ಕಾಪು ಪೊಲೀಸರ ಯಶಸ್ವಿ ಕಾರ್ಯಾಚರಣೆ: 6 ಲಕ್ಷ ರೂ. ದೋಚಿದ್ದ ಕಳ್ಳ ಆಂಧ್ರಪ್ರದೇಶದಲ್ಲಿ ಸೆರೆ
Team Udayavani, Feb 24, 2023, 5:35 AM IST
ಕಾಪು: ಗ್ರಾಹಕರ ಸೋಗಿನಲ್ಲಿ ಖರೀದಿಗೆಂದು ಬಂದು ಅಂಗಡಿ ಮಾಲಕನ ಗಮನ ಬೇರೆಡೆಗೆ ಸೆಳೆದು 6 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದ ತಂಡದಲ್ಲಿದ್ದ ಓರ್ವನನ್ನು ಕಾಪು ಪೋಲಿಸರು ಆಂಧ್ರಪ್ರದೇಶ ರಾಜ್ಯದ ಮದನಪಲ್ಲಿಯಲ್ಲಿ ಬಂಧಿಸಿ ಕರೆತಂದಿದ್ದಾರೆ.
ಆಂಧ್ರಪ್ರದೇಶದ ಸುನಿಲ್ (29) ಬಂಧಿತ ಆರೋಪಿ. ಕಳೆದ ಡಿ. 22ರಂದು ರಾತ್ರಿ ಕಾಪು ಮಹಾಲಸಾ ಸ್ಟೋರ್‌ನ ಮಾಲಕ ರಾಘವೇಂದ್ರ ಕಿಣಿ ಅವರು ಅಂಗಡಿ ಮುಚ್ಚುತ್ತಿದ್ದರು. ಈ ವೇಳೆ ಗ್ರಾಹಕರಂತೆ ಮೂರು ಜನ ಬಂದು ಹಾಲು ಕೊಡುವಂತೆ ಕೇಳಿದ್ದರು.
ಆ ವೇಳೆ ಮಾಲಕ ಅಂಗಡಿಯ ಒಳಹೋಗಿ ಹಾಲಿನ ಸ್ಯಾಚೆಟ್ ತಂದುಕೊಟ್ಟಿದ್ದರು. ಈ ಸಂದರ್ಭವನ್ನು ಬಳಸಿಕೊಂಡಿದ್ದ ಕಳ್ಳರ ಸೋಗಿನಲ್ಲಿದ್ದ ಗ್ರಾಹಕರು ಅಂಗಡಿ ಬಳಿಯೇ ನಿಲ್ಲಿಸಿದ್ದ ಮಾಲಕನ ಸ್ಕೂಟರ್‌ನಲ್ಲಿಟ್ಟಿದ್ದ 6 ಲಕ್ಷ ರೂ. ನಗದನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಅಂಗಡಿ ಮಾಲಕರು ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಕಾರ್ಯಾಚರಣೆಯಲ್ಲಿ ಕಾಪು ಠಾಣಾ ಎಎಸ್‌ಐ ದಯಾನಂದ ಹಾಗೂ ಕಾಪು ಠಾಣಾ ಸಿಬಂದಿ ಗಣೇಶ್ ಹಾಗೂ ಶಿರ್ವ ಠಾಣಾ ಸಿಬಂದಿ ರಾಘವೇಂದ್ರ ಪಾಲ್ಗೊಂಡಿದ್ದರು.
ಅಂತಾರಾಜ್ಯ ತಂಡದವರು
ಚಿತ್ರದುರ್ಗದಲ್ಲಿ ವಾಸವಿದ್ದ ಅಂತಾರಾಜ್ಯ ತಂಡದ ಮೂವರನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದರು. ಈ ಪೈಕಿ ಇಬ್ಬರು ಜಾಮೀನು ಪಡೆದು ತಲೆಮರೆಸಿಕೊಂಡಿದ್ದರು. ಓರ್ವ ಆರೋಪಿ ಸುನಿಲ್ ಪೋಲಿಸ್ ಕಸ್ಟಡಿಯಲ್ಲಿದ್ದ. ಈ ಮಾಹಿತಿ ಪಡೆದ ಕಾಪು ಪೋಲಿಸರು ಅಲ್ಲಿಗೆ ತೆರಳಿ ಆರೋಪಿಯನ್ನು ತಮ್ಮ ವಶಕ್ಕೆ ಪಡೆದು ಕರೆತಂದಿದ್ದಾರೆ. ಆರೋಪಿಗಳು ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಹಲವಾರು ಕಳ್ಳತನ ಪ್ರಕರಣಗಳ ಆರೋಪಿಗಳಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.