Disneyland ಮಾದರಿಯಲ್ಲಿ ಕಾಶ್ಮೀರ ಅಭಿವೃದ್ಧಿ: ಹಿರಿಯ ಐಎಎಸ್ ಅಧಿಕಾರಿ ರಾಜೇಶ್ ಪ್ರಸಾದ್
ಭಯೋತ್ಪಾದನೆ ಚಟುವಟಿಕೆ ಶೇ. 98ರಷ್ಟು ಕಡಿಮೆ ; ರೈಲ್ವೇ ಸೇವೆ ಶೀಘ್ರ ಹೊಸ ಕ್ರಾಂತಿ
Team Udayavani, Dec 26, 2023, 7:00 AM IST
ಉಡುಪಿ: ಜಮ್ಮು ಕಾಶ್ಮೀರ ದಲ್ಲಿ 370ನೇ ವಿಧಿ ರದ್ದತಿ ಬಳಿಕ ಪ್ರವಾಸೋದ್ಯಮ, ಇಂಧನ, ಮೂಲ ಸೌಕರ್ಯ ಸಹಿತ ವಿವಿಧ ಮಜಲುಗಳಲ್ಲಿ ಅಭಿವೃದ್ಧಿಯ ದಾಪುಗಾಲು ಕಾಣುತ್ತಿದೆ. ಶ್ರೀನಗರವನ್ನು ಡಿಸ್ನಿಲ್ಯಾಂಡ್ ಮಾದರಿ ಯಲ್ಲಿ ರೂಪಿಸಲಾಗುತ್ತದೆ ಎಂದು ಜಮ್ಮು ಕಾಶ್ಮೀರ ಸರಕಾರದ ಇಂಧನ ಮತ್ತು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಪ್ರಸಾದ್ ಹೇಳಿದ್ದಾರೆ.
ರಾಜೇಶ್ ಪ್ರಸಾದ್ ಹಿರಿಯಡಕ ಕೊಂಡಾಡಿ ಮೂಲದವರಾಗಿದ್ದು, “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ಭಾಗ ಇಂತಿದೆ:
ಆರ್ಟಿಕಲ್ 370, 35ಎ ತೆರವುಗೊಳಿಸಿದ ಬಳಿಕ ಆಗುತ್ತಿರುವ ಬದಲಾವಣೆಗಳೇನು?
ಕೇಂದ್ರ ಸರಕಾರ ಆರ್ಟಿಕಲ್ 370 ಮತ್ತು 35ಎ ತೆರವುಗೊಳಿಸಿದ ಬಳಿಕ ಜಮ್ಮು ಕಾಶ್ಮೀರ ಮತ್ತು ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರೂಪಿಸಲಾಯಿತು. ದೇಶದಲ್ಲೆಡೆ ಇರುವ ಕಾನೂನುಗಳು ಇಂದು ಕಾಶ್ಮೀರದಲ್ಲೂ ಅನುಷ್ಠಾನವಾಗುತ್ತಿವೆ. ಎಲ್ಲ ವಿಭಾಗದಲ್ಲೂ ಅಭಿವೃದ್ಧಿ ಚಟುವಟಿಕೆಗಳು ನಡೆಯು ತ್ತಿವೆ. ಜನ ಜೀವನದಲ್ಲೂ ಸುಧಾರಣೆ ಕಾಣುತ್ತಿದೆ.
ದೇಶ ವಿರೋಧಿ ಚಟುವಟಿಕೆ ನಿಯಂತ್ರಣಕ್ಕೆ ಬಂದಿದೆಯೆ?
2019ರ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಜಮ್ಮು ಕಾಶ್ಮೀರ ಸಂಪೂರ್ಣ ಹೊಸ ರೂಪ ಪಡೆದಿದೆ. ಭಯೋ ತ್ಪಾದನೆ, ಪ್ರತಿಭಟನೆ, ಗಲಾಟೆಗಳಿಂದ ಕಾಶ್ಮೀರ ಶಾಂತಿ ಮತ್ತು ಅಭಿವೃದ್ಧಿಯತ್ತ ಮುಖ ಮಾಡಿದೆ. ಜನರು ಖುಷಿಯಾ ಗಿದ್ದಾರೆ. ಸೈನಿಕರ ಮೇಲೆ ಕಲ್ಲು ತೂರಾಟಕ್ಕೆ ಕಡಿವಾಣ ಬಿದ್ದಿದೆ. ದೇಶವಿರೋಧಿ ಮಾನಸಿಕತೆಯೂ ಬದಲಾಗಿದೆ. ಶಾಲೆ, ಕಾಲೇಜುಗಳು ನಡೆಯು ತ್ತಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹತೋಟಿಯಲ್ಲಿದ್ದು, ಭಯೋತ್ಪಾದನೆ ಚಟುವಟಿಕೆ ಶೇ. 98 ರಷ್ಟು ಕಡಿಮೆ ಯಾಗಿದೆ. ಜನಸಾಮಾನ್ಯರ ಭದ್ರತೆಗೆ ಮೊದಲ ಆದ್ಯತೆ ಸಿಕ್ಕಿದೆ.
ಯಾವ ಯಾವ ಕ್ಷೇತ್ರಗಳಲ್ಲಿ ಬದಲಾವಣೆಗಳಾಗಿವೆ?
70 ವರ್ಷಗಳಲ್ಲಿ ಕಾಣದ ಅಭಿವೃದ್ಧಿ 4 ವರ್ಷದಲ್ಲಿ ಸಾಧ್ಯವಾಗಿದೆ. ಮೂಲ ಸೌಕರ್ಯ, ಹೆದ್ದಾರಿ ಯೋಜನೆ, ಪವರ್ ಪ್ರಾಜೆಕ್ಟ್, ರೈಲ್ವೇಸ್, ವಸತಿ ಸಹಿತ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಅಭಿವೃದ್ಧಿ ಪ್ಯಾಕೇಜ್ (ಪಿಎಂಡಿಪಿ) ಯಡಿ 58 ಸಾವಿರ ಕೋ.ರೂ. ಅನುದಾನವನ್ನು ಬಳಕೆಯಾಗುತ್ತಿದೆ. ಐಐಟಿ, ಐಐಎಂ, ಏಮ್ಸ್ ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ಜಮ್ಮು – ಶ್ರೀನಗರ ನಡುವೆ 15 ಗಂಟೆಗಳ ಪ್ರಯಾಣವೀಗ 6 ಗಂಟೆಗಳಿಗೆ ಇಳಿದಿದೆ. ಸೂಕ್ತ ರೈಲ್ವೇ ವ್ಯವಸ್ಥೆ ಇಲ್ಲದ ಪ್ರದೇಶದಲ್ಲಿ ಹೊಸ ರೈಲು ಮಾರ್ಗಗಳು ಪೂರ್ಣಗೊಂಡಿವೆ. ಜಮ್ಮು ಮತ್ತು ಕಾಶ್ಮೀರ ರೈಲ್ವೇ ಸೇವೆಯಲ್ಲಿ ಹೊಸ ಕ್ರಾಂತಿ ಮಾಡಲು ಸಜ್ಜಾಗಿದೆ. ಇದು ಪ್ರವಾಸೋದ್ಯಮ ಅಭಿವೃದ್ಧಿಗೆ ಮೈಲಿಗಲ್ಲು ಆಗಲಿದೆ.
ದೇಶದ ಅತೀದೊಡ್ಡ ಹೈಡ್ರೋ ಪ್ರಾಜೆಕ್ಟ್
ಸಂಪೂರ್ಣ ಕುಂಠಿತವಾಗಿದ್ದ ಪವರ್ ಪ್ರಾಜೆಕ್ಟ್ 2020ರ ಅನಂತರ ಚುರುಕುಗೊಂಡಿದೆ. ರಾಜ್ಯ ಸರಕಾರ ಮತ್ತು ನ್ಯಾಶನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೊರೇಶನ್ ಸಹಭಾಗಿತ್ವದಲ್ಲಿ 4 ಸಾವಿರ ಕೋಟಿ ರೂ. ವೆಚ್ಚದ ದೇಶದ ಅತೀದೊಡ್ಡ 4 ಹೈಡ್ರೊ ಎಲೆಕ್ಟ್ರಿಕ್ ಪ್ರಾಜೆಕ್ಟ್ ಪ್ರಗತಿಯಲ್ಲಿದ್ದು, 3 ಸಾವಿರ ಮೆ. ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುವುದು. ಕೇಂದ್ರ ಸರಕಾರದ ಸೌಭಾಗ್ಯ ಯೋಜನೆಯಡಿ ಪ್ರತೀಹಳ್ಳಿಯ ಮನೆಗೂ ವಿದ್ಯುತ್ ಸಂಪರ್ಕ ನೀಡಲಾಗಿದೆ.
ಚುನಾವಣೆ ಸದ್ಯದಲ್ಲಿ ನಡೆಯಲಿದೆಯೆ?
ರಾಜ್ಯದಲ್ಲಿನ 600 ಸೇವೆಗಳನ್ನು ಸಂಪೂರ್ಣ ಆನ್‌ಲೈನ್ ವ್ಯವಸ್ಥೆಗೆ ಒಳಪಡಿಸಲಾಗಿದೆ. ಮೊಬೈಲ್, ಕಂಪ್ಯೂಟರ್‌ನಲ್ಲೇ ಕಡತ ವಿಲೇವಾರಿ ಗೊಳಿಸುವ ವ್ಯವಸ್ಥೆ ಜಾರಿ ಬಂದಿದೆ. ಸಾರ್ವಜನಿಕರಿಗಾಗಿ ಉನ್ನತ
ಮಟ್ಟದ ಅಧಿಕಾರಿಗಳು ಜನ ಸ್ಪಂದನ ಕಾರ್ಯಕ್ರಮಗಳನ್ನು ನಡೆಸುತ್ತಿ ದ್ದಾರೆ. ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಯಾವ ಸಮಯದ ಲ್ಲಿಯೂ ಚುನಾವಣೆ ನಡೆಯಬಹದು. ಕೇಂದ್ರ ಚುನಾವಣೆ ಆಯೋಗ ಇದಕ್ಕಾಗಿ ತಯಾರಿಯನ್ನೂ ನಡೆಸುತ್ತಿದೆ.
ಸ್ವಿಟ್ಜರ್ಲ್ಯಾಂಡ್ ಮಿನಿ ಕಾಶ್ಮೀರ ಅಷ್ಟೇ !
ಕಾಶ್ಮೀರಕ್ಕೆ ಹೋಲಿಸಿದರೆ ಇಡೀ ಸ್ವಿಟ್ಜರ್ಲ್ಯಾಂಡ್ ಒಂದು ಮಿನಿ ಕಾಶ್ಮೀರ ಅಷ್ಟೇ. ಸ್ವಿಟ್ಜರ್ಲ್ಯಾಂಡ್‌ಗಿಂತಲೂ ವಿಶಾಲವಾದ, ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಕಾಶ್ಮೀರ ಹೊಂದಿದೆ. ಪ್ರಸ್ತುತ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಕೈಗಾರಿಕೆ ಮತ್ತು ಪ್ರವಾಸೋದ್ಯಮದಲ್ಲಿ ಹೊರಗಿನವರಿಗೂ ಹೂಡಿಕೆಗೆ ಅವಕಾಶ ನೀಡಿದ್ದರಿಂದ ಹೊಸ ಸಾಧ್ಯತೆ ತೆರೆದಿದೆ. 2022ರಲ್ಲಿ 1.88 ಕೋಟಿ ಮಂದಿ ಕಾಶ್ಮೀರಕ್ಕೆ ಆಗಮಿಸಿದ್ದರು. ಪ್ರಸ್ತುತ ವರ್ಷ 3 ಕೋಟಿ ಮಂದಿ ಭೇಟಿ ನೀಡಿದ್ದಾರೆ. ಸ್ಥಳೀಯ ಆರ್ಥಿಕತೆ ಉತ್ತೇಜನ ಮತ್ತು ಉದ್ಯೋಗ ಸೃಷ್ಟಿ ನೆಲೆಯಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ. ಶ್ರೀನಗರದ 150 ಎಕ್ರೆ ಜಾಗದಲ್ಲಿ 2 ಸಾವಿರ ಕೋ. ರೂ. ವೆಚ್ಚದಡಿ ಡಿಸ್ನಿಲ್ಯಾಂಡ್ ಮಾದರಿಯ ಪ್ರವಾಸೋದ್ಯಮ ಯೋಜನೆ ಜಾರಿಗೊಳ್ಳುತ್ತಿದೆ. ಇದು ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ಶಕೆ ಬರೆಯಲಿದೆ.
-ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.