ಕಾಪು ಪೇಟೆ: ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದ ಬುಲೆಟ್‌ಗಳಿಗೆ ದಂಡ
Team Udayavani, Mar 19, 2019, 1:00 AM IST
ಕಾಪು: ಹೆಚ್ಚುವರಿ ಸೈಲೆನ್ಸರ್ ಅಳವಡಿಸಿಕೊಂಡು, ಕರ್ಕಶ ಶಬ್ದದೊಂದಿಗೆ ಕಾಪು ಪೇಟೆಯಲ್ಲಿ ಓಡಾಡುತ್ತಿದ್ದ ಬುಲೆಟ್‌ಗಳನ್ನು ಪತ್ತೆ ಹಚ್ಚಿ, ಸವಾರರಿಗೆ ದಂಡ ವಿಧಿಸಿದ ಘಟನೆ ಸೋಮವಾರ ನಡೆದಿದೆ.
ಪ್ರಾದೇಶಿಕ ಸಾರಿಗೆ ಇಲಾಖೆಯ ಪರವಾನಿಗೆ ರಹಿತವಾಗಿ ಹೆಚ್ಚುವರಿಯಾಗಿ ಸೈಲೆನ್ಸರ್ ಅಳವಡಿಸಿ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದ 6 ಬುಲೆಟ್‌ಗಳನ್ನು ಪತ್ತೆ ಹಚ್ಚಿದ ಕಾಪು ಪೊಲೀಸರು ಅವರಿಂದ 6,600 ರೂ. ದಂಡ ವಸೂಲಿ ಮಾಡಿದ್ದಾರೆ.
ಸೈಲೆನ್ಸರ್ ಅಳವಡಿಕೆ: ಎಚ್ಚರಿಕೆ
ಕಾಪು ಎಸ್ಸೆ ನವೀನ್ ಎಸ್. ನಾಯಕ್ ಅವರು ಬುಲೆಟ್ ಸವಾರರನ್ನು ಠಾಣೆಗೆ ಕರೆಯಿಸಿಕೊಂಡು ಠಾಣೆಯಲ್ಲೇ ಮೆಕ್ಯಾನಿಕ್ ಮೂಲಕ ಸೈಲೆನ್ಸರ್‌ಗಳನ್ನು ಕಿತ್ತು ತೆಗೆದು, ಒರಿಜಿನಲ್ ಸೈಲೆನ್ಸರ್‌ಗಳನ್ನು ಅಳವಡಿಸಿ, ಎಚ್ಚರಿಕೆ ನೀಡಲಾಗಿದೆ.
ಆಧುನಿಕ ಮಾದರಿಯ ಡಬ್ಲೂ.ಬಿ.ಇ. ಮತ್ತು ರಾಕೆಟ್ ಸೈಲೆನ್ಸರ್‌ಗಳನ್ನು ಬುಲೆಟ್‌ಗಳಿಗೆ ಹಾಕಿಕೊಂಡು ಶಬ್ದ ಮಾಲಿನ್ಯ ಉಂಟು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಕಾಪು ಠಾಣಾಧಿಕಾರಿ ನವೀನ್ ಎಸ್. ನಾಯಕ್ ತಿಳಿಸಿದ್ದಾರೆ.
ಕಾಪು ಕ್ರೈಂ ಎಸ್ಸೆ ಜಾನಕಿ, ಪ್ರೊಬೆಷನರಿ ಎಸ್ಸೆ ಸದಾಶಿವ, ಎಎಸ್‌ಐ ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಸವಾರರಿಂದ ಆಕ್ರೋಶ
ಬುಲೆಟ್‌ಗಳಿಗೆ ಅತ್ಯಾಧುನಿಕ ಶೈಲಿಯ ಸೈಲೆನ್ಸರ್‌ಗಳನ್ನು ಅಳವಡಿಸಿರುವುದರ ವಿರುದ್ಧ ಪೊಲೀಸರು ನಡೆಸಿದ ತುರ್ತು ಕಾರ್ಯಾಚರಣೆಯ ಬಗ್ಗೆ ಬುಲೆಟ್ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಲೆಟ್‌ಗಳಿಗೆ ಅಳವಡಿಸಿದ ಸೈಲೆನ್ಸರ್‌ಗಳನ್ನು ತೆಗೆಯುವ ಬದಲು ಅದನ್ನು ಮಾರಾಟ ಮಾಡುವ ಶೋರೂಂಗಳು, ಆಟೋ ಮೊಬೈಲ್ ಅಂಗಡಿಗಳು, ಫಿಟ್ಟಿಂಗ್ ಸೆಂಟರ್‌ಗಳಿಗೆ ಧಾಳಿ ಮಾಡಿ, ಅವರಿಗೇ ಎಚ್ಚರಿಕೆ ನೀಡಿದಲ್ಲಿ ಆಗ ನಮಗಾಗುವ ನಷ್ಟವನ್ನು ತಪ್ಪಿಸಲು ಸಾಧ್ಯವಿದೆ ಎಂಬ ಆಭಿಪ್ರಾಯ ಸಾಮೂಹಿಕವಾಗಿ ಕೇಳಿ ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.