Kaup: ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ: ಸ್ವರ್ಣ ಸಮರ್ಪಣೆಗೆ ಅಮಿತೋತ್ಸಾಹ


Team Udayavani, Oct 25, 2024, 1:50 AM IST

Kaup: ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ: ಸ್ವರ್ಣ ಸಮರ್ಪಣೆಗೆ ಅಮಿತೋತ್ಸಾಹ

ಕಾಪು: ದಕ್ಷಿಣ ಭಾರತದಲ್ಲೇ ಅತ್ಯಪೂರ್ವ ಎಂಬಂತೆ ಸಂಪೂರ್ಣ ಇಳಕಲ್‌ ಕೆಂಪು ಶಿಲೆಯಲ್ಲಿ ನಿರ್ಮಾಣಗೊಂಡಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಸಮರ್ಪಣೆಗೊಳ್ಳಲಿರುವ ನೂತನ ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಸ್ವರ್ಣ ಸಮರ್ಪಣೆಗೆ ಭಕ್ತರಿಂದ ಅಮಿತೋತ್ಸಾಹದ ಸ್ಪಂದನೆ ಸಿಗುತ್ತಿದೆ.

ಗದ್ದುಗೆಯೇ ಪ್ರಧಾನವಾಗಿರುವ ಕಾಪು ಮಾರಿಯಮ್ಮನ ಸನ್ನಿಧಿಯಲ್ಲಿ ಸುಮಾರು 20 ಕೆಜಿ ಚಿನ್ನ ಮತ್ತು 180 ಕೆಜಿ ಬೆಳ್ಳಿಯಲ್ಲಿ ಸ್ವರ್ಣ ಗದ್ದುಗೆ ಸಮರ್ಪಣೆಗೊಳ್ಳಲಿದ್ದು, ಉಡುಪಿಯ ಪ್ರಸಿದ್ಧ ಚಿನ್ನಾಭರಣ ಮಳಿಗೆಯಾದ ಗುಜ್ಜಾಡಿ ಸ್ವರ್ಣ ಜುವೆಲರ್ ಪ್ರೈ. ಲಿಮಿಟೆಡ್‌ನ‌ ಸ್ವರ್ಣೋದ್ಯಮದಲ್ಲಿ ಗದ್ದುಗೆ ನಿರ್ಮಾಣಗೊಳ್ಳಲಿದೆ.

ಸ್ವರ್ಣ ಸಂಗ್ರಹದಲ್ಲಿ ದಾಖಲೆ
ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣ ಸಮಿತಿ ನೇತೃತ್ವದಲ್ಲಿ ಭಕ್ತರಿಂದ ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಣೆಗೆ ಜೂ. 25ರಂದು ಚಾಲನೆ ನೀಡಲಾಗಿತ್ತು. ಅ. 3ರಂದು ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಮುಹೂರ್ತ ನೆರವೇರಿಸಲಾಗಿದೆ.

ಸಮಿತಿಯ ನಿರೀಕ್ಷೆಯನ್ನೂ ಮೀರಿ ಭಕ್ತರಿಂದ ಸುಮಾರು 11 ಕೆಜಿ ಚಿನ್ನ, 36 ಕೆಜಿ ಬೆಳ್ಳಿ ಸಮರ್ಪಣೆಯಾಗಿದ್ದು ಇನ್ನೂ ಸ್ವರ್ಣ ಸಮರ್ಪಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಚಿನ್ನ, ಬೆಳ್ಳಿ ಹಸ್ತಾಂತರ
ಗುಜ್ಜಾಡಿ ಸ್ವರ್ಣ ಜುವೆಲರ್ ನಲ್ಲಿ ಸ್ವರ್ಣ ಗದ್ದುಗೆಯ ಕೆಲಸ ಆರಂಭಗೊಂಡಿದ್ದು, ಅ.24ರಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ನೇತೃತ್ವದಲ್ಲಿ ಸ್ವರ್ಣ ಜುವೆಲರ್ಸ್‌ನ ಪ್ರಬಂಧಕ ಲಕ್ಷಿ$¾à ನಾರಾಯಣ ಮತ್ತು ಸುನಿಲ್‌ ಜಿ. ಅವರಿಗೆ ಚಿನ್ನ ಮತ್ತು ಬೆಳ್ಳಿಯನ್ನು ಹಸ್ತಾಂತರಿಸಲಾಯಿತು.

ಪ್ರಮುಖರಾದ ರಮೇಶ್‌ ಹೆಗ್ಡೆ ಕಲ್ಯಾ, ಕಾಪು ದಿವಾಕರ ಶೆಟ್ಟಿ, ರತ್ನಾಕರ ಶೆಟ್ಟಿ ನಡಿಕೆರೆ, ಮಾಧವ ಆರ್‌. ಪಾಲನ್‌, ಚಂದ್ರಶೇಖರ್‌ ಅಮೀನ್‌, ಜಯರಾಮ್‌ ಆಚಾರ್ಯ, ರಾಧಾರಮಣ ಶಾಸ್ತ್ರಿ, ದಾಮೋದರ ಶರ್ಮಾ, ಗೋವರ್ಧನ್‌ ಸೇರಿಗಾರ್‌ ಮುಂತಾದವರು ಉಪಸ್ಥಿತರಿದ್ದರು.

ಎಲ್ಲವೂ ಅಮ್ಮನ ಪವಾಡ
ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣೆ ಸಮಿತಿಯ ಸ್ವರ್ಣ ಗದ್ದುಗೆಗೆ ಸ್ವರ್ಣ ಸಮರ್ಪಣೆ ಸಂಕಲ್ಪಕ್ಕೆ ಭಕ್ತರಿಂದ ಉತ್ತಮ ಸ್ಪಂದನೆ ದೊರಕಿದೆ. ಸಮಿತಿಯ ನಿರೀಕ್ಷೆ ಮತ್ತು ಆಶಯಕ್ಕೆ ಪೂರಕವಾಗಿ ಪ್ರಪಂಚದಾದ್ಯಂತ ನೆಲೆಸಿರುವ ಕಾಪುವಿನ ಅಮ್ಮನ ಮಕ್ಕಳು ಪ್ರತಿದಿನ ದೇವಿಯ ಸನ್ನಿಧಾನಕ್ಕೆ ಬಂದು ಚಿನ್ನ ಮತ್ತು ಬೆಳ್ಳಿ ನೀಡುತ್ತಿದ್ದಾರೆ. ಈವರೆಗೆ ಸಂಗ್ರಹವಾಗಿರುವ ಚಿನ್ನ, ಬೆಳ್ಳಿ ಹೊಸ ದಾಖಲೆ ಬರೆದಿದ್ದು, ಇದೆಲ್ಲವೂ ಅಮ್ಮನ ಪವಾಡವೇ ಆಗಿದೆ. ಭಕ್ತರು ಇನ್ನೂ ಸ್ವರ್ಣ ಮತ್ತು ಬೆಳ್ಳಿ ಸಮರ್ಪಿಸಬಹುದು ಎಂದು ಸ್ವರ್ಣ ಗದ್ದುಗೆ ಸಮರ್ಪಣೆ ಸಮಿತಿ ಅಧ್ಯಕ್ಷ ರವಿ ಸುಂದರ್‌ ಶೆಟ್ಟಿ ಮುಂಬಯಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

1-bjp

Water pollution; ಮಲಿನ ಯಮುನೆಯಲ್ಲಿ ಮಿಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಪ್ರತಿಭಟನೆ

1-prr

Piracy;ಕಳೆದ ವರ್ಷ 22,400 ಕೋಟಿ ರೂ. ನಷ್ಟ!

1-kashmir

Kashmir; ರಾಜ್ಯ ಸ್ಥಾನಮಾನ ವಾಪಸ್‌ ಮಾಡಿ: ಪ್ರಧಾನಿಗೆ ಒಮರ್‌ ಮನವಿ

Kaup: ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ: ಸ್ವರ್ಣ ಸಮರ್ಪಣೆಗೆ ಅಮಿತೋತ್ಸಾಹ

Kaup: ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ: ಸ್ವರ್ಣ ಸಮರ್ಪಣೆಗೆ ಅಮಿತೋತ್ಸಾಹ

gold

Kerala; ಆಭರಣ ಘಟಕಕ್ಕೆ ದಾಳಿ: ದಾಖಲೆ ಇಲ್ಲದ 104 ಕೆ.ಜಿ. ಚಿನ್ನ ವಶ!

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

Kaup: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Kaup: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Manipal: ಆಟೋ ರಿಕ್ಷಾ ಚಾಲಕ ಸಾವು

Manipal: ಆಟೋ ರಿಕ್ಷಾ ಚಾಲಕ ಸಾವು

Kemmannu: ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅ. 27: “ಶತಾಭಿವಂದನಂ’ ಕೊಡುಗೆ ಅನಾವರಣ

Kemmannu: ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅ. 27: “ಶತಾಭಿವಂದನಂ’ ಕೊಡುಗೆ ಅನಾವರಣ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

1-bjp

Water pollution; ಮಲಿನ ಯಮುನೆಯಲ್ಲಿ ಮಿಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಪ್ರತಿಭಟನೆ

death

Pimpri Chinchwad; ನೀರಿನ ಟ್ಯಾಂಕ್‌ ಕುಸಿತ: 5 ಕಾರ್ಮಿಕರು ಸಾ*ವು

Terror 2

Pakistan; ಖೈಬರ್‌ ಪ್ರಾಂತದಲ್ಲಿ 9 ಭಯೋತ್ಪಾದಕರ ಹ*ತ್ಯೆ

suicide

Ayodhya: ಹೆಚ್ಚುವರಿ ಡೀಸಿ ಅನುಮಾನಾಸ್ಪದ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.