ಅಂಡಾಶಯದಲ್ಲಿ16 ಕೆ.ಜಿ.ಗಡ್ಡೆ!:ಮಣಿಪಾಲದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
Team Udayavani, Feb 2, 2017, 4:09 PM IST
ಉಡುಪಿ: ಮಣಿಪಾಲ ಆಸ್ಪತ್ರೆಯಲ್ಲಿ ದಾವಣಗೆರೆಯ ಮಹಿಳಾ ರೋಗಿಯೊಬ್ಬರ (69)ಅಂಡಾಶಯದಲ್ಲಿದ್ದ 16 ಕೆ. ಜಿ. ತೂಕದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ.
ಕೆಎಂಸಿ ಮತ್ತು ಆಸ್ಪತ್ರೆ ಸ್ತ್ರೀರೋಗ ವಿಭಾಗದ ಘಟಕ ಮುಖ್ಯಸ್ಥ ಡಾ| ಶ್ರೀಪಾದ ಹೆಬ್ಟಾರ್ ರೋಗಿಯನ್ನು ಅಲ್ಟ್ರಾಸೌಂಡ್ ಪರೀಕ್ಷೆಗೊಳಪಡಿಸಿ ಅಂಡಾಶಯದ ಗೆಡ್ಡೆ ಪತ್ತೆಹಚ್ಚಿದರು. ಒಂದು ವರ್ಷದಿಂದ ರೋಗಿಯ ಕಿಬ್ಬೊಟ್ಟೆ ಊದಿತ್ತು. ಕಳೆದ ಮೂರು ತಿಂಗಳಲ್ಲಿ ಹಸಿವು ಕಡಿಮೆಯಾಗಿತ್ತು. ಸ್ವಲ್ಪ$ತಿಂದರೂ ಹೊಟ್ಟೆ ತುಂಬಿದ ಅನುಭವ ಆಗುತ್ತಿತ್ತು. ಗೆಡ್ಡೆಯ ಅನುಭವ ಬಹಳ ಕಾಲದ ವರೆಗೆ ಬಂದಿರಲಿಲ್ಲ. ಡಾ| ಹೆಬ್ಟಾರ್ ತಿಂಗಳೊಳಗೆ ಗೆಡ್ಡೆಯ ಕ್ಷಿಪ್ರ ಬೆಳವಣಿಗೆ ಗಮನಿಸಿ ತೆಗೆಯಲು ಶಸ್ತ್ರಚಿಕಿತ್ಸಾ ವಿಧಾನ ಆಯ್ದುಕೊಂಡರು. ರೋಗಿ 30 ವರ್ಷಗಳ ಹಿಂದೆ ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆಗ ಅಂಡಾಶಯ ಉಳಿಸಿ ಕೊಳ್ಳಲಾಗಿತ್ತು.
ಡಾ| ಹೆಬ್ಟಾರ್ ನೇತೃತ್ವದ ತಜ್ಞರ ತಂಡ ಯಶಸ್ವಿಯಾಗಿ ಸುದೀರ್ಘ 4 ಗಂಟೆ ಶಸ್ತ್ರಚಿಕಿತ್ಸೆ ನೆರವೇರಿಸಿದರು. ತಜ್ಞರಾದ ಡಾ| ಸುಜಾತಾ, ಡಾ| ಸುನಂದಾ ಹಾಗೂ ಡಾ| ನೀತಾ ವರ್ಗಿಸ್ ನೇತೃತ್ವದ ಅರಿವಳಿಕೆ ತಂಡದವರು ನೆರವಾದರು. ಗೆಡ್ಡೆ 35 ಸೆಂ. ಮೀ. x 40 ಸೆಂ. ಮೀ. ಮತ್ತು 16 ಕೆ.ಜಿ. ತೂಕವಿತ್ತು. ರೋಗಿ ಸುಧಾರಿಸಿಕೊಳ್ಳುತ್ತಿದ್ದು, ಇನ್ನು ಕೆಲವೇ ದಿವಸಗಳಲ್ಲಿ ಸಾಮಾನ್ಯ ಜೀವನದತ್ತ ಮರಳುತ್ತಾರೆ ಎಂದು ತಿಳಿಸಲಾಗಿದೆ. ತಂಡದ ಸಾಧನೆಗೆ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಕ| ಎಂ. ದಯಾನಂದ ಹರ್ಷವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್
Highway: ಅಂಬಲಪಾಡಿ ಅಂಡರ್‌ಪಾಸ್: ಗೊಂದಲ ನಿವಾರಣೆಗೆ ರಮೇಶ್ ಕಾಂಚನ್ ಆಗ್ರಹ
Malpe: ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಿಂದ ಕಾರ್ಗೋ ಶಿಪ್ ನಾರ್ವೆಗೆ ಹಸ್ತಾಂತರ
Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…
Kaup: ಸಹಕಾರಿ ಧುರೀಣ ಬಾಲಂ ವಿಶ್ವನಾಥ್ ರಾವ್ ಪಣಿಯೂರು ನಿಧನ
MUST WATCH
ಹೊಸ ಸೇರ್ಪಡೆ
Service Variation: ಸರಕಾರಿ ಬಸ್ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರ ಪರದಾಟ
Mangaluru: ಕಡಲತಡಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಕಲ ಸಿದ್ಧತೆ
Kundapura: ಸರಕಾರಿ ಕಾಲೇಜಿನ ಎನ್‌ವಿಆರ್ ಕೆಮರಾ ಕಳವು
Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್
Belthangady: ಕಾರು-ದ್ವಿಚಕ್ರ ವಾಹನ ಅಪಘಾತ: ಗಾಯಾಳಾಗಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.