ಅಪಘಾತ ತಾಣವಾಗಿ ಬದಲಾಗುತ್ತಿದೆ ಕಟಪಾಡಿ ಜಂಕ್ಷನ್: ಬೇಕಿದೆ ತುರ್ತು ಸೇವೆಗಾಗಿ ಆ್ಯಂಬುಲೆನ್ಸ್
Team Udayavani, Jan 3, 2023, 6:20 AM IST
ಕಟಪಾಡಿ: ನಿರಂತರ ಅಪಘಾತದ ತಾಣವಾಗುತ್ತಿರುವ ಕಟಪಾಡಿ ಜಂಕ್ಷನ್‌ನಲ್ಲಿ ಗಾಯಾಳುಗಳ ಜೀವ ರಕ್ಷಣೆಗೆ ಉಡುಪಿ ಅಥವಾ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲು ತುರ್ತು ಸೇವೆಯ ಆ್ಯಂಬುಲೆನ್ಸ್ ಆವಶ್ಯಕವಾಗಿ ಬೇಕಿದೆ ಎಂಬ ಸಾರ್ವಜನಿಕರ ಒತ್ತಾಯ ಕೇಳಿ ಬರುತ್ತಿದೆ.
ಕಟಪಾಡಿ, ಉದ್ಯಾವರ, ಕುರ್ಕಾಲು, ಶಂಕರಪುರ, ಬಂಟಕಲ್ಲು ಸಹಿತ ಪರಿಸರದ ಈ ಪ್ರದೇಶದಲ್ಲಿ ರಸ್ತೆ ಅವಘಡವು ಸಂಭವಿಸಿದಾಗ ಗಾಯಾಳುವಿನ ತುರ್ತು ರಕ್ಷಣೆಗೆ ರಿಕ್ಷಾ ಚಾಲಕರೇ ಮುಂದಾಗುತ್ತಿದ್ದು, ರಿಕ್ಷ ತುರ್ತು ಸೇವೆಯನ್ನು ನೀಡುವ ವಾಹನವಾಗಿ ಪರಿಣಮಿಸುತ್ತಿದೆ. ಆ ನಿಟ್ಟಿನಲ್ಲಿ ರಿಕ್ಷದವರ ಸೇವೆಯು ಅನನ್ಯವಾಗಿದೆ.
ನಿಜಕ್ಕಾದರೆ ಈ ಭಾಗದಲ್ಲಿ ಅಪಘಾತದಿಂದ ಗಾಯಗೊಂಡ ಗಾಯಾಳುಗಳ ಜೀವ ರಕ್ಷಣೆಗೆ ತುರ್ತು ಸೇವೆಯ ಆ್ಯಂಬುಲೆನ್ಸ್ ಅವಶ್ಯಕವಾಗಿ ಬೇಕಿದ್ದು, ಗಾಯಾಳುವಿಗೆ ತುರ್ತಾಗಿ ಬೇಕಾಗುವ ಪ್ರಥಮ ಚಿಕಿತ್ಸೆ, ಆಕ್ಸಿಜನ್ ವ್ಯವಸ್ಥೆ ಸಹಿತ ಮತ್ತಿತರ ಸೌಲಭ್ಯಗಳು ಲಭಿಸಿದಲ್ಲಿ ಗಾಯಾಳುಗಳ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಡಿಸೆಂಬರ್ ತಿಂಗಳಲ್ಲಿಯೇ ಟಿಪ್ಪರ್ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಉದ್ಯಾವರ ಬೊಳೆjಯ ಯುವಕ, ಬೈಕ್, ಕಾರು ಢಿಕ್ಕಿ ಹೊಡೆದು ಪಾದಚಾರಿಗಳು ಸಾವನ್ನಪ್ಪಿದ ಘಟನೆಯು ಕಟಪಾಡಿ ಜಂಕ್ಷನ್ ಪ್ರದೇಶದಲ್ಲಿ ಸಂಭವಿಸಿದೆ. ಉದ್ಯಾವರ ಪ್ರದೇಶದಲ್ಲಿಯೂ ಅಪಘಾತದಿಂದ ಸಾವು ನೋವುಗಳು ಸಂಭವಿಸಿದೆ. ಕುರ್ಕಾಲು, ಶಂಕರಪುರ, ಬಂಟಕಲ್ಲು ಪರಿಸರದಲ್ಲೂ ರಸ್ತೆ ಆವಘಡದಲ್ಲಿ ಸಾವು ನೋವುಗಳು ಸಂಭವಿಸಿವೆೆ.
ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು ಮತ್ತು ಉಡುಪಿ ಪ್ರದೇಶದಿಂದ ಬರುವ ವಾಹನಗಳು ಹಾಗೂ ಬೆಳ್ಮಣ್, ಶಿರ್ವ, ಬಂಟಕಲ್ಲು, ಶಂಕರಪುರ ಹಾಗೂ ಮಣಿಪುರ ಭಾಗದಿಂದ ಬರುವ ವಾಹನಗಳು ಮತ್ತು ಮಟ್ಟು ಕಟಪಾಡಿ ಪೇಟೆಯೊಳಗಿಂದ ಬರುವ ವಾಹನಗಳು ಕಟಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಜಂಕ್ಷನ್ ಮೂಲಕ ಸಾಗಬೇಕಿದೆ. ಹಾಗಾಗಿ ಸಹಜವಾಗಿಯೇ ಬೆಳೆಯುತ್ತಿರುವ ಕಟಪಾಡಿಯಲ್ಲಿ ಸದಾ ವಾಹನ ದಟ್ಟಣೆ, ಜನದಟ್ಟಣೆಯು ಸಾಮಾನ್ಯವಾಗಿದ್ದು, ನಿಯಂತ್ರಣಕ್ಕೆ ಪೊಲೀಸರು ಶ್ರಮ ವಹಿಸುತ್ತಿದ್ದಾರೆ.
ಕಟಪಾಡಿಯಲ್ಲಿ ಅಂಡರ್ ಅಥವಾ ಓವರ್ ಪಾಸ್ ನಿರ್ಮಿಸಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು. ಜನ ಸಾಮಾನ್ಯರ ಜೀವದ ಮೌಲ್ಯವನ್ನು ಅರಿತು, ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತು ಕಟಪಾಡಿ ಜಂಕ್ಷನ್ ಪ್ರದೇಶದಲ್ಲಿ ತುರ್ತು ಸೇವೆಯ ಆ್ಯಂಬುಲೆನ್ಸ್ ವಾಹನದ ಸೌಕರ್ಯವನ್ನು ಒದಗಿಸಿ ಅಪಘಾತದಿಂದ ಗಾಯಗೊಂಡ ಗಾಯಾಳುಗಳ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ-ಸುರಕ್ಷತೆಯನ್ನು ಕಲ್ಪಿಸಿಬೇಕೆಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.
ಬೆಳೆಯುತ್ತಿರುವ ಕಟಪಾಡಿ ಪರಿಸರದಲ್ಲಿ ನಿರಂತರವಾಗಿ ಅಪಘಾತ ಸಂಭವಿಸುತ್ತಿದೆ. ರಿಕ್ಷಾದವರೇ ತುರ್ತಾಗಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ. ಗಂಭೀರ ಗಾಯಗೊಂಡ ಗಾಯಾಳುವಿಗೆ ಉತ್ತಮ ಸುರಕ್ಷತೆ ಹಾಗೂ ಜೀವ ರಕ್ಷಣೆಗೆ ಕಟಪಾಡಿ ಜಂಕ್ಷನ್ ಪ್ರದೇಶದಲ್ಲಿ ತುರ್ತು ಸೇವೆಯ ಆ್ಯಂಬುಲೆನ್ಸ್ ವಾಹನ ಸೌಕರ್ಯದ ಆವಶ್ಯಕತೆ ಇದೆ.
-ಪ್ರೇಮ್ ಕುಮಾರ್ ಕಟಪಾಡಿ, ಅಧ್ಯಕ್ಷರು, ರಿಕ್ಷಾ ಯೂನಿಯನ್ ಕಟಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.