ಕಟಪಾಡಿ ರಾ.ಹೆ.: ಟ್ರಾಫಿಕ್ ಜಾಮ್ ಕಿರಿಕ್
Team Udayavani, May 14, 2018, 7:05 AM IST
ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ ಬಳಿ ಹೆದ್ದಾರಿ ಇಕ್ಕೆಲಗಳಲ್ಲಿಯೂ, ಕಟಪಾಡಿ ಪೇಟೆ ಮತ್ತು ಶಿರ್ವ ಸಂಪರ್ಕ ರಸ್ತೆಯಲ್ಲಿಯೂ ವಾಹನ ದಟ್ಟಣೆಯಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.
ರವಿವಾರ ರಜಾ ದಿನ ಮತ್ತು ಹಲವು ಕಡೆಗಳಲ್ಲಿ ಶುಭ ಕಾರ್ಯಗಳ ನಿಮಿತ್ತ ವಾಹನ ದಟ್ಟಣೆ ಎಂದಿಗಿಂತ ಹೆಚ್ಚಿತ್ತು. ಸುಮಾರು 11 ಗಂಟೆಯ ಅನಂತರ 12-30ರ ವರೆಗೆ ಹೆದ್ದಾರಿಯಲ್ಲಿ ಆಗಾಗ್ಗೆ ಸಾಲುದ್ದ ವಾಹನಗಳಿಂದಾಗಿ ಟ್ರಾಫಿಕ್ ಜಾಮ್ ಸಂಭವಿಸುತ್ತಿತ್ತು ಎನ್ನಲಾಗುತ್ತಿದೆ.
ಅರ್ಧ ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್
ಮಧ್ಯಾಹ್ನದ ಅನಂತರದ ವೇಳೆಯಲ್ಲಿ ಕಟಪಾಡಿಯ ಹಳೆ ಎಂ.ಬಿ.ಸಿ. ರಸ್ತೆಯೂ ವಾಹನ ದಟ್ಟಣೆಯಿಂದ ಬೈಕ್ ಸವಾರರ ಸಹಿತ, ರಿಕ್ಷಾ, ಕಾರು, ಇತರೇ ಸಾಲು ಸಾಲು ವಾಹನಗಳು ಅರ್ಧ ಗಂಟೆಗೂ ಮಿಕ್ಕಿದ ಕಾಲ ಟ್ರಾಫಿಕ್ ಜಾಮ್ ಆನುಭವಿಸುವಂತಾಯಿತು.
ಒಳ ರಸ್ತೆಯಲ್ಲೂ ಟ್ರಾಫಿಕ್ ಜಾಮ್ ಬಿಸಿ
ಕಟಪಾಡಿಯ ಹೆಚ್ಚಿನ ಎಲ್ಲ ಸಭಾಭವನಗಳಲ್ಲಿ ಶುಭ ಕಾರ್ಯಗಳು ನಡೆಯುತ್ತಿದ್ದರಿಂದ ಒಳ ರಸ್ತೆಯಲ್ಲಿ ವಾಹನಗಳು ಹೆಚ್ಚು ಸಂಚರಿಸಿದ ಪರಿಣಾಮ ಈ ಟ್ರಾಫಿಕ್ ಜಾಮ್ ಬಿಸಿ ಒಳ ರಸ್ತೆಯಲ್ಲಿಯೂ ಕಂಡು ಬಂದಿತ್ತು.
ಕೆಲವು ರಿಕ್ಷಾ ಚಾಲಕರು, ಸ್ಥಳೀಯರು ಟ್ರಾಫಿಕ್ ಜಾಮ್ ತಿಳಿಗೊಳಿಸುವಲ್ಲಿ ಸಫಲರಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಆನುವು ಮಾಡಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.