ಪ್ರವಾಸಿಗರೇ, ಸಮುದ್ರಕ್ಕೆ ಇಳಿವ ಮುನ್ನ ಯೋಚಿಸಿ


Team Udayavani, May 11, 2018, 7:35 AM IST

0105Kpe1a.jpg

ಕಾಪು: ಕಾಪು ಬೀಚ್‌ ಪ್ರವಾಸಿಗರಿಗೆ ಸ್ವರ್ಗ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಇದು ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಆದರೆ ಮೋಜಿನಾಟದ ಉತ್ಸಾಹದಲ್ಲಿ ಸ್ಥಳೀಯರು ಮತ್ತು ಲೈಫ್‌ ಗಾರ್ಡ್‌ಗಳು ಎಚ್ಚರಿಕೆ ನೀಡಿದರೂ, ಪ್ರವಾಸಿಗರು ಜಲಸಮಾಧಿಯಾಗುತ್ತಿದ್ದಾರೆ.  

10 ವರ್ಷದಲ್ಲಿ 20ಕ್ಕೂ ಅಧಿಕ ಸಾವು ?
ಕಾಪು ಬೀಚ್‌ನಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಆದರೂ ಸ್ಥಳೀಯ ಮುಳುಗು ತಜ್ಞರು, ಮೀನುಗಾರರು ಮತ್ತು ಲೈಫ್‌ ಗಾರ್ಡ್‌ ಸದಸ್ಯರ ಸಮಯ ಪ್ರಜ್ಞೆಯಿಂದಾಗಿ ಹೆಚ್ಚಿನ ಸಂಖ್ಯೆಯ ಯುವಕ – ಯುವತಿಯರು ಅಪಾಯ ದಿಂದ ಪಾರಾಗಿದ್ದಾರೆ.

ಅಪಾಯಕಾರಿ ಕಾಪು ಸಮುದ್ರ 
ಇಲ್ಲಿನ ಬೀಚ್‌ ಸುಂದರ, ಆಕರ್ಷಕ. ಆದರೆ ಬಲು ಅಪಾಯಕಾರಿ. ಸಮುದ್ರಕ್ಕಿಳಿದು ಆಟವಾಡಲು ಸುಮಾರು 10 ಮೀ. ಒಳಗೆ ಮಾತ್ರ ಜಾಗ ಪ್ರಶಸ್ತವಾಗಿದೆ. ಅದಕ್ಕೂ ಮುಂದೆ ಹೋದವರಿಗೆ ನೀರು ಕುಡಿಸದೇ ಇರುವುದಿಲ್ಲ. 

ನಿರ್ಲಕ್ಷ್ಯದ್ದೇ ಸಮಸ್ಯೆ
ಕಾಪು ಬೀಚ್‌ನಲ್ಲಿ ಎಚ್ಚರಿಕೆ ಫ‌ಲಕಗಳನ್ನು ಅಳವಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಲೈಫ್‌ಗಾರ್ಡ್‌, ಹೋಂ ಗಾರ್ಡ್‌, ಕೋಸ್ಟಲ್‌ ಗಾರ್ಡ್‌ ಮತ್ತು ಪೊಲೀಸರ ಭದ್ರತೆಯಿದೆ. ಮುನ್ನೆಚ್ಚರಿಕೆ ನೀಡುವ ಸ್ಥಳೀಯರೂ ಇದ್ದಾರೆ. ಆದರೂ ಅವಘಡಗಳು ಸಂಭವಿಸುತ್ತಲೇ ಇವೆ. ಪ್ರವಾಸಿಗರು ಸಮುದ್ರದ ಬಗ್ಗೆ ನಿರ್ಲಕ್ಷ್ಯ ತಳೆಯುವುದರಿಂದಲೇ ಹೀಗಾಗುತ್ತಿದೆ.  
ತುರ್ತಾಗಿ ಬೇಕು ಹೆಚ್ಚುವರಿ ಸೌಕರ್ಯ 
ಲೈಫ್‌ ಗಾರ್ಡ್‌ ಟವರ್‌, ಪ್ರವಾಸಿಗರನ್ನು ಎಚ್ಚರಿಸಲು ಅನೌನ್ಸ್‌ಮೆಂಟ್‌ ಮೈಕ್‌, ಡೇಂಜರ್‌ ಸಿಗ್ನಲ್‌ ಅಲಾರಂ, ರೆಸ್ಕೂ ಬೋಟ್‌, ಜೆಸ್ಕಿ ಸ್ಕೂಟರ್‌, ಹೈಮಾಸ್ಟ್‌ ಲೈಟ್‌, ನೆರಳಿನ ವ್ಯವಸ್ಥೆಗೆ ಶೆಲ್ಟರ್‌ ಇತ್ಯಾದಿ ವ್ಯವಸ್ಥೆಗಳು ಬೀಚ್‌ನಲ್ಲಿ ತುರ್ತಾಗಿ ಆಗಬೇಕಿದೆ.ಈ ವ್ಯವಸ್ಥೆಗಳು ಅಳವಡಿಕೆಯಾದಲ್ಲಿ ಸಮುದ್ರಕ್ಕೆ ಬಿದ್ದವರನ್ನು ರಕ್ಷಿಸಲು ಲೈಫ್‌ಗಾರ್ಡ್‌ಗಳು ಸರ್ವ ಸನ್ನದ್ಧವಾಗಿ ಕುಳಿತಿರಲು ಸಾಧ್ಯವಿದೆ.  

5 ವರ್ಷಗಳಲ್ಲಿ  ನಡೆದ ಘಟನೆಗಳು  
ವರ್ಷ    ರಕ್ಷಣೆ    ಸಾವು

2013    5 ಮಂದಿ    2 
2014    3 ಮಂದಿ    4
2015    4 ಮಂದಿ    1
2016    4 ಮಂದಿ    1
2017    6 ಮಂದಿ    0
2018    ಓರ್ವ    1 

ಬೀಚ್‌ ಸೇಫ್‌ ಅಲ್ಲ  
ಕರಾವಳಿಯ ಬೀಚ್‌ಗಳು ಸ್ನಾನ ಮಾಡುವುದಕ್ಕೆ ಸೇಫ್‌ ಅಲ್ಲ. ಬೀಚ್‌ನಲ್ಲಿ ನೀರಿಗಿಳಿಯುವ ಬಹುತೇಕ ಹೊರಗಿನವರು. ಅವರಿಗೆ ಈಜು ಕೂಡಾ ಬರುವುದಿಲ್ಲ.  ಲೈಫ್‌ಗಾರ್ಡ್‌ಗಳು ನೀಡುವ ಎಚ್ಚರಿಕೆಯ ಮಾತುಗಳನ್ನು ನಿರ್ಲಕ್ಷಿಸುವುದರಿಂದ ಅಪಾಯವನ್ನು ಆಹ್ವಾನಿಸಿ ಕೊಳ್ಳುತ್ತಾರೆ. ಪ್ರವಾಸಿಗರೂ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.
– ಯತೀಶ್‌ ಬೈಕಂಪಾಡಿ,
ಸಿಇಒ, ಬೀಚ್‌ ಟೂರಿಸಂ ಡೆವಲಪ್‌ಮೆಂಟ್‌ ಪ್ರಾಜೆಕ್ಟ್ 

ಎಚ್ಚರಿಕೆ ನಿರ್ಲಕ್ಷ್ಯ ಬೇಡ
ಪ್ರತಿ ಬಾರಿ ಎಚ್ಚರಿಕೆ ಸಂದೇಶ ನೀಡಲಾಗುತ್ತದೆ. ಆದರೆ ಅದನ್ನು ಪ್ರವಾಸಿಗರು ನಿರ್ಲಕ್ಷಿಸುತ್ತಾರೆ. ಮೊನ್ನೆಯ ಪ್ರಕರಣದಲ್ಲೂ ಎಚ್ಚರಿಕೆ ನೀಡಿದಾಗ, ಹೇಗಿರಬೇಕೆಂದು ನಮಗೆ ತಿಳಿದಿದೆ. ನಮ್ಮ ಜೀವದ ಬಗ್ಗೆ ನಮಗೆ ಗೊತ್ತಿಲ್ಲವೇ?, ನಿಮಗೇಕೆ ನಮ್ಮ ಉಸಾಬರಿ ಎಂದು ಎದುರುತ್ತರ ನೀಡಿ ಸಮುದ್ರಕ್ಕೆ ಇಳಿದಿದ್ದೇ ಅಪಾಯಕ್ಕೆ ಆಹ್ವಾನವಾಯಿತು. 
 - ಪ್ರಫ‌ುಲ್ಲಾ, ಬೀಚ್‌ ನಿರ್ವಹಣಾ ತಂಡದ ಸದಸ್ಯೆ  

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

2

Udupi: ಯುವತಿ ನಾಪತ್ತೆ; ದೂರು ದಾಖಲು

Devadurga

Karkala: ಅಕ್ರಮ ಮದ್ಯ ದಾಸ್ತಾನು; ಆರೋಪಿ ಸೆರೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.