ಕಟಪಾಡಿ: ಕಂಬಳಗದ್ದೆ ಹೆದ್ದಾರಿ ಬಳಿ ಅಪಘಾತಗಳಿಗೆ ತಡೆ
Team Udayavani, Feb 3, 2019, 1:00 AM IST
ಕಾಪು: ರಾ.ಹೆ. ಹೆದ್ದಾರಿ 66 ಹಾದು ಹೋಗುವ ಕಟಪಾಡಿ ಕಂಬಳ ಗದ್ದೆ ಅಪಘಾತಗಳ ತಾಣವಾಗಿದ್ದು, ಇಲ್ಲಿ ಅವಘಡಗಳನ್ನು ತಪ್ಪಿಸಲು ಪೊಲೀಸರು ಕ್ರಮಕೈಗೊಂಡಿದ್ದಾರೆ. ಅದರಲ್ಲೂ ಫೆ.2 ಮತ್ತು 3 ರಂದು ಕಟಪಾಡಿ ಬೀಡು ಮೂಡು – ಪಡು ಜೋಡುಕರೆ ಕಂಬಳ ನಡೆಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಅಪಾಯಕಾರಿ ಪ್ರದೇಶ
ಕಂಬಳ ಗದ್ದೆಗೆ ತಾಗಿಕೊಂಡಂತಿರುವ ಹೆದ್ದಾರಿ ಪ್ರದೇಶ ಅಪಾಯಕಾರಿ ಪ್ರದೇಶ ವಾಗಿದೆ. ಇಲ್ಲಿ 2013ರಲ್ಲಿ ನಡೆದಿರುವ ಬೈಕ್ ಮತ್ತು ಮಾರುತಿ ಆಮ್ನಿ ನಡುವಿನ ಅಪಘಾತದಲ್ಲಿ ಕಂಬಳ ವೀಕ್ಷಿಸಿ ಹಿಂತಿರುಗುತ್ತಿದ್ದ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದರು. 2014ರಲ್ಲಿ ಪೊಲೀಸ್ ಒಬ್ಬರು ಮೃತಪಟ್ಟಿದ್ದರು. ಅದೇ ವರ್ಷ ಫೆ. 27ರಂದು ಕಂಬಳಗದ್ದೆ ಬಳಿಯೇ ನಡೆದಿದ್ದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದರು.
10 ವರ್ಷದಲ್ಲಿ 15ಕ್ಕೂ ಹೆಚ್ಚು ಬಲಿ
ಮೂಡಬೆಟ್ಟು – ಕಲ್ಲಾಪು ನಡುವೆ 1 ಕಿ.ಮೀ. ಅಂತರದಲ್ಲಿ 10 ವರ್ಷಗಳಲ್ಲಿ 15ಕ್ಕೂ ಅಧಿಕ ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 25ಕ್ಕೂ ಹೆಚ್ಚು ಅಪಘಾತಗಳು ಸಂಭವಿ ಸಿದ್ದು, ಗಾಯಾಳುಗಳ ಸಂಖ್ಯೆಅತ್ಯಧಿಕವಿದೆ.
ವೇಗ ನಿಯಂತ್ರಣಕ್ಕೆ ಬ್ಯಾರಿ ಕೇಡ್
ಕಂಬಳ ದಿನಗಳಂದು ವೇಗ ನಿಯಂತ್ರಣಕ್ಕೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ. ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡದಂತೆ ಎಚ್ಚರಿಕೆ ಫಲಕ ಹಾಕಲಾಗಿದೆ. ಕಂಬಳ ವೀಕ್ಷಣೆಗೆ ಬರುವವರು
ಕಲ್ಲಾಪು ಜಂಕ್ಷನ್‌ನಿಂದ ಮೂಡಬೆಟ್ಟು ಜಂಕ್ಷನ್‌ವರೆಗೆ ಹೆದ್ದಾರಿ ಬದಿ ವಾಹನ ನಿಲ್ಲಿಸುವುದು ಎಲ್ಲ ರೀತಿಯ ಸಮಸ್ಯೆಗೆ ಕಾರಣವಾಗುತ್ತಿತ್ತು.
ಅಪಘಾತ ತಡೆಗೆ ಒತ್ತು.
ಕಂಬಳ ಜಾಗದ ಪ್ರದೇಶ ಅಪಾಯಕಾರಿ ಸ್ಥಳವಾಗಿದ್ದು, ಅಪಘಾತ ತಡೆಗೆ ಬ್ಯಾರಿಕೇಡ್ ಅಳವಡಿಕೆ, ಎಚ್ಚರಿಕೆ ಫಲಗಳನ್ನು ಹಾಕಿ ಜನರಲ್ಲಿ ಜಾಗೃತಿ ಮೂಡಿಸಲು ಯತ್ನಿಸಲಾಗಿದೆ.
-ಬಿ. ಲಕ್ಷ್ಮಣ್ ಪ್ರಭಾರ ಠಾಣಾಧಿಕಾರಿ, ಕಾಪು ಪೊಲೀಸ್ ಠಾಣೆ
ಸಮಿತಿಯ ಸಹಯೋಗ
ಕಟಪಾಡಿ ಕಂಬಳದ ವೇಳೆ ಹೆದ್ದಾರಿಯಲ್ಲಿ ಯಾವುದೇ ಅಪಘಾತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿರುವುದು ಶ್ಲಾಘನೀಯ ಕ್ರಮವಾಗಿದೆ. ಪೊಲೀಸ್ ಇಲಾಖೆ ನಡೆಸುವ ಮುನ್ನೆಚ್ಚರಿಕಾ ಪ್ರಯತ್ನಕ್ಕೆ ಕಂಬಳ ಸಮಿತಿ ಕೂಡ ಸಹಯೋಗ ನೀಡುತ್ತಿದೆ.
-ಕೆ. ವಿನಯ ಬಲ್ಲಾಳ್,ಕಟಪಾಡಿ ಬೀಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.