ಕಾಶ್ಮೀರ ವಿಜಯ ಯಕ್ಷಗಾನ ತಾಳಮದ್ದಳೆ: ಪೋಸ್ಟರ್ ಬಿಡುಗಡೆ
ಉಡುಪಿ ಮತ್ತು ಮಂಗಳೂರಿನಲ್ಲಿ ನಡೆಯುವ ತಾಳಮದ್ದಳೆ
Team Udayavani, Dec 31, 2022, 7:22 PM IST
ಉಡುಪಿ: ಸುಶಾಸನ ಸಮಿತಿ ಆಶ್ರಯದಲ್ಲಿ ಜ. 14 ರಂದು ಉಡುಪಿಯಲ್ಲಿ ಮತ್ತು 28 ರಂದು ಮಂಗಳೂರಿನಲ್ಲಿ ನಡೆಯುವ ಕಾಶ್ಮೀರ ವಿಜಯ ರಾಷ್ಟ್ರಕ್ಕಾಗಿ ಕಲೆ ತಾಳಮದ್ದಳೆ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭವು ಪೇಜಾವರ ಮಠದ ಶ್ರೀರಾಮ ವಿಟ್ಠಲ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಸಮಿತಿ ಗೌರವಾಧ್ಯಕ್ಷ ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಕ್ಷೇತ್ರ ಟ್ರಸ್ಟ್ ವಿಶ್ವಸ್ಥ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಕಾಶ್ಮೀರ ವೈಭವ ಆಕ್ರಮಣದಿಂದ ಕಮರಿ ಹೋಗಿತ್ತು. ಈ ವೈಭವವನ್ನು ಜಾಗೃತಿ ಮೂಡಿಸುವುದಕ್ಕೆ, ಜನಮಾನಸಕ್ಕೆ ಮುಟ್ಟಿಸುವುದಕ್ಕೆ ಯಕ್ಷಗಾನ, ತಾಳಮದ್ದಳೆ ಪ್ರಬಲವಾಗಿರುವ ಶಕ್ತಿಯಾಗಿದೆ. ಸುಧಾಕರ ಆಚಾರ್ಯರ ಸಂಕಲ್ಪ ಸಂಯೋಜನೆಯಲ್ಲಿ ಮೂಡಿರುವ ಕಾಶ್ಮೀರ ವಿಜಯ ಯಶಸ್ಸು ಕಾಣಲಿ ಎಂದು ಶುಭಹಾರೈಸಿದರು.
ನಾವು ಮಾಡುವ ಯಾವುದೇ ಕೆಲಸದಲ್ಲೂ ವಿಜಯ ಸಿಗಬೇಕಾದರೆ ಭಗವಂತನ ಅನುಗ್ರಹ ಅವಶ್ಯ. ದೈವ ಭಕ್ತಿö, ದೇಶಭಕ್ತಿ ಇದ್ದಾಗ ಏಳಿಗೆ ಸಾಧ್ಯವಿದೆ. ದೈವಭಕ್ತಿ ಉದ್ದೀಪನಕ್ಕೆ ಭಜನೆ, ದೇವಾಲಯ, ಪೂಜೆ, ಪುರಸ್ಕಾರಗಳು ಪೂರಕವಾದರೆ, ದೇಶಭಕ್ತಿಗೆ ಉದ್ದೀಪನಕ್ಕೆ ಸಾಕಷ್ಟು ಮಾರ್ಗಗಳಿಲ್ಲ. ದೇಶದ ಬಗ್ಗೆ ಜಾಗೃತಿ, ಆಕ್ರಮಣಗಳ ಕುರಿತಾದ ಜಾಗೃತಿ ಮೂಡಿಸುವುದೇ ಈ ರೀತಿಯ ಕಾರ್ಯ ದೇಶ ಭಕ್ತಿ ಉದ್ದೀಪನದ ಮೂಲ ಸ್ವರೂಪವಾಗಿದೆ ಎಂದರು.
ದಿ ಮೈಸೂರ್‌ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ್ ಕುಮಾರ್ ಶೆಟ್ಟಿ, ಉದ್ಯಮಿ, ಮುಖಂಡ ಗುರ್ಮೆ ಸುರೇಶ್ ಶೆಟ್ಟಿ,ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದ.ಕ. ಕನ್ನಡ ಮತ್ತು ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪ್ರೋ.ಎಂ.ಎಲ್. ಸಾಮಗ, ಸುಧಾಕರ ಆಚಾರ್ಯ ಉಡುಪಿ,ಪ್ರೋ. ಪವನ್ ಕಿರಣಕೆರೆ, ಬಿ. ರಮಾನಂದ ರಾವ್ ಮುಂಬೈ , ಉಮೇಶ್ ಶೆಟ್ಟಿ ಮುಂಬೈ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.