ಕಾಪು ಪಿಲಿಕೋಲಕ್ಕೆ ಮುಹೂರ್ತ ನಿಗದಿ : ಮೇ 14 ರಂದು ನಡೆಯಲಿದೆ ದ್ವೈವಾರ್ಷಿಕ ಪಿಲಿಕೋಲ
Team Udayavani, May 10, 2022, 10:32 PM IST
ಕಾಪು : ಮುಂದಿನ ಶನಿವಾರ (ಮೇ 14) ಕಾಪುವಿನಲ್ಲಿ ನಡೆಯಲಿರುವ ದ್ವೈವಾರ್ಷಿಕ ಕಾಪುದ ಪಿಲಿಕೋಲಕ್ಕೆ ಪೂರ್ವಭಾವಿಯಾಗಿ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಂಗಳವಾರ ಪ್ರಾರ್ಥನೆಯೊಂದಿಗೆ ಅಭಯ ಪ್ರಸಾದ ಪಡೆಯಲಾಯಿತು.
ಇತಿಹಾಸ ಪ್ರಸಿದ್ಧವಾಗಿರುವ ಕಾಪುವಿನ ಪಿಲಿಕೋಲದಲ್ಲಿ ಭೂತ ನರ್ತಕ (ಪಿಲಿ ವೇಷಧಾರಿ) ಯಾರು ಎನ್ನುವುದು ಹಳೇ ಮಾರಿಯಮ್ಮ ದೇವಿಯ ಸನ್ನಿಽಯಲ್ಲಿ ನಿರ್ಧಾರವಾಗುತ್ತದೆ. ಪಿಲಿಕೋಲ ನಡೆಯುವ ಮುಂಚಿನ ಮಂಗಳವಾರ ಮೂರೂ ಮಾರಿಗುಡಿಗಳಿಗೆ ತೆರಳಿ ಮಾರಿಯಮ್ಮನ ಅಭಯ ಪಡೆಯುವ ಸಂಪ್ರಧಾಯವಿದೆ.
ಪಿಲಿಕೋಲದ ಸಿದ್ಧತೆಯಲ್ಲಿರುವ ಕಾಪುವಿನ ಶ್ರೀ ಬ್ರಹ್ಮಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದ ಆಡಳಿತ ಮಂಡಳಿ, ಕಾಣಿಕೆ ಮನೆತನದವರು, ಗುರಿಕಾರರು ಮತ್ತು ಹತ್ತು ಸಮಸರು ಜೊತೆಗೂಡಿ ಮಂಗಳವಾರ ಕಾಪು ಹಳೇ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗೆ ತೆರಳಿ ಮಾರಿಯಮ್ಮ ದೇವಿಯ ಬಳಿ ಪ್ರಾರ್ಥನೆ ಸಲ್ಲಿಸಿದರು.
ಮೂರೂ ಮಾರಿಗುಡಿಗಳಲ್ಲೂ ಪ್ರಾರ್ಥನೆ ಸಲ್ಲಿಸಿದ ಬಳಿಕ, ಪಿಲಿ ಭೂತದ ನರ್ತಕನಿಗೆ ಮಾರಿಯಮ್ಮ ದೇವಿಯ ದರ್ಶನ ಪಾತ್ರಿಯು ಪಿಲಿ ಕೋಲ ಸುಸೂತ್ರವಾಗಿ ನಡೆಯಲಿ ಎಂಬ ಅಭಯ ಪ್ರಸಾದವನ್ನು ನೀಡಿ, ಸಂಪ್ರಧಾಯ ಬದ್ಧವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವಂತೆ ಸೂಚನೆ ನೀಡಲಾಗುತ್ತದೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ : ಜೀವಂತ ಉಡಗಳ ಮಾರಾಟ ಯತ್ನ, ಮೂರು ಆರೋಪಿಗಳ ಬಂಧನ
ಕಾಪುವಿನಲ್ಲಿ ದ್ವೈ ವಾರ್ಷಿಕವಾಗಿ ನಡೆಯುವ ಪಿಲಿಕೋಲವು ಧಾರ್ಮಿಕ ಮತ್ತು ಜನಪದ ಆಚರಣೆಗಳ ಜೀವಂತ ಉದಾಹರಣೆಯಾಗಿದ್ದು, ಪಿಲಿ ಕೋಲದ ಮೂಲಕವಾಗಿ ತುಳುನಾಡಿನ ಸಂಸ್ಕೃತಿ, ಸಂಪ್ರಧಾಯ, ನಂಬಿಕೆ, ನಡವಳಿಕೆ ಸಹಿತವಾಗಿ ಸತ್ಯದ ಅನಾವರಣಗೊಳ್ಳುತ್ತದೆ. ಅದಕ್ಕೆ ಪೂರ್ವದಲ್ಲಿ ಮೂರೂ ಮಾರಿಗುಡಿಗೂ ತೆರಳಿ ಪಿಲಿ ಕೋಲ ಸುಸೂತ್ರವಾಗಿ ನಡೆಯುವಂತಾಗಲು ಉತ್ತಮ ಪ್ರಸಾದ ನೀಡುವಂತೆ ಪ್ರಾರ್ಥಿಸುವುದಕ್ಕಾಗಿ ಮಾರಿಯಮ್ಮನ ಸನ್ನಿಧಿಗೆ ಆಗಮಿಸಿದ್ದೇವೆ. ಇಲ್ಲಿ ಒಳ್ಳೆಯ ಪ್ರಸಾದ ಸಿಕ್ಕಿದೆ. ಐದು ದಿನಗಳ ಜಾತ್ರೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಡುವುದಾಗಿ ಮಾರಿಯಮ್ಮ ದೇವಿಯ ಅಭಯ ದೊರಕಿದೆ ಎಂದು ದೊರೆಕಳಗುತ್ತು ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.