ತಾಲೂಕು ಆಸ್ಪತ್ರೆಯಾದರೆ ಗ್ರಾಮೀಣ ಜನತೆಗೆ ಉಪಕಾರ

Team Udayavani, Mar 15, 2018, 6:15 AM IST

1303Kpe1a.jpg

ಕಾಪು ಪುರಸಭೆಯಾಗಿದ್ದರೂ ಇನ್ನೂ ಇಲ್ಲಿ ಪ್ರಾಥಮಿಕ ಕೇಂದ್ರ ಮಾತ್ರವೇ ಇದ್ದು ಸೌಲಭ್ಯ ಕೊರತೆಗಳಿಂದ, ಸಿಬಂದಿ ಕೊರತೆಯಿಂದ ಬಳಲುತ್ತಿದೆ. ತಾಲೂಕಾದ ಬಳಿಕ 100 ಹಾಸಿಗೆಗಳ ಸುಸಜ್ಜಿತ ತಾಲೂಕು ಆಸ್ಪತ್ರೆ ಸ್ಥಾಪನೆಯ ನಿರೀಕ್ಷೆ ಜನರದ್ದು. ಇದರಿಂದ ಚಿಕಿತ್ಸೆಗೆ ವೃಥಾ ಅಲೆದಾಟ ತಪ್ಪೀತು ಎಂಬ ಆಶಾಭಾವನೆಯಿದೆ.

ಕಾಪು: ತಾಲೂಕು ಕೇಂದ್ರವಾಗಿರುವ ಕಾಪು ಆರೋಗ್ಯ ಕ್ಷೇತ್ರ ಅಭಿವೃದ್ಧಿಯಲ್ಲಿ ವ್ಯಾಪಕ ನಿರೀಕ್ಷೆಯನ್ನು ಹೊಂದಿದೆ. ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರವಿದ್ದು, ಮುಂದಿನ ದಿನಗಳಲ್ಲಿ ಸುಧಾರಿತ ವೈದ್ಯಕೀಯ ಸೇವೆಯ ಆಶಯ ಹೊಂದಿದೆ. 

ಪುರಸಭೆ ರೂಪುಗೊಂಡ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರ ಪುನರ್‌ನಿರ್ಮಾಣಕ್ಕೆ 1.30 ಕೋ. ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಲಾಗಿತ್ತು. ಈಗ ತಾಲೂಕು ಕೇಂದ್ರವಾಗಿರುವ ಹಿನ್ನೆಲೆಯಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.
 
ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಿತಿ
ಪ್ರಸ್ತುತ 6 ಬೆಡ್‌ (3 ಪುರುಷ – 3 ಮಹಿಳೆ) ಗಳ ಸೌಲಭ್ಯಹೊಂದಿದೆ. ನಿತ್ಯ 70ರಿಂದ 80 ಮಂದಿ ರೋಗಿ
ಗಳು ಇಲ್ಲಿಗೆ ತಪಾಸಣೆಗೆ ಆಗಮಿಸುತ್ತಾರೆ. 

ಪ್ರಾ.ಆ. ಕೇಂದ್ರ ವ್ಯಾಪ್ತಿಯಲ್ಲಿ 9 ಉಪ ಆರೋಗ್ಯ ಕೇಂದ್ರಗಳಿದ್ದು ನಾಲ್ಕು ಕಡೆ ಕಟ್ಟಡಗಳಿಲ್ಲ. ಸಿಬಂದಿಯೂ ಇಲ್ಲ.  ಕಾಪು, ಕಾಪು ಪಡು, ಮೂಳೂರು, ಉಳಿಯಾರಗೋಳಿ, ಕೈಪುಂಜಾಲು, ಮಲ್ಲಾರು, ಪಾಂಗಾಳ, ಇನ್ನಂಜೆ, 
ಮಜೂರು, ಪಾದೂರು, ಹೇರೂರು, ಉಚ್ಚಿಲ, ಬೆಳಪು, ಪಣಿಯೂರು ಸಹಿತ ಹಲವು ಪ್ರದೇಶಗಳ ಜನರು ಇಲ್ಲಿನ ಪ್ರಾ.ಆ. ಕೇಂದ್ರವನ್ನು ಅವಲಂಬಿಸಿದ್ದಾರೆ.
 
ಕಳೆದ ಕೆಲ ತಿಂಗಳಿಂದ ಪೂರ್ಣಕಾಲಿಕ ವೈದ್ಯರ ಹುದ್ದೆ ಖಾಲಿಯಿದ್ದು, ಪಡುಬಿದ್ರಿಯ ವೈದ್ಯಾಧಿಕಾರಿ ಚಾರ್ಜ್‌ನಲ್ಲಿದ್ದಾರೆ. ದಿನಕ್ಕೊಬ್ಬ ವೈದ್ಯರು ಬರುವುದ ರಿಂದ ಶಾಶ್ವತ ವೈದ್ಯಾಧಿಕಾರಿಗಳ ಬಗ್ಗೆ ಜನತೆ  ಅಸಮಾಧಾನ ಹೊಂದಿದ್ದಾರೆ. 
 
ತಾಲೂಕು ವ್ಯಾಪ್ತಿಯಲ್ಲಿ 9 ಸರಕಾರಿ ಆಸ್ಪತ್ರೆ 
ಸಮುದಾಯ ಆರೋಗ್ಯ ಕೇಂದ್ರ- ಶಿರ್ವ, ಪ್ರಾ.ಆ. ಕೇಂದ್ರ – ಕಾಪು, ಪಡುಬಿದ್ರಿ, ಮೂಡಬೆಟ್ಟು ಮತ್ತು ಮುದರಂಗಡಿ ಆಯುರ್ವೇದ ಪ್ರಾಥಮಿಕ ಆರೋಗ್ಯ  ಕೇಂದ್ರ – ಪಣಿಯೂರು,  ಪಲಿಮಾರು, ಮಲ್ಲಾರು, ಕುರ್ಕಾಲು . 

ಸಿಬಂದಿ ಕೊರತೆಯೇ ಸಮಸ್ಯೆ 
ತಾಲೂಕು ವ್ಯಾಪ್ತಿಯ ಹೆಚ್ಚಿನ ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆ ವ್ಯಾಪಕವಾಗಿದೆ. ಸಿಬಂದಿಗೆ ವಸತಿ ಸೌಲಭ್ಯದ ಕೊರತೆಯೂ ಇದೆ. ತಾಲೂಕಿನಾದ್ಯಂತ 135 ಹುದ್ದೆಗಳು ಮಂಜೂರಾಗಿದ್ದರೆ, ಅವುಗಳಲ್ಲಿ 72 ಹುದ್ದೆ ಖಾಲಿ ಇವೆ.  

ತಾಲೂಕು ಆಸ್ಪತ್ರೆಯಾದರೆ ಲಾಭ 
ಈಗಿರುವ 6 ಬೆಡ್‌ಗಳ ಆಸ್ಪತ್ರೆಯ ಬದಲಾಗಿ 100 ಹಾಸಿಗೆಯ ಆಸ್ಪತ್ರೆಯಾಗಿ ಪರಿವರ್ತನೆಯಾಗಲು ಅವಕಾಶವಿದೆ. 95 ಪೂರ್ಣಕಾಲಿಕ ಸಿಬಂದಿ ನೇಮಕವಾಗಲಿದ್ದಾರೆ.  ಸ್ಕ್ಯಾನಿಂಗ್‌, ಕಣ್ಣು, ಮೂಗು, ರಕ್ತ ಪರೀಕ್ಷೆ, ಹೆರಿಗೆ ಸೇರಿದಂತೆ ವಿವಿಧ ತಜ್ಞರ ಸೇವೆಗಳು ಲಭ್ಯವಾಗಲಿವೆ.

ಖಾಸಗಿಯವರಿಂದಲೂ ಸೇವೆ  
ಕಾಪು ಪೇಟೆಗೆ ಸನಿಹದ ಕೊಪ್ಪಲಂಗಡಿಯಲ್ಲಿ ಪ್ರಶಾಂತ್‌ ಆಸ್ಪತ್ರೆ, ಕಾಪು ನಸಿಂìಂಗ್‌ ಹೋಂ ಸಾರ್ವಜನಿಕರ ತುರ್ತು ಸೇವೆಗೆ ಲಭ್ಯವಿವೆ. ಇನ್ನು 10ಕ್ಕೂ ಅಧಿಕ ಕ್ಲಿನಿಕ್‌ಗಳು, 4 ಮೆಡಿಕಲ್‌ ಲ್ಯಾಬ್‌ಗಳು, 6 ಮೆಡಿಕಲ್‌ ಶಾಪ್‌ಗ್ಳು ಕ್ಷೇತ್ರದ ಜನರಿಗೆ ವೈದ್ಯಕೀಯ ಸೇವೆ ನೀಡುತ್ತಿವೆ.

ತುರ್ತಾಗಿ ಆಗಬೇಕಾದ್ದೇನು? “
ಗ್ರಾಮೀಣ ಜನರು ಚಿಕಿತ್ಸೆಗಾಗಿ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ.ಇಲ್ಲಿ ತಾಲೂಕು ಆಸ್ಪತ್ರೆಯಾಗುವ ಮೊದಲು ತುರ್ತು ಚಿಕಿತ್ಸೆ, ಒಳರೋಗಿ ಸೌಲಭ್ಯಗಳು ಬೇಕು ಎಂಬ ಬೇಡಿಕೆ ಇದೆ. ಇವುಗಳೊಂದಿಗೆ ಶೀತಲೀಕೃತ ಶವಾಗಾರ, ಎಕ್ಸ್‌ರೇ ಸೌಲಭ್ಯ, ಮಹಿಳಾ ಮತ್ತು ಮಕ್ಕಳ ವಿಭಾಗ, ಸ್ತ್ರೀ ರೋಗ ತಜ್ಞರ ಸಹಿತವಾದ ವಿವಿಧ ಸೌಲಭ್ಯಗಳು ಬೇಕಿವೆ.  

ಸಲಹೆ ನೀಡಿ
“ಪ್ರಗತಿ ಪಥ’ ನಮ್ಮ ಊರಿನ ಪ್ರಗತಿಯ  ಗತಿ ಗುರುತಿಸುವ ಪ್ರಯತ್ನ. ಕಾಪು  ತಾಲೂಕು ಪ್ರಗತಿ ಕುರಿತು ಸಲಹೆಗಳಿದ್ದರೆ ನಮ್ಮ ವಾಟ್ಸಾಪ್‌ ನಂಬರ್‌ 9148594259 ಗೆ ಕಳಿಸಿ. ಸೂಕ್ತವಾದುದನ್ನು ಪ್ರಕಟಿಸುತ್ತೇವೆ. ನಿಮ್ಮ ಹೆಸರು, ಊರು  ಹಾಗೂ  ಭಾವಚಿತ್ರವಿರಲಿ.

– ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

Tragedy: ಬಾಡಿಗೆ ಮನೆಯಲ್ಲಿ ನಾಲ್ವರು ಹೆಣ್ಣುಮಕ್ಕಳು ಸೇರಿ ಒಂದೇ ಕುಟುಂಬದ ಐವರ ಶವ ಪತ್ತೆ…

Tragedy: ಬೆಳ್ಳಂಬೆಳಗ್ಗೆ ಬಾಡಿಗೆ ಮನೆಯಲ್ಲಿ ನಾಲ್ವರು ಹೆಣ್ಣುಮಕ್ಕಳ ಜೊತೆ ತಂದೆಯ ಶವ ಪತ್ತೆ

2-bng

Bengaluru: ಹೂಡಿಕೆ ನೆಪದಲ್ಲಿ 6 ಕೋಟಿ ವಂಚನೆ: 10 ಜನ ಸೆರೆ

Porsche Crash: ಆ ಒಂದು ಘಟನೆಯಿಂದ ಬಾಲಕನಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಸಿಕ್ತಿಲ್ಲ

Porsche Crash: ಆ ಒಂದು ಘಟನೆಯಿಂದ ಬಾಲಕನಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಸಿಕ್ತಿಲ್ಲ

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ

Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ

Andhra-Kalyan–Khandre

Significant Agreement: ವನ-ವನ್ಯಜೀವಿ ಸಂರಕ್ಷಣೆಗೆ ಯತ್ನ: ಸಚಿವ ಈಶ್ವರ ಖಂಡ್ರೆ

HD-Kumaraswamy

Congress Government: ಪೊಲೀಸ್‌ ಅಧಿಕಾರಿಗಳ ವಿರುದ್ಧ ಇಂದು ಎಚ್‌ಡಿಕೆ ದಾಖಲೆ ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ

Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ

Udupi: ತಾಯಿ ಮರಣ ಪ್ರಮಾಣ ಶೂನ್ಯಗೊಳಿಸಲು ಒತ್ತು ನೀಡಿ

Udupi: ತಾಯಿ ಮರಣ ಪ್ರಮಾಣ ಶೂನ್ಯಗೊಳಿಸಲು ಒತ್ತು ನೀಡಿ

Udupi: ಗೀತಾರ್ಥ ಚಿಂತನೆ-48: ಕರ್ಮ ಬಿಡುವಂತಿಲ್ಲ, ಫ‌ಲ ಬಿಡಬಹುದು

Udupi: ಗೀತಾರ್ಥ ಚಿಂತನೆ-48: ಕರ್ಮ ಬಿಡುವಂತಿಲ್ಲ, ಫ‌ಲ ಬಿಡಬಹುದು

Udupi: ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ಪುನರಾರಂಭ

Udupi: ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ಪುನರಾರಂಭ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Tragedy: ಬಾಡಿಗೆ ಮನೆಯಲ್ಲಿ ನಾಲ್ವರು ಹೆಣ್ಣುಮಕ್ಕಳು ಸೇರಿ ಒಂದೇ ಕುಟುಂಬದ ಐವರ ಶವ ಪತ್ತೆ…

Tragedy: ಬೆಳ್ಳಂಬೆಳಗ್ಗೆ ಬಾಡಿಗೆ ಮನೆಯಲ್ಲಿ ನಾಲ್ವರು ಹೆಣ್ಣುಮಕ್ಕಳ ಜೊತೆ ತಂದೆಯ ಶವ ಪತ್ತೆ

2-bng

Bengaluru: ಹೂಡಿಕೆ ನೆಪದಲ್ಲಿ 6 ಕೋಟಿ ವಂಚನೆ: 10 ಜನ ಸೆರೆ

Porsche Crash: ಆ ಒಂದು ಘಟನೆಯಿಂದ ಬಾಲಕನಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಸಿಕ್ತಿಲ್ಲ

Porsche Crash: ಆ ಒಂದು ಘಟನೆಯಿಂದ ಬಾಲಕನಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಸಿಕ್ತಿಲ್ಲ

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ

Coconut: ಅಧಿಕ ಮಳೆ, ರೋಗಬಾಧೆ: ಕೆ.ಜಿ.ಗೆ 50 ರೂ. ಗಡಿ ದಾಟಿದ ತೆಂಗಿನಕಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.