ಕಾಪು ಬೀಚ್‌ನಲ್ಲಿ ಮತ್ತೆ ಪ್ರವಾಸಿಗರು, ಮಕ್ಕಳು ಮತ್ತು ವಿಹಾರಾರ್ಥಿಗಳ ಕಲರವ


Team Udayavani, Sep 27, 2021, 12:51 PM IST

ಕಾಪು ಬೀಚ್‌ನಲ್ಲಿ ಮತ್ತೆ ಪ್ರವಾಸಿಗರು, ಮಕ್ಕಳು ಮತ್ತು ವಿಹಾರಾರ್ಥಿಗಳ ಕಲರವ

ಕಾಪು: ಶತಮಾನೋತ್ತರ ವಿಂಶತಿ (120) ವರ್ಷಾಚರಣೆಯ ಸಂಭ್ರಮದಲ್ಲಿರುವ ಕರಾವಳಿಯ ಆಕರ್ಷಕ ವಿಹಾರ ತಾಣ ಕಾಪು ಲೈಟ್ ಹೌಸ್ ಮತ್ತು ಬೀಚ್ ಇದೀಗ ಪ್ರವಾಸಿಗರಿಗೆ ಸಂಪೂರ್ಣ ಮುಕ್ತವಾಗಿ ತೆರೆದುಕೊಂಡಿದ್ದು, ಪ್ರವಾಸಿಗರು, ಮಕ್ಕಳು ಮತ್ತು ವಿಹಾರಾರ್ಥಿಗಳ ಕಲರವ ಪ್ರಾರಂಭಗೊಂಡಿದೆ.

ಕೊರೊನಾ ಎರಡನೇ ಅಲೆಯ ಕಾರಣದಿಂದ ಕಳೆದ ಮಾರ್ಚ್ ತಿಂಗಳಾಂತ್ಯದಿಂದ ಕಾಪು ಬೀಚ್‌ಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶಕ್ಕೆ ಅಧಿಕೃತವಾಗಿ ನಿರ್ಬಂಧ ವಿಽಸಲಾಗಿತ್ತು. ಇದರಿಂದಾಗಿ ಬೀಚ್ ಪ್ರವಾಸೋದ್ಯಮ ಸಂಪೂರ್ಣವಾಗಿ ನಿಂತು ಹೋಗಿದ್ದು, ಬೀಚ್‌ನಲ್ಲಿ ವ್ಯಾಪಾರ ವಹಿವಾಟುಗಳೂ ಸಂಪೂರ್ಣ ಸ್ಥಗಿತಗೊಂಡಿದ್ದವು.

ಕೊರೊನಾ ನಿರ್ಬಂಧದ ಜೊತೆಗೆ ಮಳೆಗಾಲವೂ ಆರಂಭಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರು ಬೀಚ್‌ಗೆ ಬರಲು ಹಿಂದೇಟು ಹಾಕುವಂತಾಗಿತ್ತು. ಕಾಪು ಬೀಚ್ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಗಾಲದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು ಇದರಿಂದಾಗಿ ತೀರಾ ಅಪಾಯಕಾರಿ ಸ್ಥಿತಿ ಉಂಟಾಗುತ್ತದೆ. ಇದರ ಜೊತೆಗೆ ಭಾರೀ ಮಳೆ ಮತ್ತು ತೌಖ್ತೆ ಚಂಡ ಮಾರುತದ ಪರಿಣಾಮದಿಂದಾಗಿ ಬೀಚ್ ಮೂಲಕವಾಗಿ ಲೈಟ್ ಹೌಸ್‌ಗೆ ತೆರಳುವ ರಸ್ತೆಯೂ ಕೊಚ್ಚಿ ಹೋಗಿದ್ದ ಪರಿಣಾಮ ಲೈಟ್ ಹೌಸ್‌ನ್ನು ಏರಲು ಸಮಸ್ಯೆಯಾಗುತ್ತಿತ್ತು.

ಸೆಪ್ಟಂಬರ್ 21ರಂದು ನಡೆದ ಲೈಟ್‌ಹೌಸ್ ದಿನಾಚರಣೆ, ಕಾಪು ಲೈಟ್‌ಹೌಸ್‌ನ ೧೨೦ ನೇ ವರ್ಷಾಚರಣೆ ಸಂಭ್ರಮ ಹಾಗೂ ಪ್ರವಾಸೋದ್ಯಮವನ್ನು ಇನ್ನಷ್ಟು ಬೆಳೆಸುವ ಉದ್ದೇಶದೊಂದಿಗೆ ಕಾಪು ಬೀಚ್ ಮತ್ತು ಲೈಟ್‌ಹೌಸ್‌ನ ಸುತ್ತಮುತ್ತಲಿನಲ್ಲಿ ಅಗತ್ಯವುಳ್ಳ ವಿವಿಧ ಸೌಕರ್ಯಗಳ ಸಹಿತವಾಗಿ ಪ್ರವಾಸಿಗರನ್ನು ಸೆಳೆಯುವ ಇತರ ಕೆಲವೊಂದು ಸೌಕರ್ಯಗಳೂ ಜೋಡಣೆಯಾಗಿರುವುದರಿಂದ ಪ್ರವಾಸಿಗರು ಮತ್ತೆ ಕಾಪು ಬೀಚ್‌ನತ್ತ ಮರಳುವಂತಾಗಿದೆ.

ಬೀಚ್‌ನಲ್ಲಿ ಸಂಜೆ ವೇಳೆ ಹೆಚ್ಚುತ್ತಿದೆ ಜನಸಂದಣಿ : ಅದರ ಜೊತೆಗೆ ವಿಽಸಲಾಗಿದ್ದ ರಾಜ್ಯಾದ್ಯಂತ ಕೊರೊನಾ ಕಾರಣದ ನಿರ್ಬಂಧಗಳು ಕೂಡಾ ಒಂದೊಂದಾಗಿ ತೆರವಾಗಿದ್ದು ಕಾಪು ಬೀಚ್‌ನಲ್ಲಿ ನಿಂತು ಹೋಗಿದ್ದ ಬಹುತೇಕ ಚಟುವಟಿಕೆಗಳು, ಅಂಗಡಿಗಳು ಕೂಡಾ ಒಂದೊಂದಾಗಿ ತೆರೆದುಕೊಂಡಿವೆ. ಇದರಿಂದಾಗಿ ಕಳೆದ ಒಂದು ವಾರದಿಂದೀಚೆಗೆ ಕಾಪು ಬೀಚ್‌ಗೆ ಆಗಮಿಸುವ ಸ್ಥಳೀಯ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ವಿಹಾರಾರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ಎರಡು ವಾರಗಳಿಂದೀಚಿಗೆ ವಾರಾಂತ್ಯದಲ್ಲಿ ಬೀಚ್‌ಗೆ ಬರುವ ಹೊರ ಜಿಲ್ಲೆಗಳು, ಹೊರ ರಾಜ್ಯಗಳ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ಶನಿವಾರ ಮತ್ತು ರವಿವಾರ ಸಂಜೆ ಬೀಚ್‌ನಲ್ಲಿ ಹೆಚ್ಚಿನ ಜನಸಂದಣಿ ಕಂಡು ಬರುತ್ತಿದೆ.

ನಿಂತು ಹೋಗಿದ್ದ ಚಟುವಟಿಕೆಗಳು ಪುನರಾರಂಭ : ಕೊರೊನಾ ಕಾರಣದಿಂದ ನಿಂತು ಹೋಗಿದ್ದ ಚಟುವಟಿಕಗಳ ಸಹಿತವಾಗಿ ಪುಟ್ಟ ಮಕ್ಕಳನ್ನು ಸೆಳೆಯುವ ಮನೋರಂಜನಾ ಆಟಿಕೆಗಳು, ಕ್ರೂಸರ್ ಬೈಸಿಕಲ್, ಇನ್‌ಪ್ಲಾಟೇಬಲ್ ಜಂಪಿಂಗ್, ಬಂಗೀ ಜಂಪಿಂಗ್, ಸ್ಕೈ ಜಂಪರ್, ಜಾಲಿ ಬೈಕ್ ರೈಡಿಂಗ್, ಗಾಳಿಪಟ ಮಾರಾಟ ಮತ್ತು ಹಾರಾಟ ಮೊದಲಾದ ಮನೋರಂಜನಾ ಚಟುವಟಿಕೆಗಳು ಪುನರಾರಂಭಗೊಂಡಿದ್ದು ಬೀಚ್‌ಗೆ ಬರುವ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುತ್ತಿವೆ. ಬೀಚ್ ವಾಟರ್ ಸ್ಪೋರ್ಟ್ಸ್ ಸಹಿತವಾದ ವಿವಿಧ ಚಟುವಟಿಕೆಗಳು ಕೆಲವೇ ದಿನಗಳಲ್ಲಿ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ.

ಪಾರಂಪರಿಕ ತಾಣ ಕಾಪು ಲೈಟ್‌ಹೌಸ್‌ಗೆ 120 ವರ್ಷ ಪೂರ್ಣಗೊಳ್ಳುತ್ತಿದ್ದು ಮೂಲ ಸೌಕರ್ಯಗಳ ಜೋಡಣೆ ಮತ್ತು ಕೊರೊನಾ ಕಾರಣದಿಂದಾಗಿ ಮಕ್ಕಳ ಸೆಳೆಯುವ ಆಟಿಕೆ ಸೌಲಭ್ಯಗಳೊಂದಿಗಿನ ಚಟುವಟಿಕೆಗಳು ನಿಂತು ಹೋಗಿರುವುದರಿಂದ ಬೀಚ್‌ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣೀಯವಾಗಿ ಇಳಿಮುಖಗೊಂಡಿರುವುದರ ಬಗ್ಗೆ ಉದಯವಾಣಿ ಸುದಿನದಲ್ಲಿ ಸೆ.17 ವಿಶೇಷ ಲೇಖನ ಪ್ರಕಟಗೊಂಡಿತ್ತು. ಸುದಿನದಲ್ಲಿ ಲೇಖನ ಪ್ರಕಟಗೊಂಡ 10 ದಿನದಲ್ಲಿ ವಿವಿಧ ಮನೋರಂಜನಾ ಚಟುವಟಿಕೆಗಳು ಮತ್ತೆ ಪ್ರಾರಂಭಗೊಳ್ಳುತ್ತಿರುವುದು ಪ್ರವಾಸಿಗರಲ್ಲಿ ಸಂತಸ ಮೂಡಿಸಿದೆ.

ಟಾಪ್ ನ್ಯೂಸ್

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

5-katapady

Katapady: ಕುಂತಳನಗರ ಭಾರತಿ ಹಿ. ಪ್ರಾ. ಶಾಲೆ; ಶತಮಾನೋತ್ಸ ವ ಸಮಾರಂಭಕ್ಕೆ ಚಾಲನೆ

4-katapady

ಶ್ರೀಕ್ಷೇತ್ರ ಪೇಟೆಬೆಟ್ಟು ಕಟಪಾಡಿ- ಜ.4,5: ಬಬ್ಬುಸ್ವಾಮಿ, ಪರಿವಾರ ದೈವಗಳ ನೇಮೋತ್ಸವ

1-magu

Manipal; ಝೀರೋ ಟ್ರಾಫಿಕ್‌ನಲ್ಲಿ ಮಗು ಬೆಂಗಳೂರಿಗೆ : ಈಶ್ವರ ಮಲ್ಪೆ ನೆರವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

9-ckm

Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.