ಕಾಪು: ಹೆದ್ದಾರಿ ಮಧ್ಯೆ ಅಸುರಕ್ಷಿತ ಎಕ್ಸ್‌ಪ್ರೆಸ್ ಬಸ್ ನಿಲ್ದಾಣ
Team Udayavani, Aug 3, 2018, 6:00 AM IST
ವಿಶೇಷ ವರದಿ – ಕಾಪು: ಬೆಳೆಯುತ್ತಿರುವ ಕಾಪುವಿನಲ್ಲಿ ವ್ಯವಸ್ಥಿತ ಎಕ್ಸ್‌ಪ್ರೆಸ್ ಬಸ್ ನಿಲ್ದಾಣದ ಕೊರತೆ ಬಹುವಾಗಿ ಕಾಡುತ್ತಿದೆ. ಹೆದ್ದಾರಿ ಪಕ್ಕದಲ್ಲಿ ಎಕ್ಸ್‌ಪ್ರೆಸ್ ಬಸ್ ನಿಲುಗಡೆಗೆ ನಿಲ್ದಾಣದ ಕೊರತೆ ಇರುವುದರಿಂದ ಬಸ್‌ಗಳು ಹೆದ್ದಾರಿಯಲ್ಲೇ ನಿಲ್ಲುತ್ತಿದ್ದು, ಇದರಿಂದಾಗಿ ಜನ ತೊಂದರೆ ಗೊಳಗಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಕಾಪು ಮೇಲ್ಸೇತುವೆ ಬಳಿ ಸರ್ವೀಸ್ ರಸ್ತೆ ಪ್ರವೇಶ ಸ್ಥಳ ಎಕ್ಸ್‌ಪ್ರೆಸ್ ಬಸ್‌ಗಳ ತಂಗುದಾಣವಾಗಿ ಪರಿವರ್ತನೆ ಗೊಂಡಿದೆ. ಆದೇ ರಸ್ತೆಯಲ್ಲಿ ವಾಹನಗಳು ಅತಿ ವೇಗವಾಗಿ ಸಂಚರಿಸುವುದರಿಂದ ಈ ತಾತ್ಕಾಲಿಕ ತಂಗುದಾಣ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಸರ್ವೀಸ್ ರಸ್ತೆಯ ಕಾಮಗಾರಿ ಪೂರ್ಣಗೊಳ್ಳದೇ, ಮತ್ತೂಂದೆಡೆ ಡೈವರ್ಷನ್ ಬಳಿ ಕೂಡ ಸಮರ್ಪಕ ವ್ಯವಸ್ಥೆಗಳು ಇಲ್ಲದೇ ಇರುವುದರಿಂದ ಎಕ್ಸ್‌ಪ್ರೆಸ್ ಬಸ್‌ಗಳು ನಿಲ್ದಾಣಕ್ಕೆ ತೆರಳುವುದೂ ಕಷ್ಟವಾಗಿದೆ.
ಸಮಸ್ಯೆಗಳೇನು ?
ಪ್ರಸ್ತುತ ಎಕ್ಸ್‌ಪ್ರೆಸ್ ಬಸ್‌ನಿಲ್ದಾಣ ಕಾಪು ಪೇಟೆಯಿಂದ ಸುಮಾರು 1 ಕಿ.ಮೀ. ದೂರದಲ್ಲಿದೆ. ಜನ ಅಲ್ಲಿಗೆ ಹೋಗಿ ಬರಲು ಪರದಾಡುವಂತಾಗಿದೆ. ಹಿರಿಯರು, ಮಹಿಳೆಯರು, ವಿದ್ಯಾರ್ಥಿಗಳು ಬಾಡಿಗೆ ವಾಹನಗಳನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ.
ದುಬಾರಿ ಬಾಡಿಗೆ
ಕಾಪುವಿನಿಂದ ಮಣಿಪಾಲಕ್ಕೆ ತೆರಳುವ ಬಸ್ ಟಿಕೆಟ್ ದರ 20 ರೂಪಾಯಿ. ಆದರೆ ಕಾಪು ಪೇಟೆಯಿಂದ ಪೆಟ್ರೋಲ್ ಬಂಕ್ ಬಳಿ ಇರುವ ಎಕ್ಸ್‌ಪ್ರೆಸ್ ಬಸ್ ತಂಗುದಾಣಕ್ಕೆ ತೆರಳಲು ರಿûಾಕ್ಕೆ 20ರಿಂದ 30 ರೂಪಾಯಿ ಬಾಡಿಗೆ ನೀಡಬೇಕಿದೆ!
ಹೆದ್ದಾರಿ ಯೋಜನಾ ಪ್ರಾಧಿಕಾರಕ್ಕೆ ಪತ್ರ
ರಾ.ಹೆ. 66ರ ಕಾಪುವಿನಲ್ಲಿ ಈಗ ಸ್ಥಳಾವಕಾಶದ ಕೊರತೆ ಇದೆ. ಹೆದ್ದಾರಿ ಪ್ರಾಧಿಕಾರ ಎಕ್ಸ್‌ಪ್ರೆಸ್ ತಂಗುದಾಣಕ್ಕಾಗಿ ಸೂಕ್ತ ಜಾಗವನ್ನು ಕಾಯ್ದಿರಿಸದೇ ಸಮಸ್ಯೆ ಸೃಷ್ಟಿಯಾಗಿದೆ. ಈಗಿರುವ ತಂಗುದಾಣ ಅಪಾಯಕಾರಿಯಾದ್ದರಿಂದ ಹೆದ್ದಾರಿ ಮತ್ತು ಯೋಜನಾ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದೇವೆ. ಕಾಮಗಾರಿ ಪೂರ್ಣಗೊಂಡ ಬಳಿಕ ಇದಕ್ಕೆ ಸಂಬಂಧ ಪಟ್ಟ ರೂಪುರೇಷೆ ಸಿಗಲಿದೆ. ಅವಕಾಶ ಸಿಕ್ಕಿದರೆ ಬಸ್ ತಂಗುದಾಣ ನಿರ್ಮಿಸಿ, ನಿರ್ವಹಣೆಗೆ ಯೋಜನೆ ರೂಪಿಸಲಾಗುವುದು .
– ರಾಯಪ್ಪ,ಮುಖ್ಯಾಧಿಕಾರಿ,ಕಾಪು ಪುರಭೆ
ಕಂಪೆನಿ ಹೊಣೆಯಾಗದು
ಸ್ಥಳಾವಕಾಶದ ಕೊರತೆ ಮತ್ತು ಅಂಡರ್‌ಪಾಸ್ ರಚನೆಯಾಗಿರುವುದರಿಂದ ಮುಖ್ಯ ಜಂಕ್ಷನ್‌ನಲ್ಲಿ ಬಸ್ ನಿಲ್ದಾಣ ರಚನೆ ಅಸಾಧ್ಯವಾಗಿದೆ. ಮಂಗಳೂರಿನಿಂದ ಬರುವ ಬಸ್‌ಗಳಿಗೆ ವಿದ್ಯಾನಿಕೇತನ ಶಾಲೆಯ ಬಳಿ, ಉಡುಪಿಯಿಂದ ಬರುವ ಬಸ್‌ಗಳಿಗೂ ಅಲ್ಲೇ ಸ್ಥಳಾವಕಾಶಕ್ಕೆ ಯೋಜನೆ ರೂಪಿಸಲಾಗಿದೆ. ಆದರೆ ಬಸ್ ಚಾಲಕರು ಫ್ಲೆ$ç ಓವರ್ ಪಕ್ಕದಲ್ಲೇ ಬಸ್ ನಿಲ್ಲಿಸುತ್ತಿದ್ದಾರೆ. ಅಲ್ಲಿ ಬಸ್ ನಿಲ್ಲಿಸಲು ಅವಕಾಶವೇ ಇಲ್ಲ. ಇದಕ್ಕೆ ಹೆದ್ದಾರಿ ನವಯುಗ್ ಕಂಪೆನಿ ಹೊಣೆಯಾಗದು.
– ಶಂಕರ್, ನವಯುಗ್ ಕಂಪೆನಿ ಅಧಿಕಾರಿ
ಪ್ರಯಾಣಿಕರ ಆತಂಕ ದೂರ ಮಾಡಬೇಕು
ನಿತ್ಯ ನೂರಾರು ಮಂದಿ ಎಕ್ಸ್‌ಪ್ರೆಸ್ ಬಸ್‌ಗಳನ್ನೇ ಅವಲಂಬಿಸುತ್ತಿದ್ದು ಕಾಪುವಿನಲ್ಲಿರುವ ಎರಡೂ
ಎಕ್ಸ್‌ಪ್ರೆಸ್ ಬಸ್ ನಿಲ್ದಾಣಗಳು ಫ್ಲೆ ಓವರ್ ಕೆಳಗಡೆಯೇ ಇರುವುದರಿಂದ ಅಲ್ಲಿಗೆ ತಲುಪುವುದು ಕಷ್ಟ.
– ಅನಿಲ್ ಕುಮಾರ್
ಸದಸ್ಯರು, ಕಾಪು ಪುರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.