ಕಾಪು ತಾಲೂಕು: ಅಧಿಕೃತ ಕಾರ್ಯಾರಂಭವೊಂದೇ ಬಾಕಿ !


Team Udayavani, Feb 9, 2018, 9:03 PM IST

Kaupu-Taluk-2-9.jpg

ಕಾಪು: ಒಂದೂವರೆ ವರ್ಷದ ಹಿಂದೆ ಪ್ರಾರಂಭಗೊಂಡಿದ್ದ ಕಾಪು ತಾಲೂಕು ರಚನೆ ಹೋರಾಟಕ್ಕೆ ಪೂರಕವಾಗಿ ಸ್ಪಂಧಿಸಿದ್ದ ರಾಜ್ಯ ಸರಕಾರ ಕ್ಷಿಪ್ರ ಪ್ರಸಾದ ರೂಪದಲ್ಲಿ ವರವನ್ನು ಕರುಣಿಸಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾಪು ತಾಲೂಕು ರಚನೆಯನ್ನು ಘೋಷಿಸಿದ್ದು, ಆ ಮೂಲಕ ಕಾಪು ತಾಲೂಕು ರಚನೆಯಾಗಬೇಕೆಂಬ ಕನಸನ್ನು ನನಸಾಗಿಸಿದ್ದರು. ಇದೀಗ ರಾಜ್ಯ ಸರಕಾರ ಕಾಪು ತಾಲೂಕು ರಚನೆ ಸಂಬಂಧಿಯಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಫೆ. 12ರ ಅನಂತರ ಯಾವುದೇ ದಿನಾಂಕದಂದೂ ಕಾಪು ತಾಲೂಕು ಅಧಿಕೃತವಾಗಿ ಉದ್ಘಾಟನೆಗೊಂಡು ತಾಲೂಕು ಅಸ್ತಿತ್ವಕ್ಕೆ ಬರುವ ನಿರೀಕ್ಷೆಯಿದೆ.

ಕಳೆದ ವರ್ಷದ ಬಜೆಟ್‌ನಲ್ಲಿ ಕಾಪು ತಾಲೂಕು ಘೋಷಣೆಯಾದ ಬಳಿಕ ತಾಲೂಕು ಅನುಷ್ಠಾನಕ್ಕೆ ವಿವಿಧ ರೀತಿಯ ಸಿದ್ಧತೆಗಳು ನಡೆದಿದ್ದು, ತಾಲೂಕು ರಚನೆ ಸಂಬಂಧಿ ಆಕ್ಷೇಪಣೆ ಸಲ್ಲಿಕೆ ಮತ್ತು ಸಲಹೆ ನೀಡಿಕೆಗೆ ಜ. 7ರ ವರೆಗೆ ಕಾಲಾವಕಾಶ ನೀಡಿ ಸರಕಾರಿ ಗಜೆಟ್‌ ನೊಟಿ  ಫಿಕೇಷನ್‌ ಹೊರಡಿಸಿತ್ತು. ಆ ಬಳಿಕ ವಿವಿಧ ರೀತಿಯ ಪರಾಮರ್ಶೆಗಳು ನಡೆದಿದ್ದು, ಇದೀಗ 30 ಗ್ರಾಮಗಳನ್ನೊಳಗೊಂಡ ಕಾಪು ತಾಲೂಕು ರಚನೆಯ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರಕಾರ ಜ. 18ರಂದು ಹೊರಡಿಸಿದೆ. ಕಾಪು ತಾಲೂಕಿಗೆ ಹೊಸ ತಹಶೀಲ್ದಾರರ ನೇಮಕವಾಗುವವರೆಗೆ ಉಡುಪಿ ತಹಶೀಲ್ದಾರರೇ ಕಾಪು ತಾಲೂಕಿನ ಪ್ರಭಾರವನ್ನು ವಹಿಸಿಕೊಳ್ಳುವಂತೆ ಸೂಚನೆ ನೀಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.


16 ಗ್ರಾ.ಪಂ., 1 ಪುರಸಭೆ ಸೇರಿ ತಾಲೂಕು ರಚನೆ 

ಕಾಪು ಹೋಬಳಿಯ 16 ಗ್ರಾಮ ಪಂಚಾಯತ್‌ಗಳು ಮತ್ತು ಕಾಪು ಪುರಸಭೆ ಕಾಪು ತಾಲೂಕಿನ ವ್ಯಾಪ್ತಿಗೆ ಬರಲಿದ್ದು, ಇಲ್ಲಿನ ಒಟ್ಟು ಜನಸಂಖ್ಯೆ 1,41,098. ಇದರಲ್ಲಿ ಪುರುಷರು – 66,696, ಮಹಿಳೆಯರು – 74,402. ಗರಿಷ್ಠ 19 ಕಿ.ಮೀ. ಮತ್ತು ಕನಿಷ್ಠ 2 ಕಿ.ಮೀ. ದೂರದ ವ್ಯಾಪ್ತಿಯ ಗ್ರಾಮಗಳು ಕಾಪು ತಾಲೂಕಿನ ವ್ಯಾಪ್ತಿಯೊಳಗಿವೆ. ಉಡುಪಿ ತಾಲೂಕು, ಮಂಗಳೂರು ತಾಲೂಕು, ಕಾರ್ಕಳ ತಾಲೂಕು ಮತ್ತು ಅರಬ್ಬಿ ಸಮುದ್ರ ನೂತನ ಕಾಪು ತಾಲೂಕಿನ ಗಡಿ ಪ್ರದೇಶಗಳಾಗಿವೆ.

ಕಾಪು ಬಂಗ್ಲೆಯಲ್ಲಿ ತಾತ್ಕಾಲಿಕ ತಾಲೂಕು ಕಚೇರಿ
ನೂತನ ಕಾಪು ತಾಲೂಕು ಕಚೇರಿಗೆ ಮಿನಿ ವಿಧಾನಸೌಧ / ಹೊಸ ಕಟ್ಟಡಗಳ ವ್ಯವಸ್ಥೆಯಾಗುವವರೆಗೆ ಕಾಪು ಬಂಗ್ಲೆ ಮೈದಾನದಲ್ಲಿರುವ ಹೋಬಳಿ ಕೇಂದ್ರದ ನಾಡ ಕಚೇರಿ ಬಳಿಯಲ್ಲೇ ತಾತ್ಕಾಲಿಕ ಕಟ್ಟಡ ನಿರ್ಮಿಸಿ ಅಲ್ಲೇ ಹೊಸ ತಾಲೂಕು ಕಚೇರಿಯನ್ನು ಪ್ರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸೂಚನೆ ದೊರಕಿದೆ. ಮಾತ್ರವಲ್ಲದೇ ಈ ಬಗ್ಗೆ ಎಂಜಿನಿಯರ್‌ಗಳು ಬಂದು ಸ್ಥಳ ಪರಿಶೀಲನೆ ಮಾಡಿ, ಕಟ್ಟಡ ನಿರ್ಮಾಣದ ಬಗ್ಗೆ ಚರ್ಚೆ ನಡೆಸಿದ್ದಾರೆ. ಅತೀ 
ಶೀಘ್ರದಲ್ಲಿ ತಾಲೂಕು ಕಚೇರಿಯ ತಾತ್ಕಾಲಿಕ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಾಗುವ ಸಾಧ್ಯತೆಗಳಿವೆ 
ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಕಾಪು ತಾ| ವ್ಯಾಪ್ತಿಯ ಗ್ರಾಮಗಳು
ಕಾಪು ಹೋಬಳಿಯ ಏಣಗುಡ್ಡೆ, ಮೂಡಬೆಟ್ಟು, ಕೋಟೆ, ಮಟ್ಟು, ಉಳಿಯಾರಗೋಳಿ, ಪಡು, ಮೂಳೂರು, ಮಲ್ಲಾರು, ಪಾಂಗಾಳ, ಇನ್ನಂಜೆ, ಕಟ್ಟಿಂಗೇರಿ, ಶಿರ್ವ, ಬೆಳ್ಳೆ, ಕುರ್ಕಾಲು, ಹೇರೂರು, ಮಜೂರು, ಪಾದೂರು, ಸಾಂತೂರು, ಪಿಲಾರು, ಕಳತ್ತೂರು, ಕುತ್ಯಾರು, ನಡ್ಪಾಲು, ಪಾದೆಬೆಟ್ಟು, ಹೆಜಮಾಡಿ, ನಂದಿಕೂರು, ಪಲಿಮಾರು, ತೆಂಕ, ಬಡಾ, ಎಲ್ಲೂರು, ಬೆಳಪು ಗ್ರಾಮಗಳು ನೂತನ ಕಾಪು ತಾಲೂಕಿನ ವ್ಯಾಪ್ತಿಯೊಳಗೆ ಬರಲಿವೆ.

ನೂತನ ತಾ|ಗೆ ಮಂಜೂರಾದ ಹುದ್ದೆ 
ನೂತನ ಕಾಪು ತಾಲೂಕು ಸೇರಿದಂತೆ ರಾಜ್ಯ ಸರಕಾರ ಘೋಷಿಸಿರುವ ನೂತನ ತಾಲೂಕುಗಳ ಪೈಕಿ 40 ತಾಲೂಕಿಗೆ ಹುದ್ದೆಯನ್ನೂ ವಿಂಗಡಿಸಿ ಘೋಷಣೆ ಮಾಡಿದೆ. ಇದರಲ್ಲಿ  ವೃಂದ ಮತ್ತು  ನೇಮಕಾತಿ ನಿಯಮಗಳನ್ವಯ ತಹಶೀಲ್ದಾರ್‌ ಹುದ್ದೆ-2 (ಗ್ರೇಡ್‌-1, ಗ್ರೇಡ್‌-2), ಶಿರಸ್ತೇದಾರ-2, ಪ್ರಥಮ ದರ್ಜೆ ಸಹಾಯಕ-3, ಆಹಾರ ನಿರೀಕ್ಷಕ-1, ದ್ವಿತೀಯ ದರ್ಜೆ ಸಹಾಯಕ-4 ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಬೆರಚ್ಚುಗಾರ-1, ಗ್ರೂಪ್‌ ಡಿ ದರ್ಜೆ ನೌಕರ-3, ವಾಹನ ಚಾಲಕ-1 ಹೀಗೆ 17 ಹುದ್ದೆಗಳನ್ನು ಸೃಜಿಸಿ ಸರಕಾರ ಆದೇಶ ಹೊರಡಿಸಿದೆ.

ಕಂದಾಯ ಸಚಿವರ ಮೂಲಕವೇ ಕಾಪು ತಾಲೂಕಿಗೆ ಚಾಲನೆ 
ಕಾಪು ವಿಧಾನಸಭಾ ಕ್ಷೇತ್ರಕ್ಕೆ ಅಧಿಕೃತ ಐಡೆಂಟಿಟಿ ಬೇಕಿದ್ದು, ಅದಕ್ಕೆ ಅನುಗುಣವಾಗಿ ಕಾಪು ತಾಲೂಕು ಘೋಷಣೆಯಾಗಿದೆ. ನೂತನ ಕಾಪು ತಾಲೂಕಿಗೆ 10 ಕೋ.ರೂ. ವೆಚ್ಚದ ಮಿನಿ ವಿಧಾನಸೌಧ ರಚನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕು ಕೇಂದ್ರ ಅಸ್ತಿತ್ವಕ್ಕೆ ಬಂದ ಕೂಡಲೇ ಬೇಡಿಕೆಗೆ ಅನುಗುಣವಾಗಿ 33 ಸರಕಾರಿ ಇಲಾಖೆಗಳು ಕಾಪುವಿನಲ್ಲೇ ಕಾರ್ಯನಿರ್ವಹಿಸಲಿವೆ. ಇದಕ್ಕೆ ಬೇಕಾದ ಅನುದಾನವೂ ಸರಕಾರ ಮತ್ತದರ ಇಲಾಖೆಗಳಿಂದ ಒದಗಿ ಬರಲಿದೆ. ಪ್ರಸ್ತುತ ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದು, ಇದರ ನಡುವೆ ಕಂದಾಯ ಸಚಿವರನ್ನು ಬರಮಾಡಿಸಿಕೊಂಡು ಅವರಿಂದಲೇ ಕಾಪು ತಾಲೂಕನ್ನು ಅಧಿಕೃತವಾಗಿ ಉದ್ಘಾಟಿಸಲಾಗುವುದು ಎಂದು ಶಾಸಕ ವಿನಯ  ಕುಮಾರ್‌ ಸೊರಕೆ ತಿಳಿಸಿದ್ದಾರೆ. 

ತಾಲೂಕು ಹೋರಾಟಕ್ಕೆ ಸಹಕರಿಸಿದರಿಗೆ ಕೃತಜ್ಞತೆ
ಕಾಪು ತಾ| ಘೋಷಣೆಯಲ್ಲಿ  ವಿನಯಕುಮಾರ್‌ ಸೊರಕೆ ಅವರ ಪಾತ್ರ ಮಹತ್ವದ್ದಾಗಿದೆ. ಶಾಸಕರೇ ಮುತುವರ್ಜಿ ವಹಿಸಿ ತಾಲೂಕು ಹೋರಾಟ ಸಂಬಂಧಿಯಾಗಿ ನಮಗೆಲ್ಲರಿಗೂ ಬೆಂಬಲ ನೀಡಿದ್ದಾರೆ. ಶಾಸಕರ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನದಿಂದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಅತ್ಯಲ್ಪ ಅವಧಿಯ ಹೋರಾಟವಿದ್ದರೂ ಕಾಪುವನ್ನು ತಾಲೂಕನ್ನಾಗಿ ಘೋಷಿಸಿದ್ದಾರೆ. ಕಾಪು ತಾಲೂಕು ರಚನೆ ಸಂಬಂಧಿಯಾಗಿ ನಾವು ನಡೆಸಿದ ಸಭೆ, ಪಾದಯಾತ್ರೆ ಸಹಿತ ವಿವಿಧ ಮಾದರಿಯ ಕಾರ್ಯಕ್ರಮಗಳಿಗೆ ಪಕ್ಷಾತೀತ ಬೆಂಬಲ ದೊರಕಿದ್ದು, ಕಾಪು ತಾಲೂಕು ರಚನೆಗೆ ಕಾರಣವಾದ ಪ್ರತಿಯೊಬ್ಬರಿಗೂ ಹೋರಾಟ ಸಮಿತಿಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೋರಾಟ ಸಮಿತಿಯ ಸಂಚಾಲಕ ಕೆ. ಲೀಲಾಧರ ಶೆಟ್ಟಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Udupi: ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಸಂಭ್ರಮ

Udupi: ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಸಂಭ್ರಮ

Malpe: ಹೊಡೆದಾಟ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

Malpe: ಹೊಡೆದಾಟ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.