ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Team Udayavani, Mar 9, 2019, 12:40 AM IST
ಬಂದೂಕು ತೋರಿಸಿ ಅಪಹರಣ:ಓರ್ವ ಕಸ್ಟಡಿಗೆ, ನಾಲ್ವರಿಗಾಗಿ ಶೋಧ
ಕುಂಬಳೆ: ಬಂದ್ಯೋಡ್‌ನಲ್ಲಿ ಮಾ. 7ರಂದು ರಾತ್ರಿ ಗೂಂಡಾ ತಂಡವೊಂದು ಇಬ್ಬರು ಯುವಕರಿಗೆ ಹಲ್ಲೆ ಮಾಡಿ ಓರ್ವನನ್ನು ಅಪಹರಿಸಿದ ಘಟನೆ ನಡೆದಿದೆ. ಕ್ಷಿಪ್ರ ಪೊಲೀಸ್ ಕಾರ್ಯಾಚರಣೆಯಲ್ಲಿ ಓರ್ವನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ನಾಲ್ವರಿಗಾಗಿ ಶೋಧ ನಡೆಯುತ್ತಿದೆ.ಮಾ. 7ರಂದು ರಾತ್ರಿ 9.30ಕ್ಕೆ ಬಂದ್ಯೋಡ್‌ನ ಖಾಸಗಿ ಆಸ್ಪತ್ರೆಯ ಮುಂದೆ ಬೊಲೇರೋ ಕಾರಿನಲ್ಲಿ ಇಬ್ಬರು ಯುವಕರು ಕುಳಿತಿದ್ದರು. ಈ ಸಂದರ್ಭದಲ್ಲಿ ಈ ಹಿಂದೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯ ನೇತೃತ್ವದಲ್ಲಿ ಐದು ಮಂದಿ ತಂಡ ಆಲ್ಟೋ ಕಾರಿನಲ್ಲಿ ಬಂದು ಬೊಲೇರೋ ಕಾರಿನಲ್ಲಿದ್ದ ಇಬ್ಬರು ಯುವಕರಿಗೆ ಬಂದೂಕು ತೋರಿಸಿ ಹಲ್ಲೆ ಮಾಡಿ ಓರ್ವನನ್ನು ಅಪಹರಿಸಿ ಪರಾರಿಯಾಯಿತು.
ಕಾರಿನಲ್ಲಿದ್ದ ಇನ್ನೋರ್ವ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ತತ್‌ಕ್ಷಣ ಸ್ಥಳಕ್ಕೆ ಧಾವಿಸಿ ಕುಬಣೂರು ಭಾಗಕ್ಕೆ ಪರಾರಿಯಾದ ತಂಡವನ್ನು ಬೆನ್ನಟ್ಟಿ ಪಚ್ಚಂಬಳ ದರ್ಗಾ ಸಮೀಪದಿಂದ ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಪಹೃತ ಯುವಕನನ್ನು ಪೊಲೀಸರು ರಕ್ಷಿಸಿದ್ದಾರೆ. ಪರಾರಿಯಾದ ನಾಲ್ವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಗಾಂಜಾ ಸಹಿತ ಬಂಧನ
ಕುಂಬಳೆ: ಬಂದ್ಯೋಡ್‌ನಿಂದ 150 ಗ್ರಾಂ ಗಾಂಜಾ ಸಹಿತ ಉಪ್ಪಳ ಬಳಿಯ ಸಂತಡ್ಕ ನಿವಾಸಿ ಮುನೀರ್ ಯಾನೆ ಅಬ್ದುಲ್ ರಹ್ಮಾನ್(42)ನನ್ನು ಕುಂಬಳೆ ಅಬಕಾರಿ ದಳ ಬಂಧಿಸಿದೆ. ಈತ ಸಂಚರಿಸುತ್ತಿದ್ದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಪೋಕೊÕà ಪ್ರಕರಣ:
ಆರೋಪಿ ತಪ್ಪಿತಸ್ಥ
ಕಾಸರಗೋಡು: ಏಳು ವರ್ಷ ಪ್ರಾಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಪ್ರಕರಣದ ಆರೋಪಿ ಚೀಮೇನಿ ಕರಿಮಣಲ್‌ಪಾರ ಕೋಕ್ಕರ ಪೆಟ್ಟಿಕುಂಡ್ ಚೆನ್ನಡ್ಕಂ ಪುದಿಯವೀಟಿಲ್ ಹೌಸ್‌ನ ರಾಜೀವನ್ ಪಿ.ವಿ. (45) ತಪ್ಪಿತಸ್ಥನೆಂದು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ) ತೀರ್ಪು ನೀಡಿದೆ.
2016ರ ಎಪ್ರಿಲ್ 10ರಂದು ಚೀಮೇನಿ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಪ್ರದೇಶದ ಕ್ವಾರ್ಟರ್ಸ್‌ವೊಂದರಲ್ಲಿ ಏಳು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ದೂರಿನಂತೆ ಚೀಮೇನಿ ಪೊಲೀಸರು ರಾಜೀವನ್ ವಿರುದ್ಧ ಪೋಕೊÕà ಕಾನೂನು ಪ್ರಕಾರ ಕೇಸು ದಾಖಲಿಸಿದ್ದರು.
ವಾಹನ, ಜುವೆಲರಿಗೆ
ಹಾನಿಗೊಳಿಸಿದ ಆರೋಪಿ ಬಂಧನ
ಉಪ್ಪಳ: ಉಪ್ಪಳ ರೈಲು ನಿಲ್ದಾಣ ರಸ್ತೆ ಬದಿ ನಿಲ್ಲಿಸಲಾಗಿದ್ದ 5 ವಾಹನಗಳು ಮತ್ತು ಜುವೆಲರಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗೆ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳ ಮಣಿಮುಂಡ ನಿವಾಸಿ ಮೊಹಮ್ಮದ್ ಶರೀಫ್ (40)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಚಿನ್ನದಂಗಡಿಯಿಂದ ಕಳವು:
ಒಂದೂವರೆ ವರ್ಷ ಸಜೆ
ಕಾಸರಗೋಡು: 2015ರ ಅ. 29ರಂದು ಬದಿಯಡ್ಕ ಮೇಲಿನ ಪೇಟೆಯ ಕೇಶವ ಆಚಾರಿ ಅವರ ಮಾಲಕತ್ವದ ಪವಿತ್ರ ಜುವೆಲರಿ ವರ್ಕ್ಸ್ನ ಬೀಗ ಮುರಿದು ಒಳನುಗ್ಗಿ 93 ಸಾವಿರ ರೂ. ಮೌಲ್ಯದ ಚಿನ್ನವನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಆಲಕ್ಕೋಡು ನೆಲ್ಲಂಕುನ್ನು ತೆಕ್ಕೇಮುರಿಯಿಲ್ ಹೌಸ್‌ನ ಥೋಮಿಚ್ಚನ್ ಮ್ಯಾಥ್ಯೂ (50)ಗೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (1) ಒಂದೂವರೆ ವರ್ಷ ಸಜೆ ವಿಧಿಸಿ ತೀರ್ಪು ನೀಡಿದೆ.
ಮಾವೋವಾದಿಗಳ ಬೇಟೆಗಾಗಿ
“ಆಪರೇಷನ್ ಅನಕೊಂಡಾ’
ಕಾಸರಗೋಡು: ರಾಜ್ಯದಲ್ಲಿ ಮಾವೋವಾದಿ ಚಟುವಟಿಕೆಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾವೋ ವಾದಿಗಳ ವಿರುದ್ಧ ಕೇರಳ ಪೊಲೀಸರು ಆಪರೇಷನ್ ಅನಕೊಂಡಾ ಎಂಬ ಹೆಸರಿನಲ್ಲಿ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.
ನಕ್ಸಲ್ ನಿಗ್ರಹ ಪಡೆಯ ತಂಡರ್ ಬೋಲ್ಟ್ ಕಮಾಂಡೋ ಪಡೆ, ಆ್ಯಂಟಿ ನಕ್ಸಲ್ ಸ್ಕಾ Ìಡ್ ಮತ್ತು ಸ್ಥಳೀಯ ಪೊಲೀಸರ ಸಹಾಯದೊಂದಿಗೆ ವಿಶೇಷ ಹಾಗೂ ತಜ್ಞ ರೀತಿಯ ತರಬೇತಿ ಪಡೆಯನ್ನು ಸೇರ್ಪಡೆಗೊಳಿಸಿ ಆಪರೇಷನ್ ಅನಕೊಂಡಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ವಯನಾಡಿನ ವ್ಯತಿರಿಯ ಉಪವನಿ ಎಂಬ ಹೆಸರಿನ ಖಾಸಗಿ ರಿಸೋರ್ಟ್‌ನಲ್ಲಿ ಮಾ. 6 ರಂದು ರಾತ್ರಿ ಮಾವೋವಾದಿಗಳ ವಿರುದ್ಧ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸ್ ಗುಂಡಿಗೆ ಮಾವೋವಾದಿಯ ಕಬನಿ ದಳಕ್ಕೆ ಸೇರಿದ ಸಿ.ಪಿ.ಜಲೀಲ್(26) ಬಲಿಯಾಗಿದ್ದನು. ಇದರಲ್ಲಿ ಓರ್ವ ಗಾಯಗೊಂಡಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!
Mangaluru: ನಿರ್ವಹಣೆ ಇಲ್ಲದೆ ಆಕರ್ಷಣೆ ಕಳೆದುಕೊಂಡ ಜಿಂಕೆ ವನ
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.