ಫೆ. 9 – 17: ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ವಾರ್ಷಿಕ ಉತ್ಸವ
Team Udayavani, Feb 8, 2020, 5:22 AM IST
ಕಟಪಾಡಿ: ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದ ವರ್ಷಾವಧಿ ಉತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪರವೂರು ರಾಕೇಶ ತಂತ್ರಿ ನೇತೃತ್ವದಲ್ಲಿ, ಪ್ರಧಾನ ಅರ್ಚಕ ದೇವದಾಸ ಶಾಂತಿ ಅವರ ಪೌರೋಹಿತ್ಯದಲ್ಲಿ ಫೆ. 9ರಿಂದ ಫೆ. 17ರ ವರೆಗೆ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಫೆ. 9ರಂದು ಸಂಜೆ 3 ಗಂಟೆಗೆ
ಏಣಗುಡ್ಡೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಿಂದ ಹೊರೆಕಾಣಿಕೆ ಮೆರವ ಣಿಗೆ. ಫೆ. 10ರಂದು ಧ್ವಜಾರೋಹಣ, ಶ್ರೀ ವಿಶ್ವನಾಥ ದೇವರು ಹಾಗೂ ಶ್ರೀ ಅನ್ನಪೂರ್ಣೇಶ್ವರೀ ದೇವಿಗೆ ನವಕ ಕಲಶಾಭಿಷೇಕ. ಫೆ. 11ಕ್ಕೆ ಶ್ರೀ ಗಣಪತಿ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರಿಗೆ ನವಕ ಕಲಶಾಭಿಷೇಕ, ಫೆ. 12ಕ್ಕೆ ಶ್ರೀಕೃಷ್ಣ ಮತ್ತು ಶ್ರೀ ಅಯ್ಯಪ್ಪ ದೇವರಿಗೆ ನವಕ ಕಲಷಾಭಿಷೇಕ. ಫೆ. 13ಕ್ಕೆ ಶ್ರೀ ನಾಗದೇವರಿಗೆ, ಶ್ರೀ ಕಲ್ಕುಡ ದೈವಕ್ಕೆ ನವಕ ಕಲಶಾಭಿಷೇಕ ಜರಗಲಿದೆ.
ಫೆ. 14ರಂದು ಮಹಾರುದ್ರ ಹೋಮ, ಶ್ರೀ ಪಾರ್ವತೀಪರಮೇಶ್ವರ ಯಜ್ಞ ಮಂಟಪ ಪ್ರವೇಶ. ಫೆ. 15ಕ್ಕೆ ಶ್ರೀ ವಿಶ್ವನಾಥ ದೇವರಿಗೆ ಶತಸೀಯಾಳಾಭಿಷೇಕ. ರಾತ್ರಿ ರಥೋತ್ಸವ, ಕೆರೆ ದೀಪೋತ್ಸವ, ಕಟ್ಟೆ ಪೂಜೆ. ಫೆ. 16ಕ್ಕೆ ಬೆಳಗ್ಗೆ 11 ಗಂಟೆಗೆ ಹಗಲು ಉತ್ಸವ-ರಥೋತ್ಸವ, ಮಹಾ ಅನ್ನಸಂತರ್ಪಣೆ, ಸಂಜೆ ಪಲ್ಲಕ್ಕಿ ಉತ್ಸವ, ಪೇಟೆ ಸವಾರಿ, ಮೃಗ ಬೇಟೆ, ಶಯನೋತ್ಸವ, ಕವಾಟ ಬಂಧನ. ಫೆ. 17ಕ್ಕೆ ಭಂಡಾರ ಇಳಿದು ಕಲ್ಕುಡ ಕೋಲ ನಡೆಯಲಿದೆ.
ನಿತ್ಯ ಮಹಾಗಣಪತಿ ಹೋಮ, ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಲಲಿತಾ ಸಹಸ್ರನಾಮ, ಭಜನೆ ಜರಗಲಿದೆ ಎಂದು ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ಉಪಾಧ್ಯಕ್ಷರಾದ ಶ್ರೀಕರ ಅಂಚನ್, ಆನಂದ ಮಾಬ್ಯಾನ್, ಗೌ|ಪ್ರ| ಕಾರ್ಯದರ್ಶಿ ಯು. ಶಿವಾನಂದ, ಪ್ರಧಾನ ಕೋಶಾಧಿಕಾರಿ ವೀರೇಶ್ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Work-life balance; ಹೆಚ್ಚು ಸಮಯ ಕಳೆದರೆ ಪತ್ನಿ ಓಡಿ ಹೋಗಬಹುದು: ಗೌತಮ್ ಅದಾನಿ
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.