ಕೃಷಿ ಪ್ರಯೋಗದಲ್ಲಿ ಯಶ ಕಂಡ ಕೆದೂರಿನ ಕರುಣಾಕರ ಶೆಟ್ಟಿ

ಬರಡು ಭೂಮಿಯನ್ನು ಹಸಿರಾಗಿಸಿದ ಗ್ರಾಮೀಣ ಕೃಷಿಕ

Team Udayavani, Dec 24, 2019, 7:36 AM IST

sd-28

ಹೆಸರು: ಕೆದೂರು ಕರುಣಾಕರ ಶೆಟ್ಟಿ
ಏನೇನು ಕೃಷಿ: ಅಡಿಕೆ, ಭತ್ತ, ಕಾಳುಮೆಣಸು, ತರಕಾರಿ ಬೆಳೆಗಳು, ಹೈನುಗಾರಿಕೆ,
ಎಷ್ಟು ವರ್ಷ ಕೃಷಿ: 30
ಪ್ರದೇಶ : 4 ಎಕರೆ
ಸಂಪರ್ಕ: 9902663120

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಕೆದೂರು ಕರುಣಾಕರ ಶೆಟ್ಟಿ (62)ಅವರು ಕಳೆದ ಮೂವತ್ತು ವರ್ಷಗಳಿಂದಲೂ ತನ್ನ ಮನೆಯ ಸಮೀಪದಲ್ಲಿರುವ 4 ಎಕರೆಗೂ ಅಧಿಕ ವಿಸ್ತೀರ್ಣದ ನಿರುಪಯುಕ್ತವಾಗಿರುವ ಭೂ ಪ್ರದೇಶವನ್ನು ಕೃಷಿ ಚಟುವಟಿಕೆಗಾಗಿ ಪರಿವರ್ತಿಸಿ ಬರಡು ಭೂಮಿಗೆ ಜೀವ ಕಳೆ ತರುವ ಮೂಲಕ ಕೃಷಿ ಕಾಯಕದಲ್ಲಿನ ತುಡಿತ ಇಂದು ಅವರನ್ನು ಮಾದರಿ ಕೃಷಿಕನನ್ನಾಗಿಸಿದೆ. ಮೂಲತಃ ಕೃಷಿ ಮನೆತನದಿಂದ ಬೆಳೆದು ಬಂದ ಕರುಣಾಕರ ಶೆಟ್ಟಿ ಅವರು ಕೆದೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು ಕಳೆದ 30 ವರ್ಷಗಳಿಂದಲೂ ಹೈನುಗಾರಿಕೆ, ಕೃಷಿಯಲ್ಲಿ ತನ್ನದೇ ಆದ ಪ್ರಯೋಗಾತ್ಮಕ ಕೃಷಿ ಚಟುವಟಿಕೆಯ ಮೂಲಕ ಸಾಧನೆ ಮೆರೆದಿದ್ದಾರೆ. ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಹೊರಟ ಇವರಿಗೆ 100 ತೆಂಗು, 600 ಅಡಿಕೆ, ಕಾಳು ಮೆಣಸು ಸೇರಿದಂತೆ ಸುಮಾರು 2 ಎಕರೆ ಕುಂಬಳ ಕಾಯಿ, 50 ಸೆಂಟ್ಸ್‌ ವಿಸ್ತೀರ್ಣದಲ್ಲಿ ಸೌತೆ ಕಾಯಿ ಹೀಗೆ ಹತ್ತು ಹಲವು ಬಗೆಯ ತರಕಾರಿಗಳ ನ್ನು ಬೆಳೆಯಲು ಆರಂಭಿಸಿದರು.

ನೀರಿಗಾಗಿ ಆರು ಬಾವಿಗಳನ್ನು ತೋಡಿದರು
ಕೃಷಿ ಚಟುವಟಿಕೆಗೆ ಮೂಲಾಧಾರವಾದ ಜಲಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿ ಸುತ್ತಮುತ್ತ ಆರು ಬಾವಿ ತೆರೆದರಾದರೂ ನಿರೀಕ್ಷೆಯಂತೆ ಅಂತರ್ಜಲ ಇಲ್ಲದಿರುವುದು ನಿರಾಶರನ್ನಾಗಿ ಮಾಡಿದರೂ ಧೃತಿ ಗೆಡದ ಕರುಣಾಕರ ಶೆಟ್ಟಿಯವರು ಏನಾದರೂ ಮಾಡಿ ಈ ನೆಲವನ್ನು ಹಸಿರಾಗಿಸಬೇಕು ಎನ್ನುವ ಛಲ ದೊಂದಿಗೆ ಇಂಗುಗುಂಡಿಗಳನ್ನು ತೋಡಿ ಅಂತರ್ಜಲ ಮಟ್ಟ ಹೆಚ್ಚುವಂತೆ ಮಾಡಿದರು. ಸ್ಥಳೀಯರ ಸಹಕಾರ ದೊಂದಿಗೆ ಕೆದೂರು ನಡುಬೆಟ್ಟಿನ ಪರಿಸರದಲ್ಲಿ ಗುಡ್ಡವನ್ನು ಕಡಿದು ಸಮತಟ್ಟುಗೈಯುವ ಕಾಯಕದಲ್ಲಿ ನಿರಂತರವಾಗಿ ತೊಡಗಿ ಯಶಸ್ಸು ಗಳಿಸಿದರು.

ಸಮೃದ್ಧವಾಗಿ ಬೆಳೆದ ಎಂಒ4 ಭತ್ತದ ತಳಿ
ಸುಮಾರು 1ಎಕರೆ ವಿಸ್ತೀರ್ಣದ ಸಮತಟ್ಟಾದ ಭೂ ಪ್ರದೇಶದಲ್ಲಿ ಎಂಒ4 ಭತ್ತದ ತಳಿಯ ಸಸಿಯನ್ನು ಯಾಂತ್ರಿಕ ಸಾಲು ನಾಟಿ ಮಾಡುವ ಮೂಲಕ ಸ್ಥಳೀಯ ರೈಸ್‌ ಮಿಲ್‌ಗ‌ಳಿಂದ ಹೊರಹಾಕುವ ಬೂದಿ ಹಾಗೂ ಗೊಬ್ಬರಗಳನ್ನು ಪ್ರಮಾಣಕ್ಕೆ ಅನುಗುಣವಾಗಿ ಬಳಕೆಯಾದ್ದರಿಂದ ಎಂಒ4 ಭತ್ತದ ತಳಿ ಸುಮಾರು 4.5 ಅಡಿ ಆಳೆತ್ತರದ ಸಸಿಯಲ್ಲಿ ಉತ್ತಮವಾದ ಭತ್ತದ ತೆನೆ ಮೈದಳೆದಿವೆ. ಶ್ರಮಕ್ಕೆ ತಕ್ಕ ಪ್ರತಿಫಲ ಎನ್ನುವಂತೆ 1 ಎಕರೆ ವಿಸ್ತೀರ್ಣದ ಕೃಷಿ ಭೂಮಿಯಲ್ಲಿ ಸರಿಸುಮಾರು 120 ಮುಡಿಗಳಿಗೂ ಅಧಿಕ ಭತ್ತದ ಫಸಲನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿ ಜಿಲ್ಲೆಗೆ ಮಾದರಿಯಾಗಿದ್ದಾರೆ.

ಪ್ರಶಸ್ತಿ – ಸಮ್ಮಾನ
ಆದರ್ಶ ಕೃಷಿಕ ಕೆದೂರು ಕರುಣಾಕರ ಶೆಟ್ಟಿ ಅವರಿಗೆ 2016-17 ನೇ ಸಾಲಿನಲ್ಲಿ ಹೆಕ್ಟೇರಿಗೆ 88.87 ಕ್ವಿಂಟಾಲ್‌ ಇಳುವರಿ ಪಡೆದು ಜಿಲ್ಲಾ ಮಟ್ಟದ ಭತ್ತದ ಬೆಳೆಯಲ್ಲಿ ಪ್ರಥಮ ಸ್ಥಾನ ಹಾಗೂ 2017-18 ನೇ ಸಾಲಿನ ಉಡುಪಿ ಜಿಲ್ಲಾ ಸಮಗ್ರ ಕೃಷಿ ಪ್ರಶಸ್ತಿ ಸಂದಿದೆ. ಜತೆಗೆ ಅವರು ಹಾಲು ನೀಡುವ ಸೊಸೈಟಿಯಲ್ಲಿ ನಿರಂತರವಾಗಿ ಪ್ರಥಮ ಸ್ಥಾನ ಗಳಿಸುತ್ತಿದ್ದಾರೆ.

ಯಂತ್ರೋಪಕರಣಗಳ ಬಳಕೆ
ಕೃಷಿ ಚಟುವಟಿಕೆಗೆ ಬೇಕಾಗುವ ಯಂತ್ರೋಪ ಕರಣಗಳಾದ ಟ್ರ್ಯಾಕ್ಟರ್‌, ಟಿಲ್ಲರ್‌, ಹುಲ್ಲು ಕತ್ತರಿಸುವ ಯಂತ್ರಗಳನ್ನು ಬಾಡಿಗೆಗೆ ತಾರದೆ ಸ್ವತಃ ಇವರೇ ಕೃಷಿ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರ ಕೃಷಿ ಸಾಧನೆಯನ್ನು ಕಂಡು ವಿವಿಧ ಕೃಷಿ ಅಧಿಕಾರಿಗಳು ತೋಟಕ್ಕೆ ಆಗಮಿಸಿ ಅಧ್ಯಯನ ಕೂಡಾ ನಡೆಸಿದ್ದಾರೆ.

ಸಾಂಪ್ರದಾಯಿಕ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ
ತಂದೆಯವರ ಮಾರ್ಗದರ್ಶನದಂತೆ 8ನೇ ವಯಸ್ಸಿಗೆ ಸಾಗುವಳಿ ಮಾಡುತ್ತಾ , ಸಾಂಪ್ರದಾಯಿಕ ಕೃಷಿಗೆ ಹೆಚ್ಚಿನ ಪ್ರಾಧಾನ್ಯ ನೀಡುತ್ತಾ ಬಂದಿದ್ದೇನೆ. ಯಾಂತ್ರಿಕ ಕೃಷಿ ಪರಿಕರಗಳ ಬಳಕೆಯಿಂದಾಗಿ ಇಂತಹ ನಿರುಪ ಯುಕ್ತ ಭೂಮಿಯಲ್ಲಿ ಉತ್ತಮ ಭತ್ತದ ಫಸಲು ಕಂಡುಕೊಳ್ಳಲು ಸಹಕಾರಿಯಾಯಿತು. ಪತ್ನಿ ರಮಾ ಕೆ. ಶೆಟ್ಟಿ ಅವರ ಸಾಥ್‌ ಮರೆಯುವಂತಿಲ್ಲ, ಮುಂದಿನ ದಿನಗಳಲ್ಲಿ ಅಂತರ್ಜಲ ವೃದ್ಧಿಸುವ ನಿಟ್ಟಿನಿಂದ ಈಗಾಗಲೇ ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಮತ್ತಷ್ಟು ಪಾರಂಪರಿಕ ತೆಂಗು ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವ ಬಯಕೆ ಇದೆ. ಇಲ್ಲಿ ಫಲವತ್ತಾದ ಭೂಮಿ ಇದ್ದರೂ ಕೂಡ ಕೃಷಿಕರ ಪಾಲಿಗೆ ವರವಾಗಬೇಕಾಗಿದ್ದ ವಾರಾಹಿ ಕಾಲುವೆ ನೀರು ಇದುವರೆಗೆ ಕೆದೂರು ಗ್ರಾಮಕ್ಕೆ ಹರಿದು ಬಾರದೆ ಇರುವುದು ಕೂಡ ಇಲ್ಲಿನ ಕೃಷಿ ಚಟುವಟಿಕೆ ಗೆ ಹಿನ್ನಡೆಯಾಗಿದೆ.
-ಕರುಣಾಕರ ಶೆಟ್ಟಿ ಕೆದೂರು , ಆದರ್ಶ ಕೃಷಿಕರು

ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

ಟಾಪ್ ನ್ಯೂಸ್

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shivanna cinema in Vallarasu director’s film

N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

FIR 6 to 6 Kannada movie

FIR 6to6 movie: ಆ್ಯಕ್ಷನ್‌ ಚಿತ್ರದಲ್ಲಿ ವಿಜಯ ರಾಘವೇಂದ್ರ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.