ಭರದಿಂದ ನಡೆಯುತ್ತಿದೆ ಮಟ್ಟು ಸೇತುವೆ ಕಾಮಗಾರಿ
ಮಳೆಗಾಲಕ್ಕೂ ಮುನ್ನ ಸೇತುವೆ ಕಾಮಗಾರಿ ಪೂರ್ಣ ಭರವಸೆ
Team Udayavani, Mar 9, 2020, 5:47 AM IST
ಕಟಪಾಡಿ: ಕೋಟೆ-ಮಟ್ಟು ಗ್ರಾಮದ ಅಭಿವೃದ್ಧಿಗೆ ಪೂರಕವಾಗುವಂತೆ ನಿರ್ಮಾಣಗೊಳ್ಳುತ್ತಿರುವ ಮಟ್ಟು ಸೇತುವೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಈ ಭಾಗದ ಜನರ ಕನಸು ನನಸಾಗುವ ದಿನಗಳು ಸಮೀಪಿಸುತ್ತಿವೆ.
ಮಳೆಗಾಲಕ್ಕೂ ಮೊದಲು ಪೂರ್ಣ?
ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಯೋಜನೆಯಡಿ 9.12 ಕೋಟಿ ರೂ. ಬಳಸಿಕೊಂಡು 145.88 ಮೀ ಉದ್ದ, 10.50 ಮೀ. ಅಗಲದ ಸೇತುವೆಯ ನಿರ್ಮಾಣ ಭರದಿಂದ ನಡೆಯುತ್ತಿದೆ. ಮಳೆಗಾಲಕ್ಕೆ ಮೊದಲೇ ಅಂದರೆ ಮೇ ಕೊನೆಗೆ ಕಾಮಗಾರಿ ಪೂರ್ಣಗೊಳಿಸುವ ಇಂಗಿತವನ್ನು ಎಂಜಿನಿಯರ್‌ಗಳು ವ್ಯಕ್ತಪಡಿಸಿದ್ದಾರೆ. ಹೊಸ ಸೇತುವೆ ಘನ ವಾಹನಗಳ ಸಂಚಾರಕ್ಕೂ ತೆರೆದುಕೊಳ್ಳಲಿರುವುದರಿಂದ ಹೆಚ್ಚು ಪ್ರಯೋಜನಕಾರಿಯೂ ಆಗಲಿದೆ.
ಭೂಸ್ವಾಧೀನ
ಇನ್ನುಳಿದಂತೆ ಸೇತುವೆಯ ಇಕ್ಕೆಲಗಳಲ್ಲಿನ ಸಂಪರ್ಕ ರಸ್ತೆಯ ವಿಸ್ತರಣೆಗಾಗಿ ಭೂ ಸ್ವಾಧೀನ ಪ್ರಕ್ರಿಯೆಯು ಉಡುಪಿ ಜಿಲ್ಲಾಧಿಕಾರಿ ಅವರ ಹಂತದಲ್ಲಿದ್ದು ಸರಕಾರದಿಂದ ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸಲಾಗುತ್ತದೆ.
ಹೆದ್ದಾರಿಯಿಂದ ನೇರ ಸಂಪರ್ಕ
ಸೇತುವೆಯಾದರೆ ರಾ.ಹೆ.ಯಿಂದ ಕಟಪಾಡಿ-ಕೋಟೆ ಮಟ್ಟು ಭಾಗಕ್ಕೆ ನೇರ ಸಂಪರ್ಕ ಕಲ್ಪಿಸಲಿದೆ. ಮೀನುಗಾರರು, ಕೃಷಿಕರು, ಪ್ರವಾಸಿಗರಿಗೆ, ನಿತ್ಯ ಸಂಚಾರಿಗಳಿಗೆ ಹೆಚ್ಚು ಪ್ರಯೋಜನವಾಗಲಿದೆ. ವಾಣಿಜ್ಯಿಕ, ಪ್ರವಾಸೋದ್ಯಮ ದೃಷ್ಟಿಯಿಂದಲೂ ಪೂರಕವಾಗಲಿದೆ.
ಗ್ರಾಮದ ಅಭಿವೃದ್ಧಿಗೆ ಸಹಕಾರಿ
ಕಟಪಾಡಿ ಹಾಗೂ ಕೋಟೆ-ಮಟ್ಟು ಗ್ರಾಮವು ನಗರೀಕರಣದತ್ತ ತೆರೆದುಕೊಳ್ಳಲು ನೂತನ ಮಟ್ಟು ಸೇತುವೆಯು ಬಹು ದೊಡ್ಡ ಕೊಡುಗೆಯಾಗಲಿದೆ .
-ಗಣೇಶ್ ಕುಮಾರ್ ಮಟ್ಟು, ಉಪಾಧ್ಯಕ್ಷ, ಕೋಟೆ ಗ್ರಾ.ಪಂ.
ಮೇ ಅಂತ್ಯಕ್ಕೆ ಪೂರ್ಣ
ಪಾದಚಾರಿ ಮಾರ್ಗವನ್ನೂ ಹೊಂದಿರುವ ಈ ಸೇತುವೆಯ ನಿರ್ಮಾಣದ ಕಾಮಗಾರಿಯನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಲಾಗುತ್ತದೆ. ಅನಂತರದಲ್ಲಿ ಸುಸಜ್ಜಿತ ಸೇತುವೆಯು ಸೂಕ್ತ ಸಂಪರ್ಕ ರಸ್ತೆಯೊಂದಿಗೆ ಸುರಕ್ಷಿತ ಸಂಚಾರಕ್ಕೆ ತೆರೆದುಕೊಳ್ಳಲಿದೆ .
– ಸಂಗಮೇಶ್ ಜಿ.ಆರ್, ಎಕ್ಸಿಕ್ಯೂಟಿವ್ ಎಂಜಿನಿಯರ್, ಕೆ.ಆರ್.ಡಿ.ಸಿ.ಎಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.