ಕಟಪಾಡಿ: ಬೈಕ್‌ ಸಹಿತ ಚೋರರ ಬಂಧನ


Team Udayavani, May 31, 2017, 12:14 PM IST

30-Bike-1.jpg

ಕಾಪು: ಕಟಪಾಡಿಯಲ್ಲಿ ಅಂಗಡಿಯೊಂದರ ಮುಂಭಾಗದಲ್ಲಿ ಸೋಮವಾರ ರಾತ್ರಿ ಇರಿಸಿ ಹೋಗಿದ್ದ ಬೈಕನ್ನು ಕದ್ದೊಯ್ದ ಆರೋಪಿಗಳನ್ನು ಬೈಕ್‌ ಸಹಿತವಾಗಿ 24 ಗಂಟೆಯೊಳಗೆ ಕಾಪು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. 

ಕಟಪಾಡಿ ಕೋಟೆ ಗ್ರಾಮದ ಇಂದಿರಾನಗರ ನಿವಾಸಿ ಸೈಯ್ಯದ್‌ ನಾಸಿರ್‌ (22), ಕೋಟೆ ಗ್ರಾಮದ ಪಡು ಏಣಗುಡ್ಡೆ ನಿವಾಸಿ ಉಬೇದುಲ್ಲಾ (21) ಬಂಧಿತ ಆರೋಪಿಗಳು. ಅವರನ್ನು ಉದ್ಯಾವರ ಫಾರೆಸ್ಟ್‌ ಗೇಟ್‌ ಬಳಿ ಬೈಕ್‌ ಸಮೇತವಾಗಿ ಸೆರೆ ಹಿಡಿಯಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಕರಣದ ವಿವರ: ಕಟಪಾಡಿಯ ಹರೀಶ್‌ ಆಚಾರ್ಯ ಅವರು ಮೇ 29ರಂದು ರಾತ್ರಿ 10 ಗಂಟೆಯ ವೇಳೆಗೆ ತಮ್ಮ ಮೋಟಾರ್‌ ಬೈಕನ್ನು ಕಟಪಾಡಿ – ಶಿರ್ವ ರಸ್ತೆಯ ಕೃಷ್ಣ ಜನರಲ್‌ ಸ್ಟೋರ್‌ ಬಳಿ ನಿಲ್ಲಿÉಸಿ ಹೋಗಿದ್ದರು. ಮೇ 30ರಂದು ಬೆಳಗ್ಗೆ ಬಂದು ನೋಡಿದಾಗ ಬೈಕ್‌ ನಾಪತ್ತೆಯಾಗಿದ್ದು, ಈ ಬಗ್ಗೆ ಕಾಪು ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದರು.

ಬೈಕ್‌ ಕಳವಾಗಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಕಾಪು ಪೊಲೀಸರು ಚುರುಕಾಗಿ ವಿವಿಧೆಡೆ ಹುಡುಕಾಟ ನಡೆಸಲು ಮುಂದಾಗಿದ್ದರು. ಈ ಸಂದರ್ಭ ಉದ್ಯಾವರ ಫಾರೆಸ್ಟ್‌ ಗೇಟ್‌ ಬಳಿ ಆರೋಪಿಗಳು ಬೈಕ್‌ ಸಮೇತವಾಗಿ ಸಂಚರಿಸುತ್ತಿರುವುದನ್ನು ಗಮನಿಸಿದ ಪೊಲೀಸರು ಬೈಕನ್ನು ತಡೆ ಹಿಡಿದು, ಆರೋಪಿಗಳನ್ನು ಮತ್ತು ಬೈಕನ್ನು ವಶಕ್ಕೆ  ತೆಗೆದುಕೊಂಡಿದ್ದಾರೆ.

ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್‌ ಅವರ ಮಾರ್ಗದರ್ಶನದಲ್ಲಿ, ಕಾಪು ಎಸ್‌ಐ ಜಗದೀಶ್‌ ರೆಡ್ಡಿ ನಿರ್ದೇಶನದಂತೆ ಕ್ರೈಂ ಎಸ್‌ಐ ಬಿ. ಲಕ್ಷ್ಮಣ್‌ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬಂದಿಗಳಾದ ಮಹಾಬಲ ಶೆಟ್ಟಿಗಾರ್‌, ಕೃಷ್ಣ ಪೂಜಾರಿ, ಗಣೇಶ್‌, ಸಂದೀಪ್‌ ಶೆಟ್ಟಿ, ಮೋಹನ್‌ಚಂದ್ರ ಮೊದಲಾದವರು ಭಾಗವಹಿಸಿದ್ದರು.

ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಟಾಪ್ ನ್ಯೂಸ್

Beggars baby

Begging-free ಇಂದೋರ್‌ ಗುರಿ: ಜ.1ರಿಂದ ಭಿಕ್ಷೆ ಕೊಟ್ಟರೆ ಶಿಕ್ಷೆ!

1-pppp

Pakistan ಶರಣಾದ ಚಿತ್ರ ಸೇನಾ ಕಚೇರಿಯಿಂದ ತೆರವು: ಕಾಂಗ್ರೆಸ್‌ ಕಿಡಿ

mohamad-yunus

Bangladesh; 2025ರ ಅಂತ್ಯ ಇಲ್ಲವೇ 2026ಕ್ಕೆ ಚುನಾವಣೆ: ಯೂನುಸ್‌

1-rt

Farmers; ಬಟೋಂಗೆ ತೋ ಲುಟೋಂಗೆ: ಒಗ್ಗಟ್ಟಿಗೆ ಟಿಕಾಯತ್‌ ಕರೆ

1-tmk

T.M.Krishna ಅವರನ್ನು ಸುಬ್ಬುಲಕ್ಷ್ಮೀ ಪ್ರಶಸ್ತಿ ಪುರಸ್ಕೃತ ಎಂದು ಕರೆಯಬಾರದು: ಸುಪ್ರೀಂ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

Bus-problem

Service Variation: ಸರಕಾರಿ ಬಸ್‌ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರ ಪರದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV-Deepavali

Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್‌

Ramesh-Kanchan1

Highway: ಅಂಬಲಪಾಡಿ ಅಂಡರ್‌ಪಾಸ್‌: ಗೊಂದಲ ನಿವಾರಣೆಗೆ ರಮೇಶ್‌ ಕಾಂಚನ್‌ ಆಗ್ರಹ

Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…

Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…

Vishwanath-Rao

Kaup: ಸಹಕಾರಿ ಧುರೀಣ ಬಾಲಂ ವಿಶ್ವನಾಥ್ ರಾವ್ ಪಣಿಯೂರು ನಿಧನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮತಿ ಪ್ರತಿಭಾ, ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮತಿ ಪ್ರತಿಭಾ, ಗೀತಾ ತ್ರಯೋದಶಾವಧಾನ’ ಸಂಪನ್ನ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Beggars baby

Begging-free ಇಂದೋರ್‌ ಗುರಿ: ಜ.1ರಿಂದ ಭಿಕ್ಷೆ ಕೊಟ್ಟರೆ ಶಿಕ್ಷೆ!

1-pppp

Pakistan ಶರಣಾದ ಚಿತ್ರ ಸೇನಾ ಕಚೇರಿಯಿಂದ ತೆರವು: ಕಾಂಗ್ರೆಸ್‌ ಕಿಡಿ

mohamad-yunus

Bangladesh; 2025ರ ಅಂತ್ಯ ಇಲ್ಲವೇ 2026ಕ್ಕೆ ಚುನಾವಣೆ: ಯೂನುಸ್‌

1-rt

Farmers; ಬಟೋಂಗೆ ತೋ ಲುಟೋಂಗೆ: ಒಗ್ಗಟ್ಟಿಗೆ ಟಿಕಾಯತ್‌ ಕರೆ

1-tmk

T.M.Krishna ಅವರನ್ನು ಸುಬ್ಬುಲಕ್ಷ್ಮೀ ಪ್ರಶಸ್ತಿ ಪುರಸ್ಕೃತ ಎಂದು ಕರೆಯಬಾರದು: ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.