ್ ಮಲ್ತ್‌ಂಡ ಗೌರವ… ಇಜಿಂಡ ನಮನ್ ಗೆನ್ಪುನಗಲೇ ಇಜ್ಜೆರ್…’ ಪವರ್‌ಫುಲ್ ಡೈಲಾಗ್‌ನೊಂದಿಗೆ ಈಗಾಗಲೇ ಕೋಸ್ಟಲ್‌ವುಡ್‌ನಲ್ಲಿ ಸದ್ದು ಮಾಡಿದ ಕರ್ಣೆ ತುಳು ಚಿತ್ರಕ್ಕೆ ನ. 16ರಂದು ಮುಹೂರ್ತ ಕೂಡಿ ಬಂದಿದ್ದು ಕರಾವಳಿಯಾದ್ಯಂತ ತೆರೆ ಕಾಣಲಿದೆ.
ಚಿತ್ರಕಥೆಯನ್ನು ಬರೆದಿರುವ ಯುವ ಪ್ರತಿಭಾನ್ವಿತ ಸಾಕ್ಷಾತ್ ಮಲ್ಪೆ ನಿರ್ದೇಶನದ ಬಹು ನಿರೀಕ್ಷೆಯ ಕರ್ಣೆ ಕೋಸ್ಟಲ್‌ವುಡ್ ನಲ್ಲಿ ಬಿಡುಗಡೆ ಯಾಗಲಿರುವ 100ನೇ ಚಿತ್ರವಾಗಿದ್ದು ಭಾರಿ ಕೂತುಹಲ ಕೆರಳಿಸಿದೆ. ಶ್ರೀ ರಕ್ಷಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಚಿತ್ರಕ್ಕೆ ರಕ್ಷಿತ್ ಎಸ್. ಕೋಟ್ಯಾನ್ ಮತ್ತು ರಕ್ಷಿತ್ ಎಚ್. ಸಾಲ್ಯಾನ್ ನಿರ್ಮಾಪಕರಾಗಿ ಹಾಗೂ ಶಿರಿಶ್ ಶೆಟ್ಟಿ ಮತ್ತು ಹರ್ಷಿತ್ ಸಹ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ.
ಉತ್ತಮ ಕಥೆ, ತಾಂತ್ರಿಕತೆ, ಸಂಗೀತಮಯ ಸನ್ನಿವೇಶದೊಂದಿಗೆ ಜನಮನ ರಂಜಿಸಲು ಸಜ್ಜಾಗಿದ್ದು ತುಳು ಚಿತ್ರರಂಗದ ಇತಿಹಾಸದಲ್ಲೇ ಹೊಸದೊಂದು ಮೈಲಿಗಲ್ಲಾದ ಈ ಚಿತ್ರದ ಟೀಸರ್ ಮೂಲಕ ತುಳುನಾಡಿನ ಸಿನಿ ರಸಿಕರನ್ನು ಮತ್ತೆ ತುಳು ಚಿತ್ರರಂಗದತ್ತ ಸೆಳೆಯುವಲ್ಲಿ ನಿರ್ದೇಶಕ ಸಾಕ್ಷಾತ್ ಮಲ್ಪೆ ಯಶಸ್ವಿಯಾಗಿದ್ದಾರೆ. ಕರಾವಳಿಯ ಜೀವನ ಶೈಲಿಯನ್ನು ಇಟ್ಟುಕೊಂಡು ತಯಾರಿಸಲಾದ ಈ ಚಿತ್ರ ಸಾಕಷ್ಟು ಹೊಸತನದಿಂದ ಮೂಡಿ ಬಂದಿದೆ. ಸೆನ್ಸರ್ ಮಂಡಳಿಯು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಉತ್ತಮ ಕಥಾ ಹಂದರವಿರುವ ಸಿನೇಮಾ ಹಾಸ್ಯದೊಂದಿಗೆ ಸಿನಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯಬಲ್ಲ ಉತ್ತಮ ಚಿತ್ರವಾಗಿ ಮೂಡಿ ಬಂದಿದೆ.
1000 ಮಕ್ಕಳಿಂದ ಧ್ವನಿಸುರುಳಿ ಬಿಡುಗಡೆ
ಇನ್ನು ತೆರೆ ಕಾಣಲಿರುವ ಕನ್ನಡ ಗಹನ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಮಾಡಿ ರಘು ಧನ್ವಂತ್ರಿ ಅವರ ನಿರ್ದೇಶನದಲ್ಲಿ ಪ್ರಮುಖವಾಗಿ 3 ಹಾಡುಗಳನ್ನು ಚಿತ್ರದಲ್ಲಿ ಸಂಯೋಜಿಸಲಾಗಿದೆ. ಪೊಡಿ ದುಮ್ಸು, ರಾಜೆ..ಯಾನೆ ಮತ್ತು ಎನ್ನಗುಲ್ ಏರಾ ಇಂಪಾದ ಹಾಡುಗಳು ಕರಾವಳಿಗರ ಮನೆ ಮನ ತಟ್ಟಿದೆ. ಚಿತ್ರರಂಗದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಎಂಬಂತೆ 1000 ಮಕ್ಕಳಿಂದ ಚಿತ್ರದ ಹಾಡುಗಳ ಧ್ವನಿಸುರುಳಿಯನ್ನು ನ. 1ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದೆ.
ಹೊರದೇಶದಲ್ಲೂ ಬಿಡುಗಡೆ
ಕುಂದಾಪುರ, ಮಂಗಳೂರು, ಉಡುಪಿ ಹಾಗೂ ಮಲ್ಪೆ ಅಸುಪಾಸಿನಲ್ಲಿ ಚಿತ್ರೀಕರಣ ನಡೆದಿದ್ದು ಸ್ಥಳೀಯ ಯುವ ಪ್ರತಿಭೆಗಳಿಗೆ ಒಂದೊಳ್ಳೆ ಅವಕಾಶ ಕಲ್ಪಿಸುವ ಮೂಲಕ ಚಿತ್ರರಂಗಕ್ಕೆ ಹೊಸ ಕಲಾವಿದರ ಕೊಡುಗೆ ನೀಡಿದಂತಾಗಿದೆ. ಮೊದಲಿಗೆ ಕರಾವಳಿಯ 14 ಚಿತ್ರಮಂದಿರದಲ್ಲಿ ಬಿಡುಗಡೆ ಕಾಣಲಿದ್ದು ಅನಂತರದ ದಿನಗಳಲ್ಲಿ ಬೆಂಗಳೂರು, ಮುಂಬೈ, ದುಬೈ ಸೇರಿದಂತೆ ಹೊರದೇಶದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಆ್ಯಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ಮತ್ತು ಚಿರಶ್ರೀ ಅಂಚನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಸಹ ಕಲಾವಿದರಾಗಿ ಕೋಸ್ಟಲ್ ವುಡ್‌ನ ಹಾಸ್ಯ ದಿಗ್ಗಜರಾದ ತುಳುವ ಮಾಣಿಕ್ಯ ಅರವಿಂದ ಬೋಳಾರ್, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರ್, ಮಂಜು ರೈ ಮೂಳೂರು, ಸಾಯಿಕೃಷ್ಣ ಕುಡ್ಲ ಸೇರಿದಂತೆ ಹಲವಾರು ಪ್ರಬುದ್ದ ಕಲಾವಿದರು ಕಾಣಿಸಿಕೊಂಡಿದ್ದಾರೆ. ಖಳ ನಾಯಕರಾಗಿ ಗೋಪಿನಾಥ್ ಭಟ್‌ಗೆ ಅರ್ಜುನ್ ಕಜೆ ಸಾತ್ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ
Fraud case: ಚಿನ್ನಾಭರಣ ವಂಚನೆ ಕೇಸ್; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್
Bengaluru: ಕೌಟುಂಬಿಕ ಕಾರಣಕ್ಕೆ ಲಾರಿ ಉದ್ಯಮಿ ಆತ್ಮಹತ್ಯೆ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.