ಮೊದಲ ಯತ್ನದಲ್ಲೇ ಕೆಎಎಸ್ ಪರೀಕ್ಷೆ ತೇರ್ಗಡೆ : ಉಡುಪಿಯ ನವೀನ್ ರಾವ್ ಸಾಧನೆ
Team Udayavani, Dec 26, 2019, 12:56 AM IST
ಉಡುಪಿ: ಅವಿರತ ಪರಿಶ್ರಮ, ದೃಢ ಸಂಕಲ್ಪದಿಂದ ಕೆಎಎಸ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಜಿಲ್ಲೆಯ ಏಕಮಾತ್ರ ಅಭ್ಯರ್ಥಿ ನವೀನ್ ರಾವ್ (39) ತೇರ್ಗಡೆಗೊಂಡಿದ್ದಾರೆ.
ಈಗ ಹೊರಬಿದ್ದ ಫಲಿತಾಂಶ 2015ನೇ ಸಾಲಿನ ಕೆಎಎಸ್ ಪರೀಕ್ಷೆ
ಯದ್ದು. ಉಡುಪಿ ಬೆಳ್ಮಣ್ಣು ಮುಂಡ್ಕೂರು ನಿವಾಸಿ ನವೀನ್ ತೇರ್ಗಡೆ ಹೊಂದಿ ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆಗೆ ಆಯ್ಕೆ ಯಾಗಿದ್ದಾರೆ.
ನವೀನ್ ಅವರು ಪ್ರಾಥಮಿಕ ಶಿಕ್ಷಣವನ್ನು ಬೆಳ್ಮಣ್ಣು ಮುಂಡ್ಕೂರು ಗ್ರಾಮದ ಸರಕಾರಿ ಶಾಲೆಯಲ್ಲಿ ಪಡೆದಿದ್ದು, ವಿ.ಎಂ. ಶಾಸಿŒ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ, ಹಾಸನದ ಮಲೆನಾಡು ಎಂಜಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಕೊಂಡಿದ್ದಾರೆ.
ಸೇನಾ ಸೇವೆ
ಮುಂಡ್ಕೂರಿನ ದಿ| ಯು. ಪುಂಡಲೀಕ ವರದರಾಜ್ ಮತ್ತು ಶಕುಂತಲಾ ರಾವ್ ದಂಪತಿಯ ಪುತ್ರ ನವೀನ್ ರಾವ್ ಅವರು ಎಂಜಿನಿಯರಿಂಗ್ ಮುಗಿ ಯುತ್ತಿದ್ದಂತೆ 2002ರಲ್ಲಿ ಸೇನೆಗೆ ಸೇರ್ಪಡೆಯಾದರು. ತಾಂತ್ರಿಕ ವಿಭಾಗದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸುಮಾರು 15.6 ವರ್ಷ ಕಾಲ ಸೇವೆ ಸಲ್ಲಿಸಿ 2017ರಲ್ಲಿ ನಿವೃತ್ತಿ ಹೊಂದಿದರು.
ಸ್ಪರ್ಧಾತ್ಮಕ ಪರೀಕ್ಷೆಗಳ ಸರದಾರ
ಪೋಷಕರ ಆಶೀರ್ವಾದ, ಹಿತೈಷಿ ಗಳು, ಉಡುಪಿಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ಪ್ರೈಮ್ ಮಾರ್ಗದರ್ಶನದಲ್ಲಿ ಕೆಎಎಸ್ ಪರೀಕ್ಷೆ ಉತ್ತೀರ್ಣಗೊಂಡಿರುವುದಾಗಿ ನವೀನ್ ರಾವ್ ತಿಳಿಸಿದ್ದಾರೆ. ಅವರು ಸೈನ್ಯಯಿಂದ ನಿವೃತ್ತಿ ಹೊಂದುತ್ತಿದ್ದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದಿದ್ದಾರೆ. ಎಲ್ಲ ಪರೀಕ್ಷೆಗಳಲ್ಲಿ ಪಾಸಾಗಿದ್ದು, ಪ್ರಸ್ತುತ ಉಡುಪಿ ಅಬಕಾರಿ ಇಲಾಖೆಯಲ್ಲಿ ಕುಂದಾಪುರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅತ್ತ ಉದ್ಯೋಗ, ಇತ್ತ ಅಭ್ಯಾಸ
ನವೀನ್ ರಾವ್ ಅವರಿಗೆ ಅಭ್ಯಾಸವೆಂದರೆ ಪಂಚಪ್ರಾಣ. ಸೈನ್ಯದಲ್ಲಿ ಇರುವಾಗಲೇ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಅಗತ್ಯವಿರುವ ಪೂರ್ವ ತಯಾರಿಯನ್ನು ಪ್ರಾರಂಭಿಸಿದ್ದರು. ನಿವೃತ್ತಿ ಬಳಿಕ ಅಬಕಾರಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಾ, ಬೆಳಗ್ಗೆ 2.30 ರಿಂದ 5.30 ವರೆಗೆ ಕೆಎಎಸ್ ಅಗತ್ಯವಿರುವ ತಯಾರಿಯನ್ನು ಮಾಡುವುದು ನಿತ್ಯದ ದಿನಚರಿಯಾಗಿತ್ತು.
ದೃಢ ಸಂಕಲ್ಪ ಬೇಕು !
ದೃಢ ಸಂಕಲ್ಪವಿದ್ದರೆ ಎಷ್ಟೇ ಕಷ್ಟದ ಕೆಲಸವಾದರೂ ಯಶಸ್ಸು ಪಡೆಯಬಹುದು. ಕರಾವಳಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಇಲ್ಲಿ ಎಂಜಿನಿಯರಿಂಗ್ ಮತ್ತು ಮೆಡಿಕಲ್‌ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆ ತೇರ್ಗಡೆಯಾಗಿ ನಾಗರಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿದೆ. ಮುಂದಿನ ದಿನದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ನಾಗರಿಕ ಸೇವೆ ಪರೀಕ್ಷೆ ಬರೆಯುವಂತಾಗಲಿ.
– ನವೀನ್ ರಾವ್, ಕೆಎಎಸ್ ಉತ್ತೀರ್ಣಗೊಂಡ ಅಭ್ಯರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ
Kaup town: ಟ್ರಾಫಿಕ್ ಒತ್ತಡ, ಪಾರ್ಕಿಂಗ್ ಕಿರಿಕಿರಿ
Udupi: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತು; ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.