ಕಾಪು: ಚಂಡಮಾರುತ ಆಶ್ರಯತಾಣ ಶೀಘ್ರ ಲೋಕಾರ್ಪಣೆ
Team Udayavani, Mar 14, 2019, 1:00 AM IST
ಕಾಪು : ವಿಶ್ವ ಬ್ಯಾಂಕ್‌ನ ಅನುದಾನಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಯೋಗದಲ್ಲಿ ಕಾಪುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ 2.45 ಕೋ. ರೂ. ವೆಚ್ಚದ ಚಂಡಮಾರುತ ಆಶ್ರಯತಾಣ (ಸೈಕೋÉನ್ ಶೆಲ್ಟರ್) ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ.
ಕಾಪು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಾಮಗಾರಿ ನಡೆದಿದೆ. ರಾಜ್ಯದ ಕರಾವಳಿ ತೀರದ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಆರು ಕಡೆಗಳಲ್ಲಿ ಇಂತಹ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ.
ಟೂ ಇನ್ ವನ್ ಯೋಜನೆ
ಕಾಪುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಚಂಡ ಮಾರುತದ ಆಶ್ರಯ ತಾಣ ಕಟ್ಟಡವು ಟೂ ಇನ್ ವನ್ ಯೋಜನೆಯಾಗಿದೆ. ಚಂಡ ಮಾರುತ – ಸುನಾಮಿ ಕಾಣಿಸಿಕೊಂಡ ಸಂದರ್ಭದಲ್ಲಿ ಇಲ್ಲಿನ ಕಟ್ಟಡವು ಕರಾವಳಿ ತೀರದ ಜನರಿಗೆ ಆಶ್ರಯತಾಣವಾಗಿ ಉಪಯೋಗಕ್ಕೆ ನೀಡ ಬಹುದಾಗಿದ್ದು, ಉಳಿದ ಸಮಯಗಳಲ್ಲಿ ಈ ಕಟ್ಟಡವನ್ನು ಸ್ಥಳೀಯ ಸರಕಾರಿ ಮಾದರಿ ಹಿ.ಪ್ರಾ. ಶಾಲೆಯ ಶಾಲಾ ಕೊಠಡಿಯನ್ನಾಗಿ ಬಳಸಿಕೊಳ್ಳಲು ಅವಕಾಶವಿದೆ.
ಕಟ್ಟಡದ ವೈಶಿಷ್ಟ
ಪ್ರಾಕೃತಿಕ ವಿಕೋಪ, ಚಂಡಮಾರುತದ ವೇಳೆ ನಿರಾಶ್ರಿತರಾಗುವ ಜನರಿಗೆ ತುರ್ತು ವಾಸಕ್ಕಾಗಿ ಮತ್ತು ಗಂಜಿ ಕೇಂದ್ರದ ಮಾದರಿಯಲ್ಲಿ ಉಪಯೋಗಿಸಲು ಈ ಕಟ್ಟಡ ಸಹಕಾರಿಯಾಗಲಿದೆ. ನೆಲ ಮತ್ತು ಮೊದಲ ಮಹಡಿಯ ಅಂತಸ್ತನ್ನು ಹೊಂದಿರುವ ಕಟ್ಟಡದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತೇÂಕ ಕೊಠಡಿಗಳು ಇರಲಿವೆ. ನೆಲಮಹಡಿ ಮತ್ತು ಮೊದಲನೇ ಮಹಡಿಯಲ್ಲಿ ತಲಾ 8 ಶೌಚಾಲಯಗಳಿದ್ದು, ತಲಾ 2 ಬಾತ್ ರೂಂಗಳಿವೆ. ಪ್ರತ್ಯೇಕ ಭೋಜನ ಶಾಲೆಯೂ ಇಲ್ಲಿದೆ.
ಅತ್ಯಾಧುನಿಕ ಮಾದರಿಯ ಕಟ್ಟಡ
ಚಂಡ ಮಾರುತದ ಆಶ್ರಯ ತಾಣದಲ್ಲಿ ಒಮ್ಮೆಗೆ 750ಕ್ಕೂ ಅಧಿಕ ಮಂದಿ ಆಶ್ರಯ ಪಡೆಯಬಹುದಾಗಿದ್ದು ವೃದ್ಧರಿಗೆ ಮತ್ತು ವಿಶೇಷ ಚೇತನರಿಗೆ ನೆಲಮಹಡಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಇದೆ. ವಿದ್ಯುತ್ ಬಳಕೆಗಾಗಿ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. ಜನರೇಟರ್, ಕಟ್ಟಡದ ಸುತ್ತಲೂ ಆವರಣ ಗೋಡೆ, ಒಳ ಚರಂಡಿ ವ್ಯವಸ್ಥೆ, ಇಂಟರ್‌ಲಾಕ್ ಹಾಗೂ ಭಾರೀ ಸಾಮರ್ಥ್ಯದ ಅಂಡರ್‌ಗ್ರೌಂಡ್ ವಾಟರ್ ಟ್ಯಾಂಕ್‌ನ್ನು ನಿರ್ಮಿಸಲಾಗಿದೆ.
ತುರ್ತು ರಕ್ಷಣೆಗೆ ವಿಶೇಷ ಆದ್ಯತೆ
ಚಂಡ ಮಾರುತ ಆಶ್ರಯ ತಾಣ ಅತ್ಯಾಧುನಿಕ ವೈಜ್ಞಾನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ನಿರಾಶ್ರಿತರ ತುರ್ತು ರಕ್ಷಣೆ, ಆಶ್ರಯ ಇದರ ಉದ್ದೇಶ. ಮೇ ತಿಂಗಳ ಅಂತ್ಯದಲ್ಲಿ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ.
-ಮಿಥುನ್ ಪಿ. ಶೆಟ್ಟಿ, ಸಹಾಯಕ ಇಂಜಿನಿಯರ್, ಪಿಡಬ್ಲೂಡಿ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.